ಟವರ್ ಇದ್ದರೂ ಹಲೋ ಅನ್ನಲು ದೂರದ ಬೆಟ್ಟ ಹತ್ತುವ ಶಿಕ್ಷೆಯನ್ನು ಇಲ್ಲಿನವರು ಅನುಭವಿಸಬೇಕಾಗಿದೆ.
Advertisement
ಹಲವು ವರ್ಷದ ಸಮಸ್ಯೆ ಬೈಂದೂರು ತಾಲೂಕು ಸೇರಿದಂತೆ ಉಡುಪಿ ಜಿಲ್ಲೆಯ ಬಹುತೇಕ ಗ್ರಾಮೀಣ ಭಾಗಗಳು ಇಂದಿಗೂ ನೆಟ್ ವರ್ಕ್ ಗಾಗಿ ಪರದಾಡಬೇಕಾಗಿದೆ. ಬೈಂದೂರು ಭಾಗದ ಜನರ ಬಹು ವರ್ಷದ ಬೇಡಿಕೆಯನ್ನೇ ಗಂಭೀರವಾಗಿ ಪರಿಗಣಿಸಿದ ಸಂಸದ ಬಿ.ವೈ. ರಾಘವೇಂದ್ರ ಕೇಂದ್ರ ಟೆಲಿಕಾಂ ಸಚಿವರನ್ನು ಬೇಟಿಯಾಗಿ ಇಲ್ಲಿನ ಸಮಸ್ಯೆಗಳನ್ನು ಮನವರಿಕೆ ಮಾಡಿದ್ದರು. ಉಡುಪಿ ಜಿಲ್ಲೆಯಲ್ಲಿ ಗರಿಷ್ಠ ಟವರ್ ಗಳನ್ನು ಬೈಂದೂರು ಕ್ಷೇತ್ರಕ್ಕೆ ಮಂಜೂರು ಮಾಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು.
ಒಟ್ಟಾರೆಯಾಗಿ ಮೊಬೈಲ್ ಟವರ್ ನಿರ್ಮಾಣ ಗೊಂಡರೂ ಸಹ ನೆಟ್‌ವರ್ಕ್ ಸಂಪರ್ಕ ಸಿಗದಿರುವುದು ಹಳ್ಳಿ ಭಾಗದ ಬೆಳವಣಿಗೆಯನ್ನು ಒಂದಿಷ್ಟು ಕುಂಠಿತಗೊಳಿಸಿದೆ. ನೆಟ್‌ವರ್ಕ್ ವಿಳಂಬಕ್ಕೆ ಏನು ಕಾರಣ?
ಆರಂಭದಲ್ಲಿ ಸರಕಾರಿ ಜಾಗದ ಕೊರತೆಯಿಂದ ಖಾಸಗಿ ಜಾಗ ಹುಡುಕುವುದು ಜೊತೆಗೆ ಹಳ್ಳಿ ಭಾಗದಲ್ಲಿ ಭೂ ದಾಖಲೆ ಪರಿಪೂರ್ಣತೆ ಕೊರತೆ ಪಟ್ಟಣ ಪಂಚಾಯತ್ ಮತ್ತು ಗ್ರಾ.ಪಂ ಅನುಮತಿ ಜತೆಗೆ, ಮೆಸ್ಕಾಂ ಸಂಪರ್ಕ ಈ ಪ್ರಕ್ರಿಯೆಗಳನ್ನು ಖುದ್ದು ಸಂಸದರ ಕಚೇರಿ ಸಿದ್ಧಪಡಿಸಿಕೊಟ್ಟಿದೆ. ಟೆಲಿಕಾಂ ಇಲಾಖೆ ಅಧಿಕಾರಿಗಳ ವಿಳಂಬದ ಕಾರಣ ಟವರ್ ನಿರ್ಮಾಣ ಪ್ರಕ್ರಿಯೆ ಮಂದಗತಿಯಲ್ಲಿ ಸಾಗಿದೆ. ಈಗಾಗಲೇ ಉಡುಪಿ ಜಿಲ್ಲೆಯಲ್ಲಿ ನೂರಕ್ಕೂ ಅಧಿಕ ಟವರ್‌ಗಳಿದ್ದು ಬೈಂದೂರಿನಲ್ಲಿ 10 ಟವರ್‌ಗಳು ನಿರ್ಮಾಣವಾಗುತ್ತಿದೆ. ಗುತ್ತಿಗೆಯಲ್ಲಿ ಹೈದ್ರಾಬಾದ್ ಪಡೆದಿದೆ. ನೆಟ್‌ವರ್ಕ್ ಸಂಪರ್ಕ ಸಾಧನಗಳು ದೆಹಲಿದಿಂದ ಬರಬೇಕಾಗಿದೆ. ಎಲ್ಲ ಕಡೆಗಳಲ್ಲಿ ಒಂದೇ ಬಾರಿ ಸಂಪರ್ಕ ಕಲ್ಪಿಸುವ ಕಾರಣ ಸಿದ್ಧಗೊಂಡಿರುವ ಟವರ್‌ಗಳು ಕೂಡ ಸಂಪರ್ಕಕ್ಕಾಗಿ
ಕಾಯಬೇಕಾಗಿದೆ. ಇದರ ಜತೆಗೆ ಕೇಬಲ್‌ಗಳು ಬಹುದೂರದಿಂದ ತರಬೇಕಾದ ಸಮಸ್ಯೆ ಕೂಡ ಇದೆ.
Related Articles
ಈಗಾಗಲೇ ಬೈಂದೂರು ವ್ಯಾಪ್ತಿಯಲ್ಲಿ ಟವರ್ ಕಾಮಗಾರಿ ಪೂರ್ಣಗೊಂಡಿದ್ದು ನೆಟ್‌ವರ್ಕ್ ಸಂಪರ್ಕ ಸಾಧನಗಳು ಶೀಘ್ರ ಬರಲಿದೆ. ಕೇಬಲ್ ಸಂಪರ್ಕ ಅಥವಾ ಟವರ್ ನೆಟ್‌ವರ್ಕ್ ಕುರಿತು ಪರೀಕ್ಷೆ ನಡೆಸಿ ಸಂಪರ್ಕ ನೀಡಲಿದ್ದೇವೆ. ಇನ್ನುಳಿದಂತೆ ಎಲ್ಲ ಪ್ರಕ್ರಿಯೆ ಪೂರ್ಣಗೊಂಡಿದೆ.
*ವಿರಾಜ್ ನಾಯ್ಕ, ಅಧಿಕಾರಿ,
ದೂರವಾಣಿ ಇಲಾಖೆ ಬೈಂದೂರು
Advertisement
ಶೀಘ್ರ ಕಲ್ಪಿಸಿಕೊಡಿಬೈಂದೂರು ವ್ಯಾಪ್ತಿಯಲ್ಲಿ ಗ್ರಾಮೀಣಭಾಗಗಳಲ್ಲಿ ಬಹುದಿನದಿಂದ ಮೊಬೈಲ್ ಸಂಪರ್ಕಕ್ಕಾಗಿ ಕಾಯುತ್ತಿದ್ದಾರೆ. ಟವರ್ ನಿರ್ಮಾಣವಾಗಿರುವುದು ಸಂತಸ ತಂದರೂ ಇದುವರೆಗೆ ನೆಟ್‌ವರ್ಕ್ ಬಂದಿಲ್ಲ. ಹೀಗಾಗಿ ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಶೀಘ್ರ ಪ್ರಯತ್ನಿಸಬೇಕಿದೆ.
*ನಾಗಪ್ಪ ಮರಾಠಿ, ಹೊಸೂರು *ಅರುಣ್ ಕುಮಾರ್ ಶಿರೂರು