Advertisement

ಪಾರೀಕರ್‌, ಕೇಜ್ರಿವಾಲ್‌ ಪಕ್ಷಕ್ಕೆ ಗೆಲುವಿನ ಮಾಲೆ

06:40 AM Aug 29, 2017 | Team Udayavani |

ಹೊಸದಿಲ್ಲಿ/ಪಣಜಿ/ಹೈದ್ರಾಬಾದ್‌: ಗೋವಾದ ಬಿಜೆಪಿ ಮೈತ್ರಿಕೂಟ, ದಿಲ್ಲಿಯ ಆಮ್‌ ಆದ್ಮಿ ಪಕ್ಷದ ಸರಕಾರ, ಆಂಧ್ರದ ಟಿಡಿಪಿ ಸರಕಾರಕ್ಕೆ ತೀವ್ರ ಮಹತ್ವ ವೆನಿಸಿದ್ದ ಉಪಚುನಾವಣೆಯಲ್ಲಿ ಆಡಳಿತಾರೂಢ ಪಕ್ಷಗಳು ಗೆಲುವಿನ ನಗೆ ಬೀರಿವೆ. ದಿಲ್ಲಿಯ 1, ಗೋವಾದ 2, ಆಂಧ್ರಪ್ರದೇಶದ 1 ಸ್ಥಾನಕ್ಕೆ ನಡೆದಿದ್ದ ಉಪಚುನಾವಣೆ ಫ‌ಲಿತಾಂಶ ಸೋಮವಾರ ಪ್ರಕಟವಾಗಿದ್ದು, ದಿಲ್ಲಿಯ ಬವಾನಾದಲ್ಲಿ ಆಪ್‌, ಗೋವಾದ ಪಣಜಿ, ವಾಲೊಯಿಯಲ್ಲಿ ಬಿಜೆಪಿ, ಆಂಧ್ರದ ನಾಂದ್ಯಾ ಲ್‌ನಲ್ಲಿ ಟಿಡಿಪಿ ಜಯ ಸಾಧಿಸಿವೆ. 

Advertisement

ಗೋವಾದ ಪಣಜಿ, ವಾಲೊಯಿ ಕ್ಷೇತ್ರಗಳಿಗೆ ನಡೆದ ಚುನಾವಣೆಗಳಲ್ಲಿ ಬಿಜೆಪಿ ಜಯ ಸಾಧಿಸಿದೆ. ರಕ್ಷಣಾ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಗೋವಾ ಸಿಎಂ ಆಗಿದ್ದ ಮನೋಹರ್‌ ಪಾರೀಕರ್‌ ಅವರ ಪಾಲಿಗೆ ವಿಜಯ ಅತ್ಯಗತ್ಯವಾಗಿದ್ದು 4803 ಮತಗಳ ಅಂತರದಿಂದ ಗೆದ್ದಿದ್ದಾರೆ. ಪರ್ರಿಕರ್‌ ಅವರಿಗಾಗಿ ಸಿದ್ಧಾ ಕುನ್ಸೊಲಿಂಕರ್‌ ಅವರು ಸ್ಥಾನ ತೆರವು ಮಾಡಿದ್ದು, ಚುನಾವಣೆ ನಡೆದಿತ್ತು. ಇನ್ನು ಬಿಜೆಪಿಯ ವಿಶ್ವಜಿತ್‌ ರಾಣೆ ಅವರು ಕಾಂಗ್ರೆಸ್‌ ಅಭ್ಯರ್ಥಿ ವಿರುದ್ಧ 10,666 ಮತಗಳ ಅಂತರದ ಗೆಲುವು ಸಾಧಿಸಿದ್ದಾರೆ. ಈ ಮೊದಲು ರಾಣೆ ಕಾಂಗ್ರೆಸ್‌ನಲ್ಲಿದ್ದು, ರಾಜೀನಾಮೆ ನೀಡಿ ಬಿಜೆಪಿಗೆ ಸೇರ್ಪಡೆಯಾಗಿದ್ದರು.

ಆಪ್‌ ಜಯಭೇರಿ: ಸಿಎಂ ಕೇಜ್ರಿವಾಲ್‌ ಅವರ ಕುಂದುತ್ತಿರುವ ವರ್ಚಸ್ಸು ಎತ್ತಿಹಿಡಿವ ನಿಟ್ಟಿನಲ್ಲಿ ಆಪ್‌ ಪಾಲಿಗೆ ದಿಲ್ಲಿ ಬವಾನಾ ಚುನಾವಣೆ ಮಹತ್ವ ವಾಗಿತ್ತು. ಇಲ್ಲಿ ಆಪ್‌ ಅಭ್ಯರ್ಥಿ ರಾಮ್‌ ಚಂದರ್‌ 25 ಸಾವಿರ ಮತಗಳ ಅಂತರದಲ್ಲಿ ಜಯ ಸಾಧಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next