Advertisement

By election; ಶೀಘ್ರ ಕಾಂಗ್ರೆಸ್ ಅಭ್ಯರ್ಥಿಗಳ ಹೆಸರು ಅಂತಿಮ:‌ ಎಚ್‌ ಕೆ ಪಾಟೀಲ್

01:13 PM Oct 20, 2024 | Team Udayavani |

ಹಾವೇರಿ: ಉಪ ಚುನಾವಣೆಗೆ ಶೀಘ್ರದಲ್ಲಿ ಅಭ್ಯರ್ಥಿಗಳ ಹೆಸರು ಅಂತಿಮವಾಗುತ್ತದೆ. ಶಿಗ್ಗಾವಿಯಲ್ಲಿ ಸಾಮಾಜಿಕ ನ್ಯಾಯ ಗಮನದಲ್ಲಿಟ್ಟುಕೊಂಡು ಅಭ್ಯರ್ಥಿ ಆಯ್ಕೆ ಮಾಡುತ್ತೇವೆ. ಹೈಕಮಾಂಡ್ ಗೆ ನಮ್ಮ ಅಭಿಪ್ರಾಯ ತಿಳಿಸಿದ್ದೇವೆ. ಸೋಮವಾರ (ಅ.21) ಸಂಜೆಯೊಳಗೆ ಅಭ್ಯರ್ಥಿ ಘೋಷಣೆ ಆಗಲಿದೆ ಎಂದು ಸಚಿವ ಎಚ್. ಕೆ.ಪಾಟೀಲ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ತನ್ನ ತತ್ವ ಸಿದ್ಧಾಂತಗಳನ್ನ ಬಿಡುವುದಿಲ್ಲ. ಮುಸ್ಲಿಂ ಸಮುದಾಯದ ಇಬ್ಬರು ಆಕಾಂಕ್ಷಿಗಳ ಬಳಿ ಮಾತಾಡಿ ಅಂತಿಮ ಮಾಡುತ್ತೇವೆ. ಕಾರ್ಯಕರ್ತರ ಅಭಿಪ್ರಾಯ, ನಾಯಕರ ಶಿಫಾರಸು, ಶಾಸಕರ ಅಭಿಪ್ರಾಯ ಹೈಕಮಾಂಡ್ ಗೆ ಕಳುಹಿಸಲಾಗಿದೆ ಎಂದರು.

ಶಿಗ್ಗಾವಿಯಲ್ಲಿ ಟಿಕೆಟ್ ಬದಲಾವಣೆ ಆಗುತ್ತದೆ ಎಂದು ಹೇಳಲಾಗುವುದಿಲ್ಲ. ಕಾಂಗ್ರೆಸ್ ನಲ್ಲಿ ಮ್ಯಾಚ್ ಫಿಕ್ಸಿಂಗ್ ನಡೆಯುವುದಿಲ್ಲ. ರಾಜಕಾರಣದಲ್ಲಿ ಸಾಪ್ಟ್, ಹಾರ್ಡ್ ರಾಜಕಾರಣ ಕಾಂಗ್ರೆಸ್ ನಲ್ಲಿಲ್ಲ. ಉಪಚುನಾವಣೆ ಡಿಕೆಶಿ, ಸಿದ್ದರಾಮಯ್ಯನವರ ನಾಯಕತ್ವ ಕ್ರಿಯಾಶೀಲವಾಗಿದೆ ಎಂದು ತೋರಿಸುತ್ತದೆ. ಮೂಡಾ ಪ್ರಕರಣದಲ್ಲಾದ ರಾಜಕಾರಣ ಬಗ್ಗೆ ಜನರು ಚುನಾವಣೆಯಲ್ಲಿ ಉತ್ತರ ಕೊಡುತ್ತಾರೆ ಎಂದರು.

ಚುನಾವಣೆ ಘೋಷಣೆಗೂ ಇಡಿ ರೇಡ್ ಗೂ ಏನು ಸಂಬಂಧ. ಚುನಾವಣೆ ಘೋಷಣೆ ಆಗುತ್ತಿದ್ದಂತೆ ಇಡಿ ಕ್ರಿಯಾಶೀಲವಾಯ್ತಾ? ಮುಡಾ ಪ್ರಕರಣದಲ್ಲಿ ಯಾವುದಾದರೂ ಹಣಕಾಸು ಬದಲಾವಣೆ ಆಗಿದೆಯಾ? ಯಾರಾದರೂ ಆಸ್ತಿ ತಗೊಂಡು ಓಡಿ ಹೋಗಿದ್ದಾರಾ? ರಾಜಕೀಯ ದುರುದ್ದೇಶ, ಕುತುಂತ್ರ ಪ್ರಜಾಪ್ರಭುತ್ವಕ್ಕೆ ಸೂಕ್ತವಲ್ಲ. ಇಡಿಯನ್ನು ರಾಜಕೀಯ ದುರದ್ದೇಶಕ್ಕೆ ಕೇಂದ್ರ ಬಳಸಿಕೊಳ್ಳುತ್ತಿದೆ. ಇಡಿ ಇಟ್ಟಿರುವ ಈ ಹೆಜ್ಜೆ ಆ ಸಂಸ್ಥೆಯ ಘನತೆ ಕಡಿಮೆ ಮಾಡುತ್ತದೆ. ಲೋಕಾಯುಕ್ತ ತನಿಖೆ ನಡೆಯುತ್ತಿದೆ, ಈ ಸಂದರ್ಭದಲ್ಲಿ ಇಡಿ ರೇಡ್ ಮಾಡಿದ್ದು ಯಾಕೆ? ಇಡಿ ದುರ್ಬಳಕೆ ಮಾಡಲಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next