Advertisement

ಕ್ಯಾಬ್‌ ಚಾಲಕರ ಮೊಬೈಲ್‌ ಕದಿಯುತ್ತಿದ್ದವನ ಸೆರೆ

12:30 PM Dec 31, 2017 | Team Udayavani |

ಬೆಂಗಳೂರು: ಓಲಾ ಕ್ಯಾಬ್‌ನಲ್ಲಿ ಗ್ರಾಹಕನಂತೆ ಹೋಗಿ ಚಾಲಕರ ಮೊಬೈಲ್‌ ಕಳವು ಮಾಡುತ್ತಿದ್ದ ಆರೋಪಿಯನ್ನು ವಿಧಾನಸೌಧ ಪೊಲೀಸರು ಬಂಧಿಸಿದ್ದಾರೆ. ಕೋಲಾರ ಮೂಲದ ನಿಶಾಂತ್‌ (28) ಬಂಧಿತ. ಈತನಿಂದ 10 ಮೊಬೈಲ್‌ ವಶಕ್ಕೆ ಪಡೆಯಲಾಗಿದೆ.

Advertisement

ಆರೋಪಿ ಓಲಾ ಕ್ಯಾಬ್‌ ಬುಕ್‌ ಮಾಡಿ, ಕ್ಯಾಬ್‌ನಲ್ಲಿ ಸಂಚರಿಸುತ್ತಿದ್ದ. ಈ ವೇಳೆ ಚಾಲಕರನ್ನು ಪರಿಚಯಸಿಕೊಂಡು ನಿಮ್ಮ ಫೋನ್‌ಗೆ 1 ಜಿಬಿ ಇಂಟರ್‌ನೆಟ್‌ ಪ್ಯಾಕ್‌ ಹಾಕಿಸಿಕೊಂಡು, ಒಂದು ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡರೆ ಒಂದು ಲಕ್ಷ ರೂ. ಗೆಲ್ಲಬಹುದು ಎಂದು ನಂಬಿಸಿ ಮೊಬೈಲ್‌ ಪಡೆದು ಸ್ಥಳದಿಂದ ಪಾರಾರಿಯಾಗುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಯ ಮಾತು ನಂಬಿ ಮೊಬೈಲ್‌ ಕೊಡುತ್ತಿದ್ದ ಕ್ಯಾಬ್‌ ಚಾಲಕರಿಗೆ ಐದು ನಿಮಿಷ ಇಲ್ಲೇ ಇರಿ ಇಂಟರ್‌ನೆಟ್‌ ಪ್ಯಾಕ್‌ ಹಾಕಿಸಿಕೊಂಡು ಬರುತ್ತೇನೆಂದು ಹೇಳುತ್ತಿದ್ದ. ಮೊಬೈಲ್‌ನಲ್ಲಿ ಇಂಟರ್‌ನೆಟ್‌ ಇದೆ ಎಂದರೂ, ಈ ಇಂಟರ್‌ನೆಟ್‌ನಿಂದ ಸಾಧ್ಯವಿಲ್ಲ ಎಂದು ಹೇಳಿ ಮೊಬೈಲ್‌ ಸಮೇತ ಪರಾರಿಯಾಗುತ್ತಿದ್ದ. ಎರಡು ಮೂರು ತಾಸುಗಳ ಕಾಲ ಈತನಿಗಾಗಿ ಚಾಲಕರು ಕಾದ ಬಳಿಕ ತಾವು ಮೋಸ ಹೋದ ವಿಚಾರ ತಿಳಿಯುತ್ತಿತ್ತು.

ಇದೇ ಮಾದರಿಯಲ್ಲಿ ಶನಿವಾರ ವಿಧಾನಸೌಧ ಬಳಿ ವಂಚಿಸಲು ಸಂಚು ರೂಪಿಸುತ್ತಿದ್ದಾಗ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಈತನನ್ನು ಬಂಧಿಸಲಾಗಿದೆ. ನಿಶಾಂತ್‌ ಯಶವಂತಪುರದ ಬಾಡಿಗೆ ಮನೆಯೊಂದರಲ್ಲಿ ವಾಸ ಮಾಡುತ್ತಿದ್ದು, ಐಷಾರಾಮಿ ಜೀವನ ನಡೆಸಲು ಈ ರೀತಿಯ ಕೃತ್ಯವಸಗಿ ಕಳವು ಮೊಬೈಲ್‌ಗ‌ಳನ್ನು ಕಡಿಮೆ ದರಕ್ಕೆ ಮಾರಾಟ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next