Advertisement
ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಉದ್ಘಾಟಿಸಿ ಮಾತನಾಡಿ, ರಾಜ್ಯದಲ್ಲಿ 48 ಸಾವಿರ ಸರಕಾರಿ ಶಾಲೆಗಳಿದ್ದು, 1 ಕೋಟಿ ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಆದರೆ ವರ್ಷದಿಂದ ವರ್ಷಕ್ಕೆ ಸರಕಾರಿ ಶಾಲೆಗಳ ಗುಣಮಟ್ಟ ಕುಸಿಯುತ್ತಿದ್ದು, ಮುಂದಿನ 5 ವರ್ಷಗಳಲ್ಲಿ 10 ಸಾವಿರ ಸರಕಾರಿ ಶಾಲೆಗಳು ಮಕ್ಕಳಿಲ್ಲದೆ ಮುಚ್ಚುವ ಆತಂಕವಿದೆ. ಆ ನಿಟ್ಟಿನಲ್ಲಿ ಬೈಂದೂರು ಕ್ಷೇತ್ರದ 300 ಸರಕಾರಿ ಶಾಲೆಗಳ ಅಭಿವೃದ್ಧಿಗೆ, ಸರಕಾರಿ ಆಸ್ಪತ್ರೆಗಳ ಅಭಿವೃದ್ಧಿಗೆ ಪಣ ತೊಟ್ಟಿರುವುದು, ಉದ್ಯೋಗ ಸೃಷ್ಟಿಗೆ ಮುಂದಾಗಿರುವುದು ರಾಜ್ಯದಲ್ಲಿಯೇ ಕ್ರಾಂತಿಕಾರಿ ಯೋಜನೆಯಾಗಿದೆ ಎಂದು ಶ್ಲಾಘಿಸಿದರು.
ವಿಶ್ವೇಶ್ವರಯ್ಯ ತಾಂತ್ರಿಕ ವಿ.ವಿ.ಯಿಂದ “ಡಾಕ್ಟರ್ ಆಫ್ ಸೈನ್ಸ್’ ಗೌರವ ಪುರಸ್ಕೃತ, ಉದ್ಯಮಿ, ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೆಬಲ್ ಸೊಸೈಟಿ ಅಧ್ಯಕ್ಷ ಡಾ| ಶ್ರೀನಿವಾಸ ಶೆಟ್ಟಿ ಹಾಲಾಡಿ (ಎಚ್.ಎಸ್. ಶೆಟ್ಟಿ) ಅವರನ್ನು ಅಭಿನಂದಿಸಲಾಯಿತು.
Related Articles
Advertisement
ಉದ್ಯಮಿ ಬಿ.ಎಸ್. ಸುರೇಶ್ ಶೆಟ್ಟಿ ಪ್ರಸ್ತಾವನೆಗೈದರು. ರಾಘವೇಂದ್ರ ಆಚಾರ್ಯ ಸ್ವಾಗತಿಸಿ, ಶಿಕ್ಷಕ ಸುಬ್ರಹ್ಮಣ್ಯ ಉಪ್ಪುಂದ ನಿರೂಪಿಸಿದರು.
ಅಧ್ಯಕ್ಷತೆ ವಹಿಸಿದ್ದ ಗುರುರಾಜ ಗಂಟಿಹೊಳೆ ಮಾತನಾಡಿ, ಬೈಂದೂರಿನ ಜನರ ಹಾಗೂ ನನ್ನನ್ನು ಗೆಲ್ಲಿಸಲು ಶ್ರಮಿಸಿದ ಎಲ್ಲರ ಋಣ ತೀರಿಸುವ ಕೆಲಸವಿದು. 300 ಟ್ರೀಸ್- ಸರಕಾರಿ ಶಾಲೆಗಳ ಅಭಿವೃದ್ಧಿ ಯೋಜನೆ. ಮುಂದೆ ಅದರಲ್ಲಿ 30 ಶಾಲೆಗಳನ್ನು ಮಾದರಿ, ಅದರಲ್ಲಿ 3 ಶಾಲೆಗಳನ್ನು ರಾಜ್ಯದಲ್ಲಿಯೇ ಅತ್ಯುತ್ತಮ ಶಾಲೆಯಾಗಿಸುವ ಗುರಿಯಿದೆ. ಸರಕಾರಿ ಶಾಲೆ ಸರಕಾರದ್ದಲ್ಲ, ನಮ್ಮ ಸ್ವಂತದ್ದುಅನ್ನುವ ಮನೋಭಾವ ಬೆಳೆಯ ಬೇಕು. ಅದು ಬೆಳಗಿದರೆ, ಬಡವರ ಮನೆ ಬೆಳಗಿದಂತೆ. ಸರಕಾರಿ ಆಸ್ಪತ್ರೆಗ ಳಲ್ಲಿ ಡಯಾಲಿಸಿಸ್ ಸಹಿತ ಇನ್ನಿತರ ಸವಲತ್ತುಗಳನ್ನು ಅಭಿವೃದ್ಧಿಪಡಿಸುವ ಮಹದಾಸೆಯಿದೆ ಎಂದರು.