Advertisement
ಒಂದು ಮಗುವಿನ ಬೆಳವಣಿಗೆ ಕೇವಲ ಶಾಲೆಯಿಂದಾಗಲಿ ಪಠ್ಯದಿಂದಾಗಲೇ ಆಗುವುದಿಲ್ಲ. ಶಿಕ್ಷಣ ಎನ್ನುವುದು ಒಂದು ಪರಿಪೂರ್ಣ ಪ್ರಜ್ಞೆ. ಅದೊಂದು ಅರಿವು. ಮಕ್ಕಳ ಪಠ್ಯ ಕೇವಲ ಕಾಲು ಭಾಗದಷ್ಟೇ. ವಿದ್ಯಾರ್ಥಿಗೆ ಶೈಕ್ಷಣಿಕವಲ್ಲದ ಪರಿಸರದಿಂದ, ಪಠ್ಯೇತರ ಚಟುವಟಿಕೆಗಳಿಂದ ಕಲಿಯುವಂತಹದ್ದು ಬಹಳ ಇರುತ್ತದೆ. ಪ್ರಸ್ತುತ ಕೋವಿಡ್‌ನಿಂದ ಶಾಲೆ ವಿಚಾರವಾಗಿ ಸಿಕ್ಕಿರುವ ಬಿಡುವು ಮಕ್ಕಳನ್ನು ಸಾಕಷ್ಟು ಬದಲಾಯಿಸಿದೆ.
ಶಾಲೆಗೆ ಮಕ್ಕಳನ್ನು ಕಳುಹಿಸುವುದನ್ನು ಬಿಟ್ಟು ಬೇರೆ ಪರ್ಯಾಯ ಆನ್‌ಲೈನ್ ಶಿಕ್ಷಣ ಎಂದಾಗ ಪೋಷಕರು ಕೂಡ ಅರೆ ಮನಸ್ಸಿನಿಂದ ಒಪ್ಪಿದ್ದಾರೆ. ಹೇಗಾದರೂ ಸರಿ ಮಕ್ಕಳ ಶಿಕ್ಷಣ ಹಾಳಾಗಬಾರದು ಎನ್ನುವ ಮನಸ್ಥಿತಿಯಲ್ಲಿಯೇ ಪೋಷಕರಿದ್ದಾರೆ. ಹಾಗಾಗಿ ಈಗ ಆನ್‌ಲೈನ್‌ಗೆ ಮಕ್ಕಳ ಜತೆಗೆ ಪೋಷಕರೂ ಕೂಡ ಹೊಂದಿಕೊಳ್ಳಲು ಶುರುಮಾಡಿದ್ದಾರೆ. ಆದರೆ ಬಹುತೇಕ ಪೋಷಕರಿಗೆ ಆನ್‌ಲೈನ್ ಶಿಕ್ಷಣದ ಒಳಹೊರಗು ಗೊತ್ತಿಲ್ಲ. ಈಗೀಗ ಮಕ್ಕಳಿಗೆ ಮೊಬೈಲ್ ಕೊಟ್ಟ ಪರಿಣಾಮ ಈಗ ಪೋಷಕರಿಗೆ ಅರಿವಾಗಲು ಶುರುವಾಗಿದೆ.
Related Articles
Advertisement
ಶಾಲೆ ತೆರೆಯುವುದು ಬೇಡವೇ ಬೇಡ ಅನ್ನುವುದು ಬೇಡಮೊಬೈಲ್ ಅಡಿಕ್ಷನ್‌ನಿಂದ ಮಕ್ಕಳು ಹೊರಬಾರದ ಪರಿಸ್ಥಿತಿಗೆ ತಲುಪುತ್ತಿದ್ದಾರೆ. ಮೊಬೈಲ್‌ನಲ್ಲಿ ಪಾಠ ಮೊಬೈಲ್‌ನಲ್ಲೇ ಆಟವಾ ಗುತ್ತಿದೆ. ಮನೆಯ ಒಳಗೆ ರೂಮಿನ ಕೋಣೆಯೊಳಗೆ ಬಂಧಿಯಾಗುತ್ತಿದ್ದಾರೆ. ಪೋಷಕರಿಗೆ ಆತಂಕವಾಗುತ್ತಿದೆ ಆದರೆ ಏನೂ ಮಾಡಲಾಗದ ಪರಿಸ್ಥಿತಿಗೆ ತಲುಪುತ್ತಿದ್ದಾರೆ. ನಾನು ಹೇಳುವುದೇನೆಂದರೆ ಶಾಲೆ ತೆರೆಯು ವುದು ಬೇಡವೇ ಬೇಡ ಅನ್ನೋ ಮನಃಸ್ಥಿತಿಯಿಂದ ಪೋಷಕರು ಹೊರ ಬರಬೇಕು. ಯೂರೋಪಿ ಯನ್ ದೇಶಗಳಲ್ಲಿ ಈಗ ಶಾಲೆಗಳನ್ನು ಆರಂಭಿಸಲು ಶುರು ಮಾಡಿದ್ದಾರೆ. 1. ಮಕ್ಕಳಿಗೆ ಮನೆಯಲ್ಲಿ ಶುಚಿತ್ವದ ಪಾಠ ಮಾಡಲು ಪೋಷಕರು ಶುರುಮಾಡಿದ್ದಾರೆ.
2. ಮಕ್ಕಳಿಗೆ ಆಸ್ಪತ್ರೆಯಲ್ಲಿ ಇಮ್ಯುನಿಟಿ ಪರೀಕ್ಷೆ ಮಾಡಿಸುತ್ತಿದ್ದಾರೆ. ಮಕ್ಕಳ ದೈಹಿಕ ಸಾಮರ್ಥ್ಯದ ಬಗ್ಗೆ ಪ್ರಮಾಣಪತ್ರ ಪಡೆದುಕೊಳ್ಳುತ್ತಿದ್ದಾರೆ.
3. ಮಕ್ಕಳ ಜತೆಗೆ ಪೋಷಕರು ಕೂಡ ಸೆಲ್ಫ್ ಮಾನಿಟರಿಂಗ್ ಮಾಡಿಕೊಳ್ಳುತ್ತಿದ್ದಾರೆ. ತಾವು ಕೂಡ ಕೋವಿಡ್ ಪರೀಕ್ಷೆ ಮಾಡಿಸಿ ಅದರ ಸರ್ಟಿಫಿಕೇಟ್ ಶಾಲಾ ಆಡಳಿತ ಮಂಡಳಿಗೆ ಕಳುಹಿಸಲು ಅಣಿಯಾಗಿದ್ದಾರೆ.
4. ಶಾಲೆಗಳನ್ನು ಸಂಪೂರ್ಣ ಸ್ಯಾನಿಟೈಸ್ ಮಾಡಿ ಶಿಕ್ಷಕರು ಕಡ್ಡಾಯ ಕೋವಿಡ್ ಪರೀಕ್ಷೆ ಮಾಡಿಸಿಕೊಂಡು ಸುರಕ್ಷಿತ ಕ್ರಮಗಳೊಂದಿಗೆ ಪಾಠ ಮಾಡುವ ವ್ಯವಸ್ಥೆಯಾಗುತ್ತಿದೆ. ಶಿಕ್ಷಕರಿಗೂ ಕೂಡ ಪ್ರತ್ಯೇಕ ತರಬೇತಿ ನೀಡಲಾಗುತ್ತಿದೆ. ನಮ್ಮಲ್ಲಿ ಮೊದಲು ಏನಾಗಬೇಕು
ನಮ್ಮ ಭಾರತೀಯ ಶಿಕ್ಷಣ ಪದ್ಧತಿ ಒಂದು ಶಿಸ್ತಿಗೆ ಒಳಪಡಲು ಇನ್ನೂ ಕೂಡ ಪಡಿಪಾಟಲು ಪಡುತ್ತಿದೆ. ಪ್ರಸ್ತುತ ರಾಷ್ಟ್ರೀಯ ಶಿಕ್ಷಣ ನೀತಿಯು ಹೊಸ ಭರವಸೆಯನ್ನು ಹುಟ್ಟುಹಾಕಿದೆ. ಅದರ ಜಾರಿ ಯಾವಾಗ ಆಗುತ್ತದೆ ಎನ್ನುವ ಬಗ್ಗೆ ಅನೇಕ ಗೊಂದಲಗಳಿವೆ. ಸದ್ಯ ನಾವು ಮಕ್ಕಳನ್ನು ಶಾಲೆಗೆ ಕಳುಹಿಸಲು ಮುಂದಾಗಬೇಕು. 1. ಮಕ್ಕಳಲ್ಲಿ ಸಣ್ಣ ಪುಟ್ಟ ಆನಾರೋಗ್ಯಗಳು ಉಂಟಾದಾಗ ಅದನ್ನು ಅವಗಣಿಸುವುದನ್ನು ಮೊದಲು ಬಿಡಬೇಕು. ಅವರಿಗೆ ಚಿಕಿತ್ಸೆ ಕೊಡಿಸಬೇಕು. ನಿಗದಿತ ಸಮಯಕ್ಕೆ ನೀಡಬೇಕಿರುವ ಲಸಿಕೆಗಳನ್ನು, ನಿಯಮಿತವಾದ ಪರೀಕ್ಷೆಗಳನ್ನು ಮಾಡಿಸಬೇಕು. 2.ಮಕ್ಕಳನ್ನು ನೇರ ಶಾಲೆಗೆ ಕಳುಹಿಸುವ ಮುನ್ನ ಅವರಿಗೆ ಮಾನಸಿ ಕವಾಗಿ ಸಿದ್ಧತೆ ಮಾಡುವಂತಹ ಕಾರ್ಯಾಗಾರ ಗಳನ್ನು ಶಾಲೆಗಳು ಆರಂಭಿಸಬೇಕು. ಮಕ್ಕಳಿಗೆ ಸುರಕ್ಷತೆಯ ಬಗ್ಗೆ ಅರಿವು ಮೂಡಿಸಬೇಕು. 3.ಮಕ್ಕಳಿಗೆ ಸ್ಯಾನಿಟೈಸರ್, ಮಾಸ್ಕ್ ಬಳಸಲು ಸಲಹೆ ಮಾಡ ಬಹುದು ಆದರೆ ವಿದ್ಯಾರ್ಥಿಗಳ ನಡುವೆ ಸಾಮಾಜಿಕ ಅಂತರ ಕಾಯ್ದು ಕೊಳ್ಳುವಂತೆ ಮಾಡುವುದು ತುಸು ಕಷ್ಟವೇ, ಹಾಗಾಗಿ ಮಕ್ಕಳಿಗೆ ಬಿಡುವಿನ ಅವಧಿಯನ್ನು ಕಡಿಮೆ ಮಾಡಬೇಕು. 4. ಪ್ರಾಥಮಿಕ ಪ್ರೌಢ ಶಿಕ್ಷಣವನ್ನು ದಿನದ ಬೇರೆ ಬೇರೆ ಅವಧಿಗಳಲ್ಲಿ ತರಗತಿ ನಡೆಸಲು ಸಮಯ ಬದಲಾವಣೆ ಮಾಡಬೇಕು. ಇನ್ನು ಕಾಲೇಜುಗಳ ವಿಷಯಕ್ಕೆ ಬರುವುದಾದರೆ, ಕಾಲೇಜು ವಿದ್ಯಾರ್ಥಿಗಳು ಶಾಲಾ ಮಕ್ಕಳಿ ಗಿಂತ ಭಿನ್ನ. ಅವರಲ್ಲಿ ಸಾಮಾಜಿಕ ಹೊಣೆಗಾರಿಕೆ ಮೂಡಿಸುವುದು ಅಗತ್ಯ. ಮಕ್ಕಳ ಬಗ್ಗೆ ತೀರಾ ಪೊಸೆಸಿವ್ ಆಗಿ ಯೋಚಿಸಿ ಮಾನಸಿಕವಾಗಿ ನೆಮ್ಮದಿ ಕಳೆದುಕೊಳ್ಳುವುದು ಬೇಡ. ಮಕ್ಕಳನ್ನು ಮಕ್ಕಳಾಗಲು ಬಿಡಿ. ನಿಮ್ಮ ಒತ್ತಡ ಅವರಿಗೆ ಹಿಂಸೆ ಅನ್ನಿಸಬಾರದು. ಅಂತಿಮವಾಗಿ ಮಕ್ಕಳ ಭವಿಷ್ಯ ನಿರ್ಮಾಣ ಇಡೀ ಸಮಾಜದ ಜವಾಬ್ದಾರಿ. ಪ್ರಸ್ತುತ ಸಂದರ್ಭ ದಲ್ಲಿ ಅದಕ್ಕೆ ಬೇಕಿರುವ ಪೂರಕ ವಾತಾವರಣ ಸೃಷ್ಟಿಯಾಗಬೇಕು. ಡಾ| ಗಿರೀಶ್ ಚಂದ್ರ