Advertisement
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೈಕಲ್, ಸ್ಕೂಟರ್ ಮೇಲೆ ತಿರುಗಾಡಿ ಸಾಮೂಹಿಕ ನೇತೃತ್ವದಲ್ಲಿ ಪಕ್ಷ ಕಟ್ಟಿದ್ದೇವೆ. ಮೋದಿ, ಅಮಿತ್ ಶಾ, ಜೆ.ಪಿ ನಡ್ಡಾ ಅವರ ಆಶೀರ್ವಾದದಿಂದ ರಾಜ್ಯಾಧ್ಯಕ್ಷ ಆಗಿದ್ದೇನೆ. ನನ್ನನ್ನು ಯಾರು ಏನೂ ಮಾಡಲು ಸಾಧ್ಯವಿಲ್ಲ ಎಂದು ಹೇಳಿಕೊಂಡು ಓಡಾಡುತ್ತಿದ್ದಾರೆ. ಇವರನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ಪಕ್ಷಕ್ಕೆ ದುಡಿದ ಹಿರಿಯರು ವಿರೋಧ ಮಾಡಿದ್ದರು, 40 ಜನ ಆರ್ಎಸ್ಎಸ್ ಸೇರಿದಂತೆ ಹಿರಿಯರಲ್ಲಿ 37 ಜನ ವಿರೋಧ ಮಾಡಿದ್ದರು. ಆದರೆ ಲಿಂಗಾಯತ ಸೇರಿದಂತೆ ಇನ್ನಿತರೆ ಮಂಕು ಬೂದಿ ಎರಚಿ ರಾಜ್ಯಾಧ್ಯಕ್ಷರಾಗಿದ್ದು, ಪಕ್ಷಕ್ಕೆ ಇವರ ಕೊಡುಗೆ ಏನು ಎಂದು ಪ್ರಶ್ನಿಸಿದರು.
Related Articles
Advertisement
ರಾಜ್ಯದಲ್ಲಿ ಹಿಂದುಳಿದ, ದಲಿತರು ಹಾಗೂ ಇನ್ನುಳಿದ ಸಮಾಜಗಳಿಗೆ ಆಗುತ್ತಿರುವ ಅನ್ಯಾಯದ ವಿರುದ್ದ ಸಂಘಟನೆ ಕಟ್ಟಲಾಗುತ್ತಿದೆ. ಅ.20 ರಂದು ಬಾಗಲಕೋಟೆಯಲ್ಲಿ ಹಲವು ಸ್ವಾಮೀಜಿಗಳ ನೇತೃತ್ವದಲ್ಲಿ ನಡೆಯುವ ಸಮಾವೇಶದಲ್ಲಿ ಸಂಘಟನೆಯು ಸ್ಪಷ್ಟ ರೂಪ ಪಡೆಯಲಿದೆ. ಹಿಂದಿನ ಸಂಘಟನೆ ನಿಲ್ಲಿಸಬಾರದಿತ್ತು ಎಂದು ಈಗ ಅನ್ನಿಸುತ್ತಿದೆ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ತಿಳಿಸಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸಮಾವೇಶ ಹಾಗೂ ಸಂಘಟನೆಗೆ ಹಲವು ಸ್ವಾಮೀಜಿಗಳ ಸಲಹೆ ಹಾಗೂ ಮಾರ್ಗದರ್ಶನವಿದೆ. ಬಾಗಲಕೋಟೆಯ ಚರಂತಿಮಠ ಸಮುದಾಯ ಭವನದಲ್ಲಿ ಸಮಾವೇಶ ನಡೆಯಲಿದೆ. ಸ್ವಾಮೀಜಿಗಳ ನೇತೃತ್ವದಲ್ಲಿ ರಾಜ್ಯದಿಂದ ಸುಮಾರು 2000 ಪ್ರಮುಖರು ಪಾಲ್ಗೊಳ್ಳಲಿದ್ದಾರೆ. ಆರ್.ಸಿ.ಬಿ (ರಾಯಣ್ಣ ಚನ್ನಮ್ಮ ಬ್ರಿಗೇಡ್) ಎನ್ನುವುದು ಸ್ವಾಮೀಜಿಯೊಬ್ಬರು ನೀಡಿದ ಸಲಹೆ. ನಾಳಿನ ಸಮಾವೇಶದಲ್ಲಿ ಈ ಕುರಿತು ಸ್ಪಷ್ಟ ಚಿತ್ರಣ ದೊರೆಯಲಿದೆ ಎಂದರು.
ನಿಲ್ಲಿಸಿ ತಪ್ಪು ಮಾಡಿದೆ: ಹಿಂದೆ ಆರಂಭಿಸಿದ ರಾಯಣ್ಣ ಬ್ರಿಗೇಡ್ ನಿಲ್ಲಿಸಿ ದೊಡ್ಡ ತಪ್ಪು ಮಾಡಿದೆ. ಸಂಘಟನೆಗೆ ಅಭೂತಪೂರ್ವ ಬೆಂಬಲ ಹಾಗೂ ಸಹಕಾರ ವ್ಯಕ್ತವಾಗಿತ್ತು. ಆದರೆ ಯಡಿಯೂರಪ್ಪ ಅವರಿಗೆ ಈ ಸಂಘಟನೆ ನೋಡಿ ತಡೆದುಕೊಳ್ಳಲು ಆಗಲಿಲ್ಲ. ಅಮಿತ್ ಶಾ ಅವರಿಗೆ ಇಲ್ಲದ್ದನ್ನು ಹೇಳಿ ನಿಲ್ಲಿಸುವಂತೆ ಮಾಡಿದರು. ಆ ಸಂಘಟನೆಯನ್ನು ನಿಲ್ಲಿಸಬಾರದಿತ್ತು ಎಂದು ಈಗ ಅನ್ನಿಸುತ್ತಿದೆ ಎಂದರು.