Advertisement

ಇಂದು ಉಪಚುನಾವಣೆ ಫಲಿತಾಂಶ: ಹಾನಗಲ್  ನಲ್ಲಿ ಮತ ಎಣಿಕೆ ಆರಂಭ

08:38 AM Nov 02, 2021 | Team Udayavani |

ಹಾವೇರಿ: ದಿ. ಸಿ.ಎಂ.ಉದಾಸಿ ಅಕಾಲಿಕ ನಿಧನದಿಂದ ತೆರವಾಗಿದ್ದ ಹಾನಗಲ್ಲ ವಿಧಾನಸಭಾ  ಉಪಚುನಾವಣೆ ಮತ ಎಣಿಕೆ ಆರಂಭವಾಗಿದೆ.

Advertisement

ಜಿಲ್ಲಾ ಚುನಾವಣಾ ವೀಕ್ಷಣಾಧಿಕಾರಿ, ಜಿಲ್ಲಾ ಚುನಾವಣಾ ಅಧಿಕಾರಿ ಸಮ್ಮುಖದಲ್ಲಿ ಸ್ಟ್ರಾಂಗ್ ರೂಮ್ ಓಪನ್ ಮಾಡಲಾಯಿತು.

ನಗರದ ಹೊರವಲಯದ ದೇವಗಿರಿ ಸರ್ಕಾರಿ ಎಂಜನೀಯರಿಂಗ್ ಮಹಾವಿದ್ಯಾಲಯದಲ್ಲಿ ಮತ ಎಣಿಕೆ ಕಾರ್ಯ ಆರಂಭವಾಗಿದೆ. ಈಗಾಗಲೇ ಚುನಾವಣಾ ವೀಕ್ಷಣಾಧಿಕಾರಿ ಡಾ. ಮಾಧುರಿ ಖೋಡೆ, ಜಿಲ್ಲಾ ಚುನಾವಣಾಧಿಕಾರಿ ಡಿಸಿ ಸಂಜಯ ಶೆಟ್ಟೆಣ್ಣವರ ಸಮ್ಮುಖದಲ್ಲಿ ಸ್ಟ್ರಾಂಗ್ ರೂಮ್ ಓಪನ್ ಮಾಡಲಾಯಿತು.

ದಿ.ಸಿ.ಎಂ.ಉದಾಸಿ ನಿಧನದಿಂದ ತೆರವಾಗಿದ್ದ ಹಾನಗಲ್ಲ ವಿಧಾನಸಭಾ ಕ್ಷೇತ್ರಕ್ಕೆ ಅ.30 ರಂದು ನಡೆದ ಮತದಾನದಲ್ಲಿ ಶೇ. 83.76ರಷ್ಟು ಮತದಾನವಾಗಿತ್ತು. ಬಿಜೆಪಿ ಅಭ್ಯರ್ಥಿ ಶಿವರಾಜ ಸಜ್ಜನರ, ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಮಾನೆ ಸೇರಿ ಒಟ್ಟು 13 ಅಭ್ಯರ್ಥಿಗಳು ಸ್ಪರ್ಧಿಸಿದ್ದು, ಇಂದು ಅವರ‌ ಭವಿಷ್ಯ ನಿರ್ಧಾರವಾಗಲಿದೆ.

ಒಟ್ಟು 2,04,481 ಮತದಾರರು ಇದ್ದು ಈ ಪೈಕಿ 1,71,264 ಜನರು ಮತ ಚಲಾಯಿಸಿದ್ದು, ಶೇ.83.76ರಷ್ಟು ಮತದಾನವಾಗಿದೆ.

Advertisement

ಮತ‌ ಎಣಿಕೆಗಾಗಿ 2 ಕೊಠಡಿ ಸಿದ್ಧಪಡಿಸಿದ್ದು, ತಲಾ 7 ಟೇಬಲ್ ಸೇರಿ ಒಟ್ಟು 14 ಟೇಬಲ್‌ಗಳ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳಲು ತಲಾ ಒಂದು ಕೊಠಡಿಯಲ್ಲಿ 7 ಟೇಬಲ್‌ಗಳ ವ್ಯವಸ್ಥೆ ಮಾಡಲಾಗಿದೆ. ಪ್ರತಿ ಟೇಬಲ್ ಗೆ ತಲಾ ಒಬ್ಬರು ಮೈಕ್ರೋ ಅಬ್ಸರ್ವರ್, ಒಬ್ಬರು ಎಣಿಕೆ ಮೇಲ್ವಿಚಾರಕ, ಒಬ್ಬರು ಎಣಿಕೆ ಸಹಾಯಕರನ್ನು ನೇಮಕ ಮಾಡಲಾಗಿದೆ. 14 ಟೇಬಲ್ ಗಳಲ್ಲಿ 18 ಪೂರ್ಣ ರೌಂಡ್ ಮತ್ತು 19ನೇ ರೌಂಡ್ ನಲ್ಲಿ ಮತ ಎಣಿಕೆ ಮುಕ್ತಾಯವಾಗಲಿದೆ.

ನೆಗೆಟಿವ್ ವರದಿ ಕಡ್ಡಾಯ: ಮತ‌ ಎಣಿಕೆ ಕೇಂದ್ರ ಪ್ರವೇಶಕ್ಕೆ ಕೋವಿಡ್ ನೆಗೆಟಿವ್ ವರದಿ ಕಡ್ಡಾಯವಾಗಿದೆ. ಪ್ರತಿಯೊಬ್ಬರ ಕೋವಿಡ್ ನೆಗೆಟಿವ್ ವರದಿ ಪರಿಶೀಲಿಸಿ ಪೊಲೀಸರು ಒಳ ಬಿಡುತ್ತಿದ್ದು, ಮತ‌ ಎಣಿಕೆ ಕೇಂದ್ರದ ಎದುರು ಪೊಲೀಸ್ ಬಿಗಿ ಬಂದೋಬಸ್ತ್ ಮಾಡಿಕೊಳ್ಳಲಾಗಿದೆ.

ಇದನ್ನೂ ಓದಿ:ಇಂದು ಸಿಂದಗಿ-ಹಾನಗಲ್ ಉಪಚುನಾವಣೆ ಫಲಿತಾಂಶ : ಇಲ್ಲಿದೆ 2 ಕ್ಷೇತ್ರಗಳ ಮತದಾನದ ಲೆಕ್ಕ

ಮಧ್ಯಾಹ್ನದ  ವೇಳೆಗೆ ಫಲಿತಾಂಶ ಬರುವ ಸಾಧ್ಯತೆ: ಚುನಾವಣಾ ಆಯೋಗ ನಿರ್ದೇಶನದನ್ವಯ ಕೋವಿಡ್ ಮಾರ್ಗಸೂಚಿಯಂತೆ ಮತ‌ ಎಣಿಕೆ ಆರಂಭ ಹಿನ್ನೆಲೆ, ಮಧ್ಯಾಹ್ನದ ವೇಳೆ ಅಧಿಕೃತ ಫಲಿತಾಂಶ ಬರುವ ಸಾಧ್ಯತೆಯಿದೆ.

Advertisement

Udayavani is now on Telegram. Click here to join our channel and stay updated with the latest news.

Next