Advertisement
ಸಾಲು ಸಾಲಾಗಿ ಸಾಂತ್ವನದ ಜತೆಗೆ ಶೀಘ್ರ ಬೈಂದೂರಿನ ಗ್ರಾಮೀಣ ಭಾಗದ ಕಾಲು ಸಂಕಗಳ ಬೇಡಿಕೆಯನ್ನು ಈಡೇರಿಸುತ್ತೇವೆಎಂದು ಭರವಸೆ ನೀಡಿದ್ದರು. ಆದರೆ ಕಾಲ್ತೋಡಿನ ಆ ನಿರ್ದಿಷ್ಟ ಪ್ರದೇಶದ ಒಂದು ಕಾಲು ಸಂಕ ಬಿಟ್ಟರೆ ಬೇರೆ ಎಲ್ಲೂ ಕಾಲು ಸಂಕ ನಿರ್ಮಾಣವಾಗಿಲ್ಲ.
Related Articles
Advertisement
ಬೈಂದೂರು ಭಾಗದಲ್ಲಿ ಕಾಲುಸಂಕದ ಸಮಸ್ಯೆ ಇಂದು ನಿನ್ನೆಯದಲ್ಲ.ಹತ್ತಾರು ವರ್ಷಗಳಿಂದ ಬಹುತೇಕ ಕಡೆ ಇದರ ಬೇಡಿಕೆಯಿದೆ. ಯಡ್ತರೆ ಗ್ರಾಮದ ಗಂಗನಾಡು, ನಿರೋಡಿ, ಕಾಲ್ತೋಡು ಭಾಗದ ಹೊಸೇರಿ, ಸಾಂತೇರಿ, ವಸ್ರೆ, ಬ್ಯಾಟಿಯಾಣಿ, ಮಧು ಕೊಡ್ಲು, ಚಪ್ಪರಕಿ, ಕಪ್ಪಾಡಿ, ಮುರೂರು, ಗುಂಡುಬಾಣ ಮುಂತಾದ ಕಡೆ ಬಹುತೇಕ ಮನೆಗಳಿಂದ ಮಕ್ಕಳನ್ನು ಶಾಲೆಗೆ ಕಳುಹಿಸಬೇಕಾದರೆ ನದಿದಾಟಿ ಬರಬೇಕು.ಇಲ್ಲವಾದರೆ ಹತ್ತಾರು ಕಿ.ಮೀ ಸುತ್ತು ಬಳಸಿ ಬರಬೇಕಾಗಿದೆ. ಒಂದೆಡೆ ಕೃಷಿ ಚಟುವಟಿಕೆ ಇದರ ನಡುವೆ ನಿಗದಿ ಸಮಯಕ್ಕೆ ಮಕ್ಕಳನ್ನು ಶಾಲೆಗೆ ಕರೆತರಬೇಕಾದ ಜವಾಬ್ದಾರಿ ನಿಭಾಯಿ ಸುವುದು ಭಾರಿ ಕಷ್ಟ. ಹೀಗಾಗಿ ಮಕ್ಕಳು ಮನೆಗೆ ಬರುವವರೆಗೆ ಪಾಲಕರ ಆತಂಕದಿಂದ ದಿನಕಳೆಯಬೇಕಾಗಿದೆ. ಸ್ಥಳೀಯರಿಂದ ಕಾಲುಸಂಕದ ಕಾಮಗಾರಿ
ಇಲ್ಲಿನ ಸಾತೇರಿ, ಹೊಸೇರಿ ಭಾಗದಲ್ಲಿ ಸರಕಾರದ ಸ್ಪಂದನೆಗೆ ಕಾದು ಬೇಸತ್ತು ಸ್ಥಳೀಯರೇ ಶ್ರಮದಾನದ ಮೂಲಕ ಕಾಲುಸಂಕ ನಿರ್ಮಿಸಿ ಕೊಂಡಿದ್ದಾರೆ. ಮರದ ದಿಮ್ಮಿ ಗಳಿಂದ ನಿರ್ಮಿಸಿದ ಈ ತಾತ್ಕಾಲಿಕ ಕಾಲು ಸಂಕ ಸುರಕ್ಷಿತ ವೇನೂ ಅಲ್ಲ. ಆದರೆ ಬೇರೆ ದಾರಿ ಇಲ್ಲ ಜನ ಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಮನವಿ ಸಲ್ಲಿಕೆ ಕಾಲುಸಂಕ ನಿರ್ಮಿಸಲು ಕಳೆದ ಹಲವು ವರ್ಷಗಳಿಂದ ಶಾಸಕರಿಗೆ,
ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಮನವಿ ನೀಡಲಾಗಿತ್ತು.ಮಳೆಗಾಲದಲ್ಲಿ ಮಕ್ಕಳನ್ನು ಶಾಲೆಗೆ ಕಳುಹಿಸಲು ಸಮಸ್ಯೆಯಾಗುತ್ತಿದೆ. ಸರಕಾರ ಇಲ್ಲಿನ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕಿದೆ.
*ಆನಂದ ಪೂಜಾರಿ, ಗ್ರಾಮಸ್ಥರು *ಅರುಣ್ ಕುಮಾರ್ ಶಿರೂರು