Advertisement

ಕಾನೂನು ಪಾಲಿಸದ ಮನಸ್ಥಿತಿಯೇ ನಮ್ಮ ದೇಶವನ್ನು ಹಲವು ತುಂಡು ಮಾಡಿದ್ದು: ಸಿ.ಟಿ.ರವಿ

01:33 PM Feb 16, 2022 | Team Udayavani |

ಬೆಂಗಳೂರು: ಹಿಜಾಬ್ ವಿಚಾರದಲ್ಲಿ ಕಾನೂನು ಪಾಲಿಸಲು ಅವರಿಗೆ ಇಷ್ಟವಿಲ್ಲ ಎನ್ನುವ ಮನಸ್ಥಿತಿಯನ್ನು ತೋರಿಸುತ್ತದೆ. ಈ ಬೆಳವಣಿಗೆಯೇ ನಮ್ಮ ದೇಶವನ್ನು ಹಲವು ತುಂಡು ಮಾಡಿದ್ದು. ಅಫಘಾನಿಸ್ತಾನ ಮಾಡಿದ್ದು, ಪಾಕಿಸ್ತಾನ ಮಾಡಿದ್ದು, ಬಾಂಗ್ಲಾ ಮಾಡಿದ್ದು ಇದೇ ಮನಸ್ಥಿತಿ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿದರು.

Advertisement

ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಈ ದೇಶದಲ್ಲಿ ಅಂಬೇಡ್ಕರ್ ಬರೆದ ಸಂವಿಧಾನವನ್ನು ಪಾಲಿಸುವುದಿಲ್ಲ ಎನ್ನುವುದು ಯಾವ ಮನಸ್ಥಿತಿ? ಇವತ್ತು ಹಿಜಾಬ್ ಬೇಡಿಕೆ ಇಡುತ್ತಾರೆ. ನಾಳೆ ಇನ್ನೊಂದು ಬೇಡುತ್ತಾರೆ. ಕೋರ್ಟ್ ಯಾವುದೇ ರೀತಿಯ ಧಾರ್ಮಿಕ ಸೂಚಿತ ಬಟ್ಟೆಗಳನ್ನು ಹಾಕಬಾರದು ಎಂದು ಹೇಳಿದ ಮೇಲೂ ಈ ರೀತಿಯ ಮನಸ್ಥಿತಿ ಬಹಳ ಅಪಾಯಕಾರಿಯಾಗಿದೆ ಎಂದರು.

ಒಂದು ಸಮುದಾಯದ ವಿದ್ಯಾರ್ಥಿಗಳು ಹಿಜಾಬ್ ಹಾಕಿಕೊಂಡು ಬರಲು ಅವಕಾಶ ನೀಡಿದರೆ ನಾಳೆ ದಿಗಂಬರ ಅನುಯಾಯಿಗಳು, ನಾಗಾ ಸಾಧು ಅನುಯಾಯಿಗಳು ತಮ್ಮ ಹುಟ್ಟುಡುಗೆಯಲ್ಲಿ ಶಾಲೆಗೆ ಬರುತ್ತೇವೆ ಎಂದರೆ ಪರಿಸ್ಥಿತಿ ಏನಾಗುತ್ತದೆ ಯೋಚನೆ ಮಾಡಿ. ಗಾಂಧೀಜಿ ವೇಷದಲ್ಲಿ ಮೇಲಿನ ಬಟ್ಟೆ ಹಾಕಿಕೊಳ್ಳದೆ ಬರುತ್ತೇವೆಂದರೂ ಪರಿಸ್ಥಿತಿ ಏನಾಗಬಹುದು ಆಲೊಚಿಸಿ ಎಂದು ಹೇಳಿದರು.

ಇದನ್ನೂ ಓದಿ:ಚಿಕ್ಕಮಗಳೂರಿನಲ್ಲಿ ಮತ್ತೆ ಭುಗಿಲೆದ್ದ ಹಿಜಾಬ್ ವಿವಾದ: ಪ್ರಾಂಶುಪಾಲರೊಂದಿಗೆ ವಾಗ್ವಾದ

ಹೈಕೋರ್ಟ್ ನಲ್ಲಿ ಅವರಿಗೆ ಹಿನ್ನಡೆಯಾದರೆ ಸುಪ್ರೀಂ ಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ. ಸುಪ್ರೀಂ ಕೋರ್ಟ್ ಏನು ತೀರ್ಪು ಕೊಡುತ್ತದೆ ಅದನ್ನು ಎಲ್ಲರೂ ಪಾಲಿಸಬೇಕಾಗುತ್ತದೆ ಎಂದು ಸಿ.ಟಿ ರವಿ ಹೇಳಿದರು.

Advertisement

ಕೇಸರಿ ಬಾವುಟ ಹಾರಿಸುವ ವಿಚಾರದಲ್ಲಿ ಈಗಾಗಲೇ ಸಚಿವ ಈಶ್ವರಪ್ಪ ಸ್ಪಷ್ಟನೆ ನೀಡಿದ್ದಾರೆ. ಈಶ್ವರಪ್ಪ ಅಪ್ಪಟ ದೇಶ ಭಕ್ತ, ಅದರಲ್ಲಿ ಅನುಮಾನ ಬೇಡ. ನಾವು ಯಾವಾಗಲೂ ರಾಷ್ಟ್ರ ಧ್ವಜಕ್ಕೆ ಮೊದಲ ಆದ್ಯತೆ ನೀಡಿದ್ದೇವೆ. ರಾಷ್ಟ್ರ ಧ್ವಜಕ್ಕಿಂತ ಮೇಲೆ ಭಗವಾ ಧ್ವಜ ಹಾರಬೇಕೆಂದು ಯಾವತ್ತೂ ಹೇಳಿಲ್ಲ. ಆದರೆ, ಭಗವಾಧ್ವಜಕ್ಕೂ ಒಂದು ಸ್ಥಾನ ಇದೆ. ತ್ರಿವರ್ಣ ಧ್ವಜಕ್ಕೂ ಮೊದಲು ದೇಶದಲ್ಲಿ ಕಾಂಗ್ರೆಸ್ ನ ಚರಕ ಇರುವ ಧ್ವಜ ಇತ್ತು, ತ್ರಿವರ್ಣ ಧ್ವಜ ಎಲ್ಲಿಯವರೆಗೆ ಇರುತ್ತದೆಯೋ ಅಲ್ಲಿಯವರೆಗೂ ರಾಷ್ಟ್ರಧ್ವಜ ಅದೇ ಆಗಿರುತ್ತದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next