ಬಳ್ಳಾರಿ: ಮೂರು ಕ್ಷೇತ್ರಗಳ ಉಪಚುನಾವಣೆಗೆ ಅಭ್ಯರ್ಥಿ ಘೋಷಣೆಯಾಗಿದೆ. ನಾಮಪತ್ರ ಸಲ್ಲಿಸುವ ಕೊನೆಯ ದಿನ ಭರತ್ ಬೊಮ್ಮಾಯಿ, ನಿಖಿಲ್ ಕುಮಾರ್ ಮತ್ತು ಬಂಗಾರು ಹನುಮಂತು ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಹೇಳಿದರು.
ಶುಕ್ರವಾರ (ಅ.25) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದ ಒಂದೂವರೆ ವರ್ಷದಲ್ಲಿ ಇದು ಪ್ರಮುಖ ಚುನಾವಣೆ. ರಾಜ್ಯದ ಪರಿಸ್ಥಿತಿ ಕಟ್ಟಿದೆ. ಮೂರು ನಾಲ್ಕು ವರ್ಷದ ಬಳಿಕ ಅಡಳಿತ ವಿರೋಧ ಸಹಜ. ಅದರೆ ಈ ಸರ್ಕಾರಕ್ಕೆ ಒಂದೇ ವರ್ಷದಲ್ಲಿ ಅಡಳಿತ ವಿರೋಧಿ ಅಲೆ ಸೃಷ್ಟಿಯಾಗಿದೆ. ಎರಡು ಕಾರಣಗಳಿಗೆ ಅಡಳಿತ ವಿರೋಧ ಸೃಷ್ಟಿಯಾಗಿದೆ. ಭ್ರಷ್ಟಾಚಾರ ರಹಿತ ಅಡಳಿತ ನೀಡುವ ಭರವಸೆ ನೀಡಿದೆ. ಇದೀಗ ಸಾಲು ಸಾಲು ಹಗರಣ ಮಾಡಿದೆ. ಅದನ್ನು ಬಿಜೆಪಿ ಬೀದಿಗೆ ತಂದಿದೆ ಎಂದರು.
ಮುಡಾ ಹಗರಣ ಅತಿದೊಡ್ಡದು. ಸೈಟ್ ವಾಪಸ್ ನೀಡಿ ಸಿದ್ದರಾಮಯ್ಯ ತಪ್ಪು ಒಪ್ಪಿಕೊಂಡಿದ್ದಾರೆ. ವಾಲ್ಮೀಕಿ ನಿಗಮದ ಹಗರಣದಲ್ಲಿ ಸರ್ಕಾರ ನೇರವಾಗಿ ಭಾಗಿಯಾಗಿದೆ. ವಾಲ್ಮೀಕಿ ನಿಗಮದಲ್ಲಿ ಹಗರಣ ನಡೆದಿದೆ ಎಂದು ಸಿದ್ದರಾಮಯ್ಯ ಒಪ್ಪಿಕೊಂಡಿದ್ದಾರೆ. ಭ್ರಷ್ಟಾಚಾರ ವಿರುದ್ಧ ಜನರು ಚೀ ಥೂ ಎಂದು ಉಗಿಯುತ್ತಿದ್ದಾರೆ. ಸಮಾಜ ಮತ್ತು ಜಾತಿ ಜಾತಿಗಳ ಮಧ್ಯೆ ವಿಷ ಬೀಜ ಬಿತ್ತುತ್ತಿದ್ದಾರೆ. ಅಭಿವೃದ್ಧಿ ಬಗ್ಗೆ ಚರ್ಚೆಯಿಲ್ಲ ಚಕಾರವಿಲ್ಲ. ಗ್ಯಾರಂಟಿ ಪ್ರಚಾರ ಮಾಡಿದರು. ಲೋಕಸಭೆ ಚುನಾವಣೆ ಮುನ್ನ ಹಣ ಹಾಕಿದರು. 18 ಸ್ಥಾನ ಗೆಲ್ಲುತ್ತಾರೆಂದು ಕಾಂಗ್ರೆಸ್ ಅಪಪ್ರಚಾರ ಮಾಡಿದರೂ ಗೆದ್ದಿದ್ದು ಮಾತ್ರ ನಾವ ಎಂದರು.
ಉಪಚುನಾವಣೆ ರಾಜ್ಯ ರಾಜಕೀಯದ ದಿಕ್ಸೂಚಿ. ರಾಜಕೀಯ ಚಿತ್ರಣ ಬದಲಿಸುವ ಚುನಾವಣೆ. ರೈರ ವಿರೋಧಿ ಸರ್ಕಾರ ಬರ ಮತ್ತು ನೆರೆ ಬಗ್ಗೆ ಕಾಳಜಿ ತೋರದ ಸರ್ಕಾರ ಕೇವಲ ಕೇಂದ್ರ ಸರ್ಕಾರದ ಕಡೆ ಬೆಟ್ಟು ಮಾಡಿ ತೋರಿಸುತ್ತಿದೆ. ರೈತರ ಬಡವರ ವಿರೋಧಿ ಸರ್ಕಾರ ಎಸ್ಟಿ ಎಸ್ಟಿ ಹಣ ಬೇರೆ ಕಡೆ ಖರ್ಚು ಮಾಡ್ತಿದ್ದಾರೆ. ಶಾಸಕರು ಸರ್ಕಾರದ ವಿರುದ್ಧ ತಿರುಗಿಬಿದ್ದಿದ್ದಾರೆ. ದೇಶಪಾಂಡೆ ಸರ್ಕಾರದ ವಿರುದ್ಧ ಅಸಮಾಧಾನ ತೋಡಿಕೊಂಡಿದ್ದಾರೆ. ಸರ್ಕಾರ ತಮ್ಮ ಶಾಸಕರ ವಿರೋಧವನ್ನು ಎದುರಿಸುತ್ತಿದೆ ಎಂದು ವಿಜಯೇಂದ್ರ ಹೇಳಿದರು.
ಸಂಡೂರಿನಲ್ಲಿ ಈವರೆಗೆ ಕಮಲ ಅರಳಿಲ್ಲ. ಈ ಬಾರಿ ಗೆಲ್ಲುವ ವಿಶ್ವಾಸವಿದೆ. ಕಾರ್ಯಕರ್ತರ ಉತ್ಸಾಹದಲ್ಲಿದ್ದಾರೆ. ಶ್ರೀರಾಮುಲು ಅವರಿಗೆ ಅಸಮಾಧಾನವಿಲ್ಲ, ಜಂಟಿಯಾಗಿ ಪ್ರಚಾರ ಮಾಡುತ್ತಾರೆ. ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಬರುತ್ತಾರೆ ಎಂದರು.
ತಮ್ಮ ಜೊತೆಗೆ ಶಾಸಕರಿದ್ದಾರೆ ಎನ್ನುವ ಎಸ್ ಟಿ ಸೋಮಶೇಖರ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಉಪಚುನಾವಣೆ ಫಲಿತಾಂಶ ಬಂದ ಬಳಿಕ ಕಾಂಗ್ರೆಸ್ ಪರಿಸ್ಥಿತಿ ಗೊತ್ತಾಗುತ್ತದೆ ಎಂದು ಪರೋಕ್ಷವಾಗಿ ಟಾಂಗ್ ನೀಡಿದರು.
ಚನ್ನಪಟ್ಟಣ ರಣಕಣದಲ್ಲಿ ಸಿ.ಪಿ ಯೋಗೇಶ್ವರ್ ಕಾಂಗ್ರೆಸ್ ಹೋಗಿರುವ ವಿಚಾರಕ್ಕೆ ಮಾತನಾಡಿ, ಚನ್ನಪಟ್ಟಣದಲ್ಲಿ ಫಲಿತಾಂಶ ಬಂದ ಮೇಲೆ ಗೊತ್ತಾಗುತ್ತದೆ. ಯೋಗೇಶ್ವರ ಬಗ್ಗೆ ಮಾತನಾಡಲ್ಲ. ನಮ್ಮ ಜೊತೆಗೆ ಇದ್ದರು ಈಗಿಲ್ಲ ಅಷ್ಟೇ ಎಂದರು.