ಬೈಂದೂರು: ಬೈಂದೂರು ಸಮೀಪದ ಸೊಮೇಶ್ವರ ಗುಡ್ಡ ಕುಸಿತ ಗುರುವಾರವು ಮುಂದುವರಿದಿದೆ.ಮುಂಜಾಗ್ರತೆ ಕ್ರಮವಾಗಿ ದೊಂಬೆ ರಸ್ತೆ ಬಂದ್ ಮಾಡಲಾಗಿದೆ.
ಪ್ರಾಕ್ರತಿಕ ವಿಕೋಪ ಸೇರಿದಂತೆ ಯಾವುದೇ ಅವಘಡದಿಂದ ಸಾರ್ವಜನಿಕರಿಗೆ ತೊಂದರೆಯಾಗುವ ಸಣ್ಣ ಸುಳಿವು ಸಿಕ್ಕರೂ ಸಹ ಗಂಭೀರವಾಗಿ ಪರಿಗಣಿಸಿ ಸೂಕ್ತ ಮುನ್ನೆಚ್ಚರಿಕೆ ವಹಿಸಬೇಕೆನ್ನುವುದು ರಾಜ್ಯ ಸರಕಾದ ನಿರ್ದೇಶನ.
ಮಳೆಯ ಅಬ್ಬರಕ್ಕೆ ಯಾವುದೇ ಕ್ಷಣಕ್ಕೂ ಎಲ್ಲಿಯೂ ಕೂಡ ಅಪಾಯ ಸಂಭವಿಸಬಹುದು. ಆದರೆ ಬೈಂದೂರಿನ ಸೊಮೇಶ್ವರ ಗುಡ್ಡದಲ್ಲಿ ರಾತ್ರಿ ವೇಳೆ ಸಂಚಾರ ಯಥಾ ರೀತಿ ಮುಂದುವರಿದಿತ್ತು. ಖಾಸಗಿ ವ್ಯಕ್ತಿಯೊಬ್ಬರು ರೆಸಾರ್ಟ್ ನಿರ್ಮಿಸಲು ಗುಡ್ಡ ಕೊರೆದ ಪರಿಣಾಮ ಕುಸಿಯುವ ಭೀತಿಯಲ್ಲಿದೆ.ಈ ಬಗ್ಗೆ ವರದಿಯಾಗುತ್ತಿದ್ದಂತೆ ದೌಡಾಯಿಸಿದ ಅಧಿಕಾರಿಗಳು ಬುಧವಾರ ಮುಂಜಾಗ್ರತೆ ವಹಿಸಿ ಬ್ಯಾರಿಕೇಡ್ ಅಳವಡಿಸಿ ರಸ್ತೆ ಬಂದ್ ಮಾಡಿದ್ದರು.ಇದೆಲ್ಲಾ ಹಗಲು ವೇಳೆ ನಡೆದಿತ್ತು ಆದರೆ ರಾತ್ರಿಯಾಗುತ್ತಿದ್ದಂತೆ ಸಂಚಾರ ಮುಕ್ತವಾಗಿತ್ತು.ಕನಿಷ್ಠ ಪಕ್ಷ ಹೋಮ್ ಗಾರ್ಡ್ ಕೂಡ ನೇಮಿಸಿಲ್ಲವಾಗಿತ್ತು. ಹೀಗಾಗಿ ಈ ಗುಡ್ಡ ಅಧಿಕಾರಿಗಳು ಡ್ಯೂಟಿಯಲ್ಲಿದ್ದಾಗ ಮಾತ್ರ ಮಾಹಿತಿ ನೀಡಿ ಕುಸಿಯಬಹುದು ರಾತ್ರಿ ತಟಸ್ಥವಾಗಿರಬಹುದು ಎಂದು ಜನರಾಡಿಕೊಳ್ಳುತ್ತಿದ್ದಾರೆ.
ಎ.ಸಿಗಾಗಿ ಸಂಜೆವರಗೆ ಕಾಯ್ದ ಜನರು: ಬುಧವಾರ ಸಂಜೆ ವೇಳೆ ಗುಡ್ಡ ಕುಸಿದ ಸ್ಥಳಕ್ಕೆ ಕುಂದಾಪುರ ಸಹಾಯಕ ಕಮಿಷನರ್ ಬರುತ್ತಾರೆ ಎಂದು ಹೆಚ್ಚಿನ ಸಂಖ್ಯೆಯಲ್ಲಿ ಸ್ಥಳೀಯರು ಕಾದಿದ್ದರು ಆದರೆ ಸಂಜೆ ಎ.ಸಿ ಯವರು ಸ್ಥಳಕ್ಕಾಗಮಿಸಿಲ್ಲ.ಗುರುವಾರ ಮುಂಜಾನೆ ಭೇಟಿ ನೀಡಿದ್ದಾರೆ.ಈ ಬಗ್ಗೆಪ್ರತಿಕ್ರಿಯಿಸಿದ ಜಿಲ್ಲಾ ಕೆಡಿಪಿ ಸದಸ್ಯ ಶೇಖರ್ ಪೂಜಾರಿ ಪಟ್ಟಣ ಪಂಚಾಯತ್ ಹಾಗೂ ಎಲ್ಲ ಅಧಿಕಾರಿಗಳು ಒತ್ತಡ ಹಾಗೂ ಉದ್ಯಮಿಯ ಅಮಿಷಕ್ಕೆ ಒಳಗಾಗಿ ಅನುಮತಿ ನೀಡಿದ್ದಾರೆ.ಮಾತ್ರವಲ್ಲದೆ ಪ್ರಭಾವಿ ವ್ಯಕ್ತಿ ಗುಡ್ಡ ಕೊರೆದ ಕಾರಣ ಅಧಿಕಾರಿಗಳು ಕೂಡ ಕ್ರಮ ಜರಗಿಸಲು ಸ್ಥಳಕ್ಕೆ ಭೇಟಿ ನೀಡಲು ಸಾರ್ವಜನಿಕರಿಗೆ ನ್ಯಾಯ ಒದಗಿಸಲು ಹಿಂದೇಟು ಹಾಕುತಿದ್ದಾರೆ.ಕನಿಷ್ಠ ಪಕ್ಷ ಸಾರ್ವಜನಕರ ಅಹವಾಲು ಕೇಳಲು ಸಿದ್ದರಿಲ್ಲ.ಒಂದೊಮ್ಮೆ ಅವಘಡ ಸಂಭವಿಸಿದರೆ ಇದಕ್ಕೆ ಇಲಾಖೆಯ ನಿರ್ಲಕ್ಷ್ಯವೇ ಕಾರಣ ಸಕಾರಾತ್ಮಕವಾಗಿ ಸ್ಪಂಧಿಸದಿದ್ದರೆ ಸಾರ್ವಜನಿಕರು ಪ್ರತಿಭಟನೆ ನಡೆಸಲಾಗುತ್ತದೆ ಎಂದರು.
ಕಟ್ಟಡ ಮಾಲಿಕರಿಗೆ ನೊಟೀಸ್; ಬೈಂದೂರು ಪಟ್ಟಣ ಪಂಚಾಯತ್ ಇಲ್ಲಿನ ಗುಡ್ಡ ಕೊರೆದು ರಸ್ತೆ ನಿರ್ಮಿಸುತ್ತಿರುವ ಉದ್ಯಮಿಗೆ ನೊಟೀಸ್ ನೀಡಿದೆ ಮತ್ತು ಕಟ್ಟಡ ಪರವಾನಗಿ ತಾತ್ಕಾಲಿಕವಾಗಿ ತಡೆಹಿಡಿದಿದೆ ಮತ್ತು 25 ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ.
ಗಣಿ ಮತ್ತು ಪರಿಸರ ಅಧಿಕಾರಿಗಳು ಭೇಟಿ: ಸೊಮೇಶ್ವರ ಗುಡ್ಡ ಕುಸಿತ ಪ್ರದೇಶಕ್ಕೆ ಗಣಿ ಹಾಗೂ ಪರಿಸರ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಗುಡ್ಡ ಕುಸಿತದಿಂದ ಅಪಾರ ಪ್ರಮಾಣದಲ್ಲಿ ಮಣ್ಣು ಕುಸಿದ ಕಾರಣ ಸಮೀಪ ಹೋಗಲು ಸಾಧ್ಯವಿಲ್ಲ.ಗುಡ್ಡದ ಮೆಲಾºಗದಲ್ಲಿ ಹರಿಯುವ ನೀರನ್ನು ಬೇರೆ ಕಡೆ ಹರಿಯುವಂತೆ ಮಾಡಬೇಕು ಮತ್ತು ಮಣ್ಣು ಜಾರುವ ಸ್ಥಳದಲ್ಲಿ ಟಾರ್ಪಾಲಿನ್ ಅಳವಡಿಸಲು ತಿಳಿಸಿದ್ದಾರೆ.ಮಳೆ ಕಡಿಮೆಯಾಗುವ ವರಗೆ ಯಥಾ ಸ್ಥಿತಿ ಮುಂದುವರಿಸಲಾಗುವುದು ಮತ್ತು ಹಗಲು ರಾತ್ರಿ ಸಿಬ್ಬಂದಿಗಳನ್ನು ನೇಮಿಸಲಾಗುತ್ತದೆ ಎಂದು ಪ.ಪಂ.ಮುಖ್ಯಾಧಿಕಾರಿ ಅಜಯ್ ಭಂಡಾರ್ಕರ್ ಹೇಳಿದ್ದಾರೆ.
ಗುಡ್ಡ ಕುಸಿತ ಸ್ಥಳಕ್ಕೆ ಕುಂದಾಪುರ ಸಹಾಯಕ ಕಮಿಷನರ್ ರಶ್ಮೀ ಆರ್,ಬೈಂದೂರು ತಹಶೀಲ್ದಾರ ಪ್ರದೀಪ್ ಆರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.