Advertisement
ಮೂರೂ ಪಕ್ಷಗಳಿಗೂ ಉಪ ಚುನಾವಣೆ ಪ್ರತಿಷ್ಠೆಯಾಗಿದೆಯಾದರೂ “ಶತ್ರುವಿನ ಶತ್ರು ಮಿತ್ರ’ ಸಿದ್ಧಾಂತದಡಿ ಒಳ ಒಪ್ಪಂದದ ಸಾಧ್ಯತೆಗಳಿವೆ.ಬಿಜೆಪಿ ನಾಯಕರು ಜೆಡಿಎಸ್ ಸಂಪರ್ಕದಲ್ಲಿದ್ದು, ಶಿರಾದಲ್ಲಿ ಜೆಡಿಎಸ್‌ಗೆ ಸಹಕರಿಸಿ ರಾಜರಾಜೇಶ್ವರಿ ನಗರದಲ್ಲಿ ಲಾಭ ಪಡೆಯುವ ಪ್ರಯತ್ನ ನಡೆಸುತ್ತಿದ್ದಾರೆ ಎನ್ನಲಾಗುತ್ತಿದೆ. ಶಿರಾದಲ್ಲಿ ಬಿಜೆಪಿಗೆ ಅಷ್ಟಾಗಿ ನೆಲೆ ಇಲ್ಲ. ಅಲ್ಲಿ ಜೆಡಿಎಸ್‌ಗೆ ಸಹಕರಿಸಿದರೆ ಆರ್.ಆರ್. ನಗರದಲ್ಲಿ ಅವರ ಬೆಂಬಲ ಸಿಗಬಹುದಾ ಎಂಬ ಲೆಕ್ಕಾಚಾರದಲ್ಲಿ ಬಿಜೆಪಿ ನಾಯಕರಿದ್ದಂತಿದೆ.
ಜೆಡಿಎಸ್‌ನಲ್ಲಿರುವ ಹನುಮಂತ ರಾಯಪ್ಪ ಅವರು ರಾಜರಾಜೇಶ್ವರಿ ನಗರದಲ್ಲಿ ಪುತ್ರಿ ಕುಸುಮಾ ಡಿ.ಕೆ. ರವಿ ಅವರನ್ನು ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಸಲು ಪ್ರಯತ್ನಿಸುತ್ತಿದ್ದಾರೆ. ಜತೆಗೆ ಪುತ್ರಿಗೆ ಜೆಡಿಎಸ್ ಬೆಂಬಲ ಪಡೆಯುವ ಕಸರತ್ತು ನಡೆಸುತ್ತಿದ್ದಾರೆ ಎಂದೂ ಹೇಳ ಲಾಗುತ್ತಿದೆ. ಇದರ ಹಿಂದೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಕಾರ್ಯತಂತ್ರವಿದೆ ಎನ್ನಲಾಗುತ್ತಿದೆ. ಆರ್.ಆರ್. ನಗರದಲ್ಲಿ ಮುನಿ ರತ್ನರನ್ನು ಸೋಲಿಸಲು ಡಿಕೆಶಿ ಸಹೋದರರು ಪಣ ತೊಟ್ಟಿದ್ದಾರೆ. ಜೆಡಿಎಸ್‌ಗೆ ಶಿರಾ ಪ್ರತಿಷ್ಠೆ
ಶಿರಾವನ್ನು ಉಳಿಸಿಕೊಳ್ಳುವುದು ಜೆಡಿಎಸ್‌ಗೆ ಹಾಗೂ ಆರ್.ಆರ್. ನಗರದಲ್ಲಿ ಗೆಲ್ಲುವುದು ಬಿಜೆಪಿಗೆ ಪ್ರತಿಷ್ಠೆಯ ವಿಷಯವಾಗಿದೆ. ಬಿಜೆಪಿ ಹಾಗೂ ಜೆಡಿಎಸ್‌ನ ಏಕೈಕ ಗುರಿ ಕಾಂಗ್ರೆಸ್ ಮಣಿಸುವುದು. ಬಿಎಸ್‌ವೈ- ಎಚ್‌ಡಿಕೆ ಪದೇಪದೆ ಭೇಟಿ ನಡೆಸಿದ್ದರ ಮರ್ಮವೂ ಇದೇ ಎನ್ನಲಾಗುತ್ತಿದೆ.
Related Articles
ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಕಾಂಗ್ರೆಸ್ ಟಿಕೆಟ್‌ಗಾಗಿ ಮಾಜಿ ಶಾಸಕ ಬಾಲಕೃಷ್ಣ, ರûಾ ರಾಮಯ್ಯ ಹಾಗೂ ಪ್ರಿಯಾ ಕೃಷ್ಣ ಅವರ ಹೆಸರುಗಳು ಪ್ರಸ್ತಾವವಾಗಿವೆ. ಈ ನಡುವೆ ದಿವಂಗತ ಐಎಎಸ್ ಅಧಿಕಾರಿ ಡಿ.ಕೆ. ರವಿ ಪತ್ನಿ ಕುಸುಮಾ ಆದಿಚುಂಚನಗಿರಿ ಸ್ವಾಮೀಜಿಯನ್ನು ಭೇಟಿ ಮಾಡಿ ಆಶೀರ್ವಾದ ಪಡೆದು ಕೊಂಡಿದ್ದು, ಅವರೂ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ ಎನ್ನಲಾಗಿದೆ. ಗುರುವಾರ ಕ್ಷೇತ್ರದ ಮುಖಂಡರ ಜತೆ ಚರ್ಚಿಸಿದ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಚುನಾವಣ ಉಸ್ತುವಾರಿ ಡಿ.ಕೆ. ಸುರೇಶ್ ಅವರು, ನಾಲ್ವರ ಹೆಸರು ಸಭೆಯಲ್ಲಿ ಪ್ರಸ್ತಾವವಾಗಿದೆ. ಯಾರೇ ಸ್ಪರ್ಧಿಸಿದರೂ ಡಿ.ಕೆ.ಸುರೇಶ್ ಅವರೇ ಕಣದಲ್ಲಿದ್ದಾರೆ ಎಂದು ಭಾವಿಸಿ ಪಕ್ಷಕ್ಕಾಗಿ ದುಡಿಯಬೇಕೆಂದು ಕಾರ್ಯ ಕರ್ತರಿಗೆ ತಿಳಿಸಲಾಗಿದೆ ಎಂದರು.
Advertisement
ಎಸ್. ಲಕ್ಷ್ಮೀನಾರಾಯಣ