Advertisement

ಕೇಂದ್ರ ಸರಕಾರಿ ನೌಕರರಿಗೆ ಸಿಹಿ

12:30 AM Feb 20, 2019 | Team Udayavani |

ಹೊಸದಿಲ್ಲಿ: ಬಹು ದಿನಗಳ ನಿರೀಕ್ಷೆಯಾಗಿದ್ದ ಕೇಂದ್ರ ಸರಕಾರಿ ನೌಕರರ ತುಟ್ಟಿ ಭತ್ತೆಯನ್ನು ಶೇ. 3ರಷ್ಟು ಹೆಚ್ಚಿ ಸಲು ಕೇಂದ್ರ ಸಂಪುಟ ಸಮ್ಮತಿ ಸಿದೆ. ಮಂಗಳವಾರ ಪ್ರಧಾನಿ ಮೋದಿ ನೇತೃತ್ವದಲ್ಲಿ ನಡೆದ ಕೇಂದ್ರ ಸಂಪುಟ ಸಭೆಯಲ್ಲಿ ಈ ಪ್ರಸ್ತಾವನೆಗೆ ಸಮ್ಮತಿಸಲಾಗಿದೆ. 

Advertisement

ಈ ಜ.1ರಿಂದಲೇ ಇದು ಅನ್ವಯಿಸಲಿದ್ದು, 1.1 ಕೋಟಿಯಷ್ಟಿರುವ ಕೇಂದ್ರ ಸರಕಾರಿ ನೌಕರರು, ಪಿಂಚಣಿದಾರರಿಗೆ ನೆರವಾಗಲಿದೆ. ಸಂಪುಟ ಸಭೆ ಬಳಿಕ ಈ ವಿಷಯ ತಿಳಿಸಿದ ಕೇಂದ್ರ ವಿತ್ತ ಸಚಿವ ಜೇಟ್ಲಿ, ಕೇಂದ್ರ ನೌಕರರ ತುಟ್ಟಿ ಭತ್ತೆ ಶೇ. 9ರಿಂದ ಶೇ. 12ಕ್ಕೆ ಏರಲಿದೆ. ಇದು ಕೇಂದ್ರದ 48.41 ಲಕ್ಷ ನೌಕರರಿಗೆ ಹಾಗೂ 62.03 ಲಕ್ಷ ಪಿಂಚಣಿ ದಾರರಿಗೆ ನೆರವಾಗಲಿದೆ. 7ನೇ ವೇತನ ಆಯೋಗದ ಶಿಫಾರಸಿನಂತೆ ಇದನ್ನು ಜಾರಿಗೊಳಿಸಲಾಗುತ್ತಿದೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next