Advertisement

CA ಪರೀಕ್ಷೆಗಳ ಫ‌ಲಿತಾಂಶ ಪ್ರಕಟ

12:00 AM Jul 06, 2023 | Team Udayavani |

ಹೊಸದಿಲ್ಲಿ: ದಿ ಇನ್‌ಸ್ಟಿಟ್ಯೂಟ್‌ ಆಫ್ ಚಾರ್ಟರ್ಡ್‌ ಅಕೌಂಟೆಂಟ್ಸ್‌ ಆಫ್ ಇಂಡಿಯಾ (ಐಸಿಎಐ) ಬುಧವಾರ 2023ನೇ ಸಾಲಿನ ಸಿಎ(ಚಾರ್ಟರ್ಡ್‌ ಅಕೌಂಟೆಂಟ್‌) ಇಂಟರ್‌ ಮತ್ತು ಫೈನಲ್‌ ಪರೀಕ್ಷೆಯ ಫ‌ಲಿತಾಂಶವನ್ನು ಪ್ರಕಟಿಸಿದೆ. ಸಿಎ ಇಂಟರ್‌ ಪರೀಕ್ಷೆಯಲ್ಲಿ ಹೈದರಾಬಾದ್‌ನ ವೈ.ಗೋಕುಲ್‌ ಸಾಯಿ ಶ್ರೀಕರ್‌ ಶೇ.86ರಷ್ಟು ಅಂಕಗಳೊಂದಿಗೆ ಪ್ರಥಮ ರ್‍ಯಾಂಕ್‌ ಪಡೆದಿದ್ದಾರೆ.

Advertisement

ಅದೇ ರೀತಿ ಶೇ.85.25ರಷ್ಟು ಅಂಕಗಳನ್ನು ಪಡೆದ ಪಟಿಯಾಲದ ನೂರ್‌ ಸಿಂಗ್ಲಾ ಮತ್ತು ಶೇ.84.75ರಷ್ಟು ಅಂಕಗಳನ್ನು ಪಡೆದ ಮುಂಬಯಿಯ ಕಾವ್ಯ ಸಂದೀಪ್‌ ಕ್ರಮವಾಗಿ ಎರಡನೇ ಮತ್ತು ಮೂರನೇ ರ್‍ಯಾಂಕ್‌ ಪಡೆದಿದ್ದಾರೆ. ಇನ್ನೊಂದೆಡೆ ಸಿಎ ಫೈನಲ್‌ ಪರೀಕ್ಷೆಯಲ್ಲಿ ಶೇ.77ರಷ್ಟು ಅಂಕಗಳನ್ನು ಪಡೆದ ಅಹ್ಮದಾಬಾದ್‌ನ ಜೈನ್‌ ಅಕ್ಷಯ್‌ ರಮೇಶ್‌ ಪ್ರಥಮ ರ್‍ಯಾಂಕ್‌ ಪಡೆದಿದ್ದಾರೆ. ಅದೇ ರೀತಿ ಚೆನ್ನೈಯ ಕಲ್ಪೇಶ್‌ ಜೈನ್‌ (ಶೇ.75.38) ಎರಡನೇ ರ್‍ಯಾಂಕ್‌ ಹಾಗೂ ಹೊಸದಿಲ್ಲಿಯ ಪ್ರಖರ್‌ ವರ್ಣಶೆ (ಶೇ.71.75) ಮೂರನೇ ರ್‍ಯಾಂಕ್‌ ಪಡೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next