Advertisement
– ಚುನಾವಣಾ ಪ್ರಚಾರ ಹೇಗಿದೆ ?ನಮ್ಮ ಜಿಲ್ಲೆಯ ಎಲ್ಲ ಕಾರ್ಯಕರ್ತರು ಬೂತ್ ಮಟ್ಟದವರೆಗೆ ಇಳಿದು ಕೆಲಸ ಮಾಡುತ್ತಿದ್ದಾರೆ. ವಿಶೇಷವಾಗಿ ಬೈಂದೂರು ಸೇರಿದಂತೆ ನಮ್ಮ ಶಾಸಕರು ಹಳ್ಳಿ-ಹಳ್ಳಿಗೆ ಭೇಟಿ ನೀಡುವ ಕೆಲಸವಾಗುತ್ತಿದೆ. ಮಾಜಿ ಶಾಸಕರು ಸಹ ಅವರ ಕ್ಷೇತ್ರದಲ್ಲಿ ಯಶಸ್ವಿಯಾಗಿ ಕೆಲಸ ಮಾಡುತ್ತಿದ್ದಾರೆ. ಜೆಡಿಎಸ್ ಜತೆಗೆ ಹೊಂದಾಣಿಕೆ
ಆಗಿರುವುದರಿಂದ ಭದ್ರಾವತಿ, ಶಿವಮೊಗ್ಗ ಗ್ರಾಮಾಂತರ ಕ್ಷೇತ್ರ ಸೇರಿದಂತೆ ಇಡೀ ಜಿಲ್ಲೆಯಲ್ಲಿ ಕೈ ಜೋಡಿಸಿದ್ದಾರೆ. ಹಾಗಾಗಿ ಒಳ್ಳೆಯ ರೀತಿಯಲ್ಲಿ ಪ್ರಚಾರ ನಡೆಯುತ್ತಿದೆ. ವಿಶೇಷವಾಗಿ ಮತದಾರರು ನರೇಂದ್ರ ಮೋದಿ ಅವರ ಮೇಲೆ ವಿಶ್ವಾಸ ಇಟ್ಟಿದ್ದಾರೆ. 10 ವರ್ಷ ಎಷ್ಟು ಒಳ್ಳೆಯ ಆಡಳಿತ ನೀಡಿದ್ದಾರೆ ಅವರಿಗೆ
ಕೃತಜ್ಞತೆ ಸಲ್ಲಿಸಲು ಇದೊಂದು ಅವಕಾಶ ಎಂಬ ಮನಸ್ಥಿತಿ ಮತದಾರರಲ್ಲಿದೆ.
ಮೋದೀಜಿ ಹಾಗೂ ಯಡಿಯೂರಪ್ಪನವರು ಕೊಟ್ಟಂತಹ ಅಭಿವೃದ್ಧಿ ಕಾರ್ಯ. ನಮ್ಮ ಜಿಲ್ಲೆ ಶಾಸಕರು, ನಾನು ಸೇರಿ ಮಾಡಿದಂತಹ ಸಾಧನೆ. ಈ ಚುನಾವಣೆ
ದೇಶದ ಭವಿಷ್ಯದ ಚುನಾವಣೆ. ಆ ದೃಷ್ಟಿಕೋನ ಇಟ್ಟುಕೊಂಡು ಮತದಾರರು ಇದರಲ್ಲಿ ಭಾಗವಹಿಸಬೇಕು ಎಂದು ವಿನಂತಿ ಮಾಡುವೆ. – ಪ್ರಚಾರದ ವೇಳೆ ಎದುರಿಸಿದ ಸವಾಲುಗಳೇನು ?
ಸಹಜವಾಗಿ ಸವಾಲುಗಳು ಎದುರಾಗಿವೆ. ಆಗಿರೋ ಕೆಲಸಗಳು ಬೇಕಾದಷ್ಟಿದ್ದರೂ ಆಗಬೇಕಿರುವುದು ಮತ್ತಷ್ಟು ಇದೆ. ಹಾಗಾಗಿ ಆ ವಿಚಾರದಲ್ಲಿ ಕೆಲಸ ಮಾಡುವ ಆಶ್ವಾಸನೆಯನ್ನು ಜನರಿಗೆ ಕೊಟ್ಟಿದ್ದೇನೆ.
Related Articles
ಮಲೆನಾಡು ಭಾಗದಲ್ಲಿ ನೆಟ್‌ವರ್ಕ ಸಮಸ್ಯೆ ಇದೆ. ಟವರ್‌ಗಳು ಮಂಜೂರಾಗಿವೆ. ಇನ್ನಷ್ಟು ಸುಧಾರಣೆ ಆಗಬೇಕು. ವಿಮಾನ ನಿಲ್ದಾಣ ಆಗಿದೆ. ಬಂಡವಾಳಶಾಹಿಗಳು ಬರಬೇಕು. ಕೈಗಾರಿಕೆಗಳು ಶುರುವಾಗಬೇಕು. ಸೈನಿಕ್ ಸ್ಕೂಲ್‌ನ್ನು ತೀರ್ಥಹಳ್ಳಿಗೆ ತರಬೇಕೆಂಬ ಆಸೆ ಇತ್ತು. ಅದಕ್ಕೆ ನಾನು ಜ್ಞಾನೇಂದ್ರಣ್ಣ ಅವರು ನೂರು ಎಕರೆ ಜಾಗ ತೆಗೆದಿಟ್ಟಿದ್ದೇವೆ. ಪಶ್ಚಿಮಘಟ್ಟದ ಪರಿಸರ ಉಳಿಸಿಕೊಂಡು ಶೈಕ್ಷಣಿಕ ಸಂಸ್ಥೆಗಳು, ಪ್ರವಾಸೋದ್ಯಮ ಹಬ್ ಮಾಡಲು ಸಾಕಷ್ಟು ಅವಕಾಶಗಳಿವೆ. ಆ ರೀತಿ ಟೂರಿಸಂ, ಇಂಡಸ್ಟ್ರಿಯಲ್, ಎಜ್ಯುಕೇಶನ್ ಹಬ್ ಮಾಡಲು ಎಲ್ಲ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು.
Advertisement
– ಕ್ಷೇತ್ರದಲ್ಲಿ ನೀವು ಗುರುತಿಸಿದ ಐದು ಪ್ರಥಮ ಆದ್ಯತೆಯ ಕೆಲಸಗಳೇನು ?ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆ, ಡೀಮ್ಡ್ ಫಾರೆಸ್ಟ್, ಕಸ್ತೂರಿ ರಂಗನ್ ವರದಿ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಸಿಗಬೇಕು. ಪ್ರತಿ ವರ್ಷ ವರದಿ ಬರುವುದು ಗಾಬರಿ ಆಗುವಂತಹದ್ದು ಆಗಬಾರದು. ಭದ್ರಾವತಿ ವಿಐಎಸ್‌ಎಲ್, ಎಂಪಿಎಂ ಕಾರ್ಖಾನೆ ಶುರು ಮಾಡುವ ನಿಟ್ಟಿನಲ್ಲಿ ಕೆಲಸ ಮಾಡುವೆ. – ಮೋದಿ ಅಲೆ ಅಥವಾ ಬೇರೆ ಯಾವ ಅಂಶಗಳು ನಿಮ್ಮ ಗೆಲುವಿಗೆ ಸಹಕಾರಿಯಾಗಲಿವೆ ?
ಮೋದಿ ಅಲೆ, ಪೂಜ್ಯ ತಂದೆಯವರಾದ ಯಡಿಯೂರಪ್ಪ ಅವರ ಆಶೀರ್ವಾದ, ಅಭಿವೃದ್ಧಿ ಕಾರ್ಯಗಳು ಈ ಬಾರಿ ಚುನಾವಣೆಯಲ್ಲಿ ಕೈ ಹಿಡಿಯುತ್ತವೆ. – ಜನ ನಿಮ್ಮನ್ನು ಏಕೆ ಬೆಂಬಲಿಸಬೇಕು ?
ರಾಷ್ಟ್ರಕೋಸ್ಕರ, ದೇಶದ ಹಿತದೃಷ್ಟಿಗಾಗಿ, ತಾಯಂದಿರ, ರೈತರ, ಯುವಕರ ಭವಿಷ್ಯಕ್ಕಾಗಿ ಮೋದೀಜಿ ಅವರಿಗೆ ಬೆಂಬಲ ಕೊಡಬೇಕು. ಮೋದೀಜಿ ಅವರಿಗೆ ಕೊಡಬೇಕೆಂದರೆ ಕಮಲದ ಚಿಹ್ನೆಗೆ ಮತ ಕೊಡಬೇಕು. ನಿಮ್ಮ ರಾಘಣ್ಣನನ್ನು ಸಂಸತ್‌ಗೆ ಕಳುಹಿಸಬೇಕು. – ನಿಮ್ಮ ಎದುರಾಳಿ ಯಾರು ? ಅವರ ಬಗ್ಗೆ ನಿಮ್ಮ ಅಭಿಪ್ರಾಯವೇನು ?
ಯಾವುದೇ ಪಕ್ಷದ ಅಭ್ಯರ್ಥಿಗಳಾಗಿದ್ದರೂ ಅವರು ಗೆಲ್ಲಲೇಬೇಕೆಂದು ಸ್ಪರ್ಧೆಗಿಳಿದಿರುತ್ತಾರೆ. ನಮ್ಮ ನಮ್ಮ ಪಕ್ಷದ ಸಿದ್ಧಾಂತದ ಮೇಲೆ ಮತ ಕೇಳುವ ಕೆಲಸ
ಮಾಡುತ್ತೇವೆ. ಆದರೆ ದೌರ್ಭಾಗ್ಯ ಈ ಬಾರಿ ವೈಯಕ್ತಿಕ ಟೀಕೆ- ಟಿಪ್ಪಣಿಗಳಿಗೆ ಚುನಾವಣೆ ಸೀಮಿತವಾಗಿದೆ. ಆ ರೀತಿ ಆಗಬಾರದು. ಮುಂದೆ ಏನು ಮಾಡುತ್ತೇವೆ ಎಂಬುದರ ಆಧಾರದಲ್ಲಿ ಜನರ ಬಳಿ ಹೋಗಬೇಕು. ವೈಯಕ್ತಿಕ ಚರ್ಚೆ ಇಟ್ಟುಕೊಂಡು ಹೋಗುತ್ತಿರುವುದಕ್ಕೆ ನೋವಿದೆ.