Advertisement

ಕೃಷಿ ಸೊಸೈಟಿಗಳಿಗೆ ಡಿಜಿಟಲ್‌ ಸ್ಪರ್ಶ: ಕಂಪ್ಯೂಟರೀಕರಣಕ್ಕೆ ಕೇಂದ್ರ ಸಚಿವ ಸಂಪುಟ  ಒಪ್ಪಿಗೆ

01:26 AM Jun 30, 2022 | Team Udayavani |

ಹೊಸದಿಲ್ಲಿ: ದೇಶದ ಸಹಕಾರಿ ವಲಯದ ಅತೀ ಸಣ್ಣ ಘಟಕಗಳಾದ ಪ್ರಾಥಮಿಕ ಕೃಷಿ ವಿತರಣ ಸೊಸೈಟಿಗಳನ್ನು (ಪಿಎಸಿಎಸ್‌) ಗಣಕೀಕೃತ ಮಾಡುವ ಮಹತ್ವದ ಪ್ರಸ್ತಾ­ವನೆಗೆ ಬುಧವಾರ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಕೇಂದ್ರ ಸಂಪುಟ ಸಭೆ ಒಪ್ಪಿಗೆ ನೀಡಿದೆ.

Advertisement

63 ಸಾವಿರ ಪಿಎಸಿಎಸ್‌ಗಳನ್ನು 2,516 ಕೋ. ರೂ. ವೆಚ್ಚದಲ್ಲಿ ಕಂಪ್ಯೂಟರೀಕರಣಗೊಳಿಸಲಾಗುತ್ತದೆ. ಕೇಂದ್ರ 1,528 ಕೋ. ರೂ. ನೀಡಲಿದೆ.

ಇದರಿಂದ ಈ ಸೊಸೈಟಿಗಳ ವ್ಯವಹಾರ­ಗಳಲ್ಲಿ ಪಾರದರ್ಶಕತೆ ಹೆಚ್ಚಾಗಿ ಎಲ್ಲ ವ್ಯವಹಾರಗಳೂ ತ್ವರಿತವಾಗಿ ನಡೆಯ­ಲಿದೆ. ದೇಶದ 13 ಕೋಟಿ ಸಣ್ಣ ಹಾಗೂ ಮಧ್ಯಮ ರೈತರಿಗೆ ಅನುಕೂಲವಾಗಲಿದೆ.

ದತ್ತಾಂಶ ಸಂರಕ್ಷಣೆಗೆ ಕ್ರಮ: ಗಣಕೀಕರಣ ವೇಳೆಯಲ್ಲಿ ಎಲ್ಲ ಪಿಎಸಿಎಸ್‌ಗಳಿಗೂ ಹಾರ್ಡ್‌ವೇರ್‌ ನೆರವು ನೀಡಲಾಗುತ್ತದೆ ಹಾಗೂ ಸೊಸೈಟಿಗಳ ವತಿ ಯಿಂದ ಈವರೆಗೆ ನಿರ್ವಹಿಸಲಾಗಿರುವ ಎಲ್ಲ ಲಿಖಿತ ರೂಪದ ವ್ಯವಹಾರ ಗಳನ್ನು ಡಿಜಿಟಲೀಕರಣ ಗೊಳಿಸಲಾಗುತ್ತದೆ. ಇದೊಂದು ಕ್ಲೌಡ್ಆಧಾರಿತ ಸಾಫ್ಟ್‌ವೇರ್.

ಸ್ಥಳೀಯ ಭಾಷೆಯಲ್ಲೇ ವ್ಯವಹಾರ: ಗಣಕೀಕೃತ ಕಾರ್ಯ ಪೂರ್ಣಗೊಂಡ ಬಳಿಕ ಎಲ್ಲ ರಾಜ್ಯಗಳಲ್ಲಿರುವ ಪಿಎಸಿಎ­ಸ್‌ಗಳೂ ಸ್ಥಳೀಯ ಭಾಷೆಯಲ್ಲಿಯೇ ವ್ಯವ­ಹಾರ ನಡೆಸಲು ಅನುಕೂಲವಾಗುವಂಥ ಸಾಫ್ಟ್‌ವೇರ್ ಅಳವಡಿಸಲಾಗುತ್ತದೆ. ಈ ಸಾಫ್ಟ್‌ವೇರ್ ನಡಿಯಲ್ಲಿ ನಿರ್ವಹಿಸಲಾ­ಗುವ ವ್ಯವಹಾರಗಳು ಸೋರಿಕೆಯಾಗ­ದಂತೆ ತಡೆಯಲು ಕ್ಲೌಡ್ ತಂತ್ರಜ್ಞಾನ ಆಧಾರಿತ ಸಂಗ್ರಹಣ ವ್ಯವಸ್ಥೆ ಹಾಗೂ ಸೈಬರ್‌ ಭದ್ರತೆ ಹಾಗೂ ದತ್ತಾಂಶ ಸಂರಕ್ಷಣ ವಿಧಾನಗಳನ್ನು ಅಳವಡಿಸಲಾಗುತ್ತದೆ ಎಂದು ಪ್ರಸ್ತಾವನೆಯಲ್ಲಿ ಸೂಚಿಸಲಾಗಿದೆ.

Advertisement

ನೋಡಲ್‌ ಕೇಂದ್ರವಾಗಿ ಪರಿವರ್ತನೆ: ಪ್ರತಿಯೊಂದು ಪಿಎಸಿಎಸ್‌ ಕೇಂದ್ರವನ್ನು ನೋಡಲ್‌ ಕೇಂದ್ರವನ್ನಾಗಿ ಪರಿವರ್ತಿಸಿ, ಅವುಗಳ ಮೂಲಕ ಖಾತೆಗಳಿಗೆ ನೇರ ಹಣ ವರ್ಗಾವಣೆ (ಡಿಬಿಟಿ), ಬಡ್ಡಿ ಸಹಾಯ ಧನ ಯೋಜನೆ (ಐಎಸ್‌ಎಸ್‌), ಬೆಳೆ ವಿಮಾ ಯೋಜನೆ (ಪಿಎಂಎಫ್ಬಿವೈ) ಹಾಗೂ ರಸಗೊಬ್ಬರ, ಬೀಜ ವಿತರಣೆ ವ್ಯವಹಾರಗಳ ಕೇಂದ್ರವನ್ನಾಗಿಯೂ ಪರಿವರ್ತಿಸಲು ನಿರ್ಧರಿಸಲಾಗಿದೆ.

ಸಹಕಾರಿ ವಲಯದ ಅಭಿವೃದ್ಧಿಗೆ ಪ್ರಧಾನಿಯವರ ಬದ್ಧತೆ ಮೆಚ್ಚುವಂಥದ್ದು. ಈ ಕ್ಷೇತ್ರದ ಬಲವರ್ಧನೆಗಾಗಿ ಅವರು ಪ್ರತ್ಯೇಕ ಇಲಾಖೆಯನ್ನು ಆರಂಭಿಸಿ, ಅನಂತರದಲ್ಲಿ ಅನೇಕ ಗುರುತರ ನಿರ್ಧಾರಗಳನ್ನು ಈ ಕ್ಷೇತ್ರದ ಅಭಿವೃದ್ಧಿಗಾಗಿ ಮೋದಿಯವರು ಕೈಗೊಂಡಿದ್ದಾರೆ. ಆ ಮೂಲಕ ಸಹಕಾರದಿಂದ ಸಮೃದ್ಧಿ ಎಂಬ ತಮ್ಮ ಘೋಷವಾಕ್ಯ ಕೇವಲ ಘೋಷಣೆಗಾಗಿ ಸೀಮಿತವಾಗಿಲ್ಲ ಎಂಬುದನ್ನು ಸಾಬೀತುಪಡಿಸಿದ್ದಾರೆ.
-ಅಮಿತ್‌ ಶಾ, ಕೇಂದ್ರ ಸಹಕಾರಿ ಹಾಗೂ ಗೃಹ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next