Advertisement
ತೊಗರಿ ಬೇಳೆಗೆ 550 ರೂ. ಬೆಂಬಲ ಬೆಲೆ ಹೆಚ್ಚಿಸಲಾಗಿದ್ದು, ಒಟ್ಟು ಬೆಂಬಲ ಬೆಲೆ 7,550 ರೂ.ಗೆ ಏರಿಕೆಯಾಗಿದೆ. ಹರಿಯಾಣ, ಮಹಾರಾಷ್ಟ್ರ, ಝಾರ್ಖಂಡ್ ಮತ್ತು ದಿಲ್ಲಿ ವಿಧಾನಸಭೆ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಕನಿಷ್ಠ ಬೆಂಬಲ ಬೆಲೆಯನ್ನು ಹೆಚ್ಚಿಸಲಾಗಿದೆ ಎನ್ನಲಾಗಿದೆ.
Related Articles
Advertisement
ಕನಿಷ್ಠ ಬೆಂಬಲ ಬೆಲೆಯು ಉತ್ಪಾದನ ವೆಚ್ಚಕ್ಕಿಂತ ಕನಿಷ್ಠ 1.5 ಪಟ್ಟು ಇರಬೇಕು ಎಂದು ಸರಕಾರವು ಸ್ಪಷ್ಟವಾದ ನೀತಿ ನಿರ್ಧಾರವನ್ನು 2018ರ ಬಜೆಟ್‌ನಲ್ಲಿ ಘೋಷಿಸಿತ್ತು. ಅಲ್ಲದೆ ಇತ್ತೀಚೆಗೆ ಉತ್ಪಾದನಾ ವೆಚ್ಚವೂ ಹೆಚ್ಚಳವಾದ ಹಿನ್ನೆಲೆಯಲ್ಲಿ ಸಿಎಸಿಪಿ ನೀಡಿದ ವೈಜ್ಞಾನಿಕ ಶಿಫಾರಸಿನ ಅನುಸಾರ ಕನಿಷ್ಠ ಬೆಂಬಲ ಬೆಲೆಯನ್ನು ಹೆಚ್ಚಿಸಲಾಗಿದೆ ಎಂದು ಸಚಿವರು ತಿಳಿಸಿದರು.
ಯಾವ ಬೆಳೆಗೆ ಎಷ್ಟು “ಬೆಂಬಲ’ ಹೆಚ್ಚಳ?
ಬೆಳೆ ಎಂಎಸ್‌ಪಿ (ಪ್ರತೀ ಕ್ವಿಂಟಾಲ್) ಸಾಮಾನ್ಯ ಭತ್ತ 117 ರೂ., ಹೈಬ್ರಿಡ್ ಬಿಳಿಜೋಳ 191 ರೂ., ಸಜ್ಜೆ 125 ರೂ., ರಾಗಿ 444 ರೂ., ಮೆಕ್ಕೆಜೋಳ 135 ರೂ., ತೊಗರಿಬೇಳೆ 550 ರೂ.ಹೆಸರುಬೇಳೆ 124 ರೂ., ಉದ್ದಿನಬೇಳೆ 450 ರೂ., ನೆಲಗಡಲೆ 406 ರೂ., ಸೂರ್ಯಕಾಂತಿ 520 ರೂ., ಸೋಯಾಬೀನ್(ಹಳದಿ) 292 ರೂ., ಎಳ್ಳು 632 ರೂ., ಹುಚ್ಚೆಳ್ಳು 983 ರೂ., ಹತ್ತಿ 501 ರೂ.