Advertisement

By-election: ರಾಹುಲ್‌ ತೊರೆದ ವಯನಾಡಲ್ಲಿ ಪ್ರಿಯಾಂಕಾ ಗಾಂಧಿ ಗೆಲ್ಲುತ್ತಾರಾ?

12:01 AM Nov 13, 2024 | Team Udayavani |

ವಯನಾಡ್‌: ರಾಹುಲ್‌ ಗಾಂಧಿ ರಾಜೀ­­­ನಾಮೆ­ಯಿಂದ ತೆರವಾದ ಕೇರ­ಳದ ವಯನಾಡ್‌ ಲೋಕಸಭೆ ಕ್ಷೇತ್ರದ ಉಪ­ಚುನಾವಣೆ ಬುಧವಾರ­(ನ.13) ನಡೆಯ­ಲಿದೆ.

Advertisement

ಕಾಂಗ್ರೆಸ್‌ನ ಗಾಂಧಿ ಕುಟುಂಬದ ಮತ್ತೊಂದು ಕುಡಿ ಪ್ರಿಯಾಂಕಾ ಗಾಂಧಿ ವಾದ್ರಾ ಸ್ಪರ್ಧೆಯಿಂ­ದಾಗಿ ಈ ಉಪಚು­ನಾವಣೆಯು ದೇಶದ ಗಮನ ಸೆಳೆದಿದೆ. ಇಲ್ಲಿಂದ ಗೆದ್ದರೆ ಪ್ರಿಯಾಂಕಾ ಅವರು ಅಧಿಕೃತ­ವಾಗಿ ಚುನಾವಣ ರಾಜಕಾರಣಕ್ಕೆ ಪ್ರವೇಶ ಪಡೆಯಲಿದ್ದಾರೆ.

ಆಗಸ್ಟ್‌ನಲ್ಲಿ ಸಂಭವಿಸಿದ ಭಾರೀ ಭೂಕುಸಿತದಿಂದ ತತ್ತರಿಸಿರುವ ವಯ­ನಾಡು ಜನರು ಆರೇಳು ತಿಂಗಳಲ್ಲೇ ಮತ್ತೂಮ್ಮೆ ತಮ್ಮ ಬೆರಳಿಗೆ ಶಾಯಿ ಹಚ್ಚಿಸಿಕೊಳ್ಳಲು ಸಿದ್ಧರಾಗಿದ್ದಾರೆ. ಕೇರ­ಳದ ಒಟ್ಟು 20 ಲೋಕಸಭೆ ಕ್ಷೇತ್ರಗಳಲ್ಲಿ ವಯ­ನಾಡ್‌ ಕ್ಷೇತ್ರ ತನ್ನದೇ ಕಾರಣಗ­ಳಿಂದ ವಿಶಿಷ್ಟವಾಗಿದೆ. ಪ್ರಿಯಾ­ಂಕಾ ವಾದ್ರಾ (ಕಾಂಗ್ರೆಸ್‌), ನವ್ಯಾ ಹರಿದಾಸ್‌(ಬಿಜೆಪಿ), ಸತ್ಯನ್‌ ಮೋಕೇರಿ­(ಎಲ್‌ಡಿಎಫ್) ಸೇರಿ 16 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಕ್ಷೇತ್ರದ 14 ಮತದಾರರಿದ್ದಾರೆ.

ಪ್ರಿಯಾಂಕಾ ಗಾಂಧಿ ಗೆಲ್ತಾರಾ?: ಸಾಕಷ್ಟು ರಾಜಕೀಯ ಅನುಭವವಿದ್ದರೂ ಇದೇ ಮೊದಲ ಬಾರಿಗೆ ಚುನಾವಣ ರಾಜಕೀಯಕ್ಕೆ ಪ್ರಿಯಾಂಕಾ ಧುಮುಕಿ­ದ್ದಾರೆ. ಅವರ ಪರವಾಗಿ ಕಾಂಗ್ರೆಸ್‌ ನಾಯ­ಕರು ಹಗಲಿ­ರುಳು ಪ್ರಚಾರ ನಡೆಸಿದ್ದಾರೆ. ರಾಹುಲ್‌ ಗಾಂಧಿ ಕೂಡ, ವಯನಾಡಿಗೆ ಇಬ್ಬರು ಎಂಪಿಗಳಿರಲಿ­ದ್ದಾರೆ ಎಂದು ಹೇಳುವ ಮೂಲಕ ಮತ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಜತೆಗೆ, ಪ್ರಿಯಾಂಕಾ ಕೂಡ ಭಾವನಾತ್ಮಕ­ವಾಗಿ ಜನರನ್ನು ತಲುಪುತ್ತಿದ್ದಾರೆ.

ಬಿಜೆಪಿ, ಎಲ್‌ಡಿಎಫ್ ಅಭ್ಯರ್ಥಿಗಳು: ಕಾಂಗ್ರೆಸ್‌ಗೆ ಪ್ರಬಲ ಸ್ಪರ್ಧೆಯನ್ನು ಒಡುತ್ತಿರುವುದು ಎಲ್‌ಡಿಎಫ್ನ ಸತ್ಯನ್‌ ಹಾಗೂ ಬಿಜೆಪಿ ನವ್ಯಾ ಹರಿದಾಸ್‌. ಮಾಜಿ ಐಟಿ ಉದ್ಯೋಗಿಯಾಗಿರುವ ನವ್ಯಾ ವಯನಾಡ್‌ನ‌ಲ್ಲಿ ಚಿರಪರಿಚಿ­ತರು. ಕಾಂಗ್ರೆಸ್‌ ಹಿಡಿತದಲ್ಲಿರುವ ಈ ಕ್ಷೇತ್ರದಲ್ಲಿ ಯಾವುದೇ ಕೆಲಸಗಳಾಗಿಲ್ಲ ಪ್ರಚಾರ ಮಾಡುತ್ತಿ­ದ್ದಾರೆ. ನವ್ಯಾ ಗೆದ್ದರೆ ಕೇಂದ್ರದಲ್ಲಿ ಮಂತ್ರಿಯಾಗುತ್ತಾರೆಂಬ ಸುದ್ದಿಯನ್ನು ಹರಡಲಾಗಿದೆ. ಇನ್ನು, ಎಲ್‌ಡಿಎಫ್ನ ಅಭ್ಯರ್ಥಿ ಸತ್ಯನ್‌ ಒಮ್ಮೆ ಶಾಸಕರಾಗಿ­ದ್ದವರು. ಸಾಕಷ್ಟು ಚಿಪರಿಚಿತ ವ್ಯಕ್ತಿ. ವಯ­ನಾಡಿಗೆ ಶಾಶ್ವತ ಜನಪ್ರತಿ­ನಿಧಿ ಬೇಕು. ರಾಹುಲ್‌ರಂತೆ ಪ್ರಿಯಾ­ಂಕಾ ಕೂಡ ಕ್ಷೇತ್ರ ತೊರೆ­ಯುವುದಿಲ್ಲ ಎಂ­ಬುದಕ್ಕೆ ಗ್ಯಾರಂಟಿ ಇಲ್ಲ ಎಂದು ಪ್ರಚಾರ ಮಾಡುತ್ತಿದ್ದಾರೆ. ಆದರೆ ಮತದಾ­ರರು ಯಾರಿಗೆ ತಮ್ಮ ಮುದ್ರೆ ಒತ್ತಲಿದ್ದಾರೆಂ­ಬುದು ಇನ್ನೂ ನಿಗೂಢವಾಗಿದೆ.

Advertisement

ಕ್ಷೇತ್ರದಲ್ಲಿ ಸಮಸ್ಯೆಗಳು: ಸಾಕಷ್ಟು ಅರಣ್ಯ ಪ್ರದೇಶ­ದಿಂದ ಕೂಡಿರುವ ವಯನಾಡ್‌ನ‌ಲ್ಲಿ ಆಗಸ್ಟ್‌­ನಲ್ಲಿ ಸಂಭ­ವಿಸಿದ ಭೂಕುಸಿತ ಭಾರೀ ನಷ್ಟವನ್ನು ಸೃಷ್ಟಿಸಿದೆ. ಜನರಿಗೆ ಪುನರ್ವಸತಿ ಕಲ್ಪಿಸಬೇಕಿದೆ. ವನ್ಯಪ್ರಾಣಿ-­ಮಾನವ ಸಂಘರ್ಷ, ನಿರುದ್ಯೋಗ ವಿಷಯಗಳು ಹೆಚ್ಚು ಪ್ರಚಾರದಲ್ಲಿ ಚರ್ಚಿತವಾಗುತ್ತಿವೆ. ಇದಲ್ಲದೇ ಇನ್ನೂ ಸಾಕಷ್ಟು ಸ್ಥಳೀಯ ಸಮಸ್ಯೆಗಳು ಪ್ರಚಾರದ ಸರಕಾಗಿವೆ. ಹಾಗಾಗಿ ಈ ಕ್ಷೇತ್ರವು ಮೇಲ್ನೋಟಕ್ಕೆ ಕಾಣುವಷ್ಟು ಸರಳವಾಗಿಲ್ಲ.

ಜಾತಿ ಸಮೀಕರಣ: ಶೇ.18.5ರಷ್ಟು ಬಡು­ಕಟ್ಟು ಜನರಿದ್ದಾರೆ. ಪನ್ನಿಯನ್‌ ಮುದಾಯದವರು (ಶೇ.44) ಅತೀ ಹೆಚ್ಚು ಸಂಖ್ಯೆಯಲ್ಲಿದ್ದಾರೆ. ಅವರ ನಂತ­ರದ ಸ್ಥಾನದಲ್ಲಿ ಮುಲ್ಲು ಕುರು­ಮಾನ್‌, ಕುರಿಚಿ­ಯಾನ್‌, ಕಟ್ಟುನೈಚಕನ್‌, ಆದಿ­ಯಾನ್‌, ಉರ್ಲಿ ಕುರುಮಾನ್‌ ಸಮುದಾಯ­ದವರು ಗಣನೀಯ ಸಂಖ್ಯೆಯಲ್ಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next