Advertisement

ಕ್ಯೂಟ್‌ ಜೋಡಿ ಬೈ ಟು ಲವ್‌: ಗಮನ ಸೆಳೆಯುತ್ತಿದೆ ಫ‌ಸ್ಟ್‌ ಲುಕ್‌ ಪೋಸ್ಟರ್

08:09 AM Apr 18, 2021 | Team Udayavani |

ಕೆಲವು ಸಿನಿಮಾಗಳ ಪೋಸ್ಟರ್‌ಗಳು ಆರಂಭದಲ್ಲೇ ನಿರೀಕ್ಷೆ ಹುಟ್ಟಿಸುವ ಜೊತೆಗೆ ಗಮನ ಸೆಳೆಯುತ್ತವೆ. ಸದ್ಯ ಆ ತರಹ ಗಮನ ಸೆಳೆದಿರುವ ಪೋಸ್ಟರ್‌ “ಬೈ ಟು ಲವ್‌’.

Advertisement

ಹಸೆಮಣೆಯಲ್ಲಿ ಕುಳಿತಿರುವ ಜೋಡಿಗಳ ತೊಡೆಯ ಮೇಲೊಂದು ಮಗು ಇರುವ ಪೋಸ್ಟರ್‌ ವಿಭಿನ್ನವಾಗಿ ಕಾಣುತ್ತಿದೆ. ನಿಮಗೆ ಗೊತ್ತಿರುವಂತೆ ಶ್ರೀಲೀಲಾ ಈ ಚಿತ್ರದ ನಾಯಕಿ. ಧನ್ವೀರ್‌ ನಾಯಕ.

ಜನವರಿಯಲ್ಲಿ ಆರಂಭವಾಗಿದ್ದ ಸಿನಿಮಾ ಈಗ ಶೆ.80ರಷ್ಟು ಚಿತ್ರೀಕರಣ ಮುಗಿಸಿದ್ದು, ಕೊನೆಯ ಹಂತದ ಚಿತ್ರೀಕರಣಕ್ಕೆ ಅಣಿಯಾಗುತ್ತಿದೆ. ಈ ಚಿತ್ರವನ್ನು ಹರಿ ಸಂತೋಷ್‌ ನಿರ್ದೇಶಿಸುತ್ತಿದ್ದಾರೆ. ಇದು ಒಂದು ಅಪ್ಪಟ ಲವ್‌ ಕಂ ಫ್ಯಾಮಿಲಿ ಸ್ಟೋರಿ ಇರುವ ಸಿನಿಮಾ ಎಂಬುದು ನಿರ್ದೇಶಕರ ಮಾತು.

ಈ ಚಿತ್ರ “ಕೆವಿಎನ್‌ ಪ್ರೊಡಕ್ಷನ್ಸ್‌’ ಬ್ಯಾನರ್‌ ನಡಿ ತಯಾರಾಗುತ್ತಿದ್ದು, ಈ ಸಿನಿಮಾವನ್ನು ನಿಶಾ ವೆಂಕಟ್‌ ಕೋನಂಕಿ ಹಾಗೂ ಸುಪ್ರೀತ್‌ ಜಂಟಿಯಾಗಿ ನಿರ್ಮಿಸುತ್ತಿದ್ದಾರೆ. ಚಿತ್ರಕ್ಕೆ ಮಹೇಂದ್ರ ಸಿಂಹ ಅವರ ಛಾಯಾಗ್ರಹಣ, ಅಜನೀಶ್‌ ಲೋಕನಾಥ್‌ ಸಂಗೀತವಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next