ಡಿಸೆಂಬರ್ ಅಂದಾಕ್ಷಣ ಗಾಯಕ ಸಿ. ಅಶ್ವತ್ಥ್ರ ಅಗಲಿಕೆ ಕನ್ನಡಿಗರ ಹೃದಯವನ್ನು ಭಾರವಾಗಿಸುತ್ತದೆ. ಆದರೆ, ಆ ದುಃಖವನ್ನು ಈಗ ಮರೆಯುವ ಹೊತ್ತು. ಏಕೆ ಗೊತ್ತಾ? ಸಿ. ಅಶ್ವತ್ಥ್, ಹಾಡುಗಳ ಮೂಲಕ ನಮ್ಮ ಹೃದಯದಲ್ಲಿ ಜೀವಂತವಾಗಿ ನೆಲೆಸಲಿದ್ದಾರೆ.
“ಅವಿರತ’ ಪ್ರತಿಷ್ಠಾನವು ಹತ್ತು ವರ್ಷಗಳನ್ನು ಪೂರೈಸಿದ್ದು, ಈ ನಿಮಿತ್ತ ಏರ್ಪಡಿಸಿರುವ “ಹೆಜ್ಜೆ-ಗೆಜ್ಜೆ-10′ ಎಂಬ ದಶಮಾನೋತ್ಸವದಲ್ಲಿ ಸಿ.ಅಶ್ವತ್ಥ್ರ ಸಿನಿಮಾ ಹಾಡುಗಳ “ಮಧುರಾಶ್ವತ್ಥ’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಗಾಯಕರಾದ ಅಜಯ್ ವಾರಿಯರ್, ಹಡಪದ್, ಕುಮಾರನ್, ವಿನಯ್ ನಾಡಿಗ್, ಎಂ.ಡಿ. ಪಲ್ಲವಿ, ಅನನ್ಯಾ ಭಟ್, ಶ್ವೇತಾ ಪ್ರಭು, ಶ್ರೀಕೃಪಾ ಅವರ ಧ್ವನಿಯಲ್ಲಿ ಅಶ್ವತ್ಥ್ ಅವರ ಮಧುರ ಗೀತೆಗಳನ್ನು ಮೆಲುಕು ಹಾಕಬಹುದು. ನಿವೃತ್ತ ಡಿಜಿ-ಐಜಿಪಿ ಡಾ. ಅಜಯ್‌ಕುಮಾರ್ ಸಿಂಗ್ ಅವರು ಮುಖ್ಯಅತಿಥಿಗಳಾಗಿ ಪಾಲ್ಗೊಳ್ಳುವರು.
ಎಲ್ಲಿ?: ಚೌಡಯ್ಯ ಸ್ಮಾರಕ ಭವನ, ಮಲ್ಲೇಶ್ವರಂ
ಯಾವಾಗ?: ಡಿ.17, ಭಾನುವಾರ ಸಂಜೆ 6