Advertisement
ಈ ಸಂದರ್ಭದಲ್ಲಿ ಯಡ್ತರೆ ಗ್ರಾ.ಪಂ ಮಾಜಿ ಅಧ್ಯಕ್ಷ ನಾಗರಾಜ ಶೆಟ್ಟಿ ಮಾತನಾಡಿ, ಮೇಲಾಧಿಕಾರಿಗಳು ಖಾಸಗಿ ಒತ್ತಡಕ್ಕೆ ಮಣಿದು ಬಸ್ ಸಂಚಾರ ಸ್ಥಗಿತಗೊಳಿಸಿರುವುದು ಸಮಂಜಸವಲ್ಲ.ಬಸ್ ಸಂಪರ್ಕ ಪುನರಾರಂಭಿಸದಿದ್ದರೆ ಮಳೆಯಲ್ಲಿ ನೆನೆದು ಪ್ರತಿಭಟನೆ ನಡೆಸುತ್ತೇವೆ ಎಂದರು.ತಹಶೀಲ್ದಾರಿಗೆ ಮನವಿ ನೀಡಿದ ಬಳಿಕ ಶಾಸಕರ ಕಚೇರಿಗೆ ಜಾಥಾ ಮೂಲಕ ತೆರಳಿ ಮನವಿ ನೀಡಲಾಗಿದೆ.
ಹಠಾತ್ ಬಸ್ ನಿಲುಗಡೆಗೊಳಿಸುವುದರ ಕುರಿತು ಕೆ.ಎಸ್.ಆರ್.ಟಿ.ಸಿ ಡಿಸಿಯೊಂದಿಗೆ ಮಾತನಾಡಿದ್ದೇನೆ. ನಾಳೆಯ ಒಳಗೆ ವ್ಯವಸ್ಥೆ ಸರಿಯಾಗದಿದ್ದರೆ ಬೈಂದೂರಿನ ಜನರೊಂದಿಗೆ ಬೀದಿಗೆ ಇಳಿದು ಹೋರಾಡುತ್ತೇನೆ ಎಂದು ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ಹೇಳಿದರು. ನಮ್ಮ ಕೈಯಲ್ಲಿ ಏನೂ ಇಲ್ಲ
ಕೆ.ಎಸ್.ಆರ್.ಟಿ.ಸಿ, ಡಿಸಿ ಮಾತನಾಡಿ, ಖಾಸಗಿ ವ್ಯಕ್ತಿಗಳು ಲೋಕಾಯುಕ್ತರಿಗೆ ದೂರು ನೀಡಿರುವುದರಿಂದ 19ನೇ ತಾರೀಖೀನ ಒಳಗೆ ನ್ಯಾಯಾಲಯಕ್ಕೆ ಕೆ.ಎಸ್.ಆರ್.ಟಿ.ಸಿ.ಯಿಂದ ವರದಿ ನೀಡಬೇಕು. ಹೀಗಾಗಿ ಇಲಾಖೆಯಿಂದ ಏನು ಮಾಡಲು ಸಾಧ್ಯವಿಲ್ಲ.ಆರ್.ಟಿ.ಒ ಅಧಿಕಾರಿಗಳಿಗೆ ಹಲವು ಬಾರಿ ದೂರು ನೀಡಿದರು ಸಹ ಕ್ರಮ ಕೈಗೊಂಡಿಲ್ಲ ಎನ್ನುತ್ತಾರೆ.
Related Articles
Advertisement