Advertisement
ಬೆಳಿಗ್ಗೆ ಏಳು ಗಂಟೆಗೆ ಮತದಾನ ಪ್ರಕ್ರಿಯೆ ಆರಂಭವಾಗಿದೆ. ಕೋವಿಡ್ ಕಾಲದಲ್ಲಿ ನಡೆಯುತ್ತಿರುವ ಚುನಾವಣೆಯಾದ ಕಾರಣ ಎಲ್ಲಾ ಸೂಕ್ತ ಮುಂಜಾಗೃತೆ ವಹಿಸಿ ಮತದಾನಕ್ಕೆ ಅವಕಾಶ ಮಾಡಿಕೊಡಲಾಗಿದೆ.
Related Articles
Advertisement
ನಟಿ ಅಮೂಲ್ಯ ಅವರು ಕುಂಟುಂಬವ ಸಮೇತ ಆಗಮಿಸಿ ಆರ್.ಆರ್. ನಗರದ ಬಿಇಟಿ ಕಾನ್ವೆಂಟ್ ಮತಗಟ್ಟೆಯಲ್ಲಿ ಮತ ಚಲಾಯಿಸಿದರು. ನಟಿ ಅಮೂಲ್ಯ ಅವರು ಬಿಜೆಪಿ ಅಭ್ಯರ್ಥಿ ಮುನಿರತ್ನ ಪರ ಚುನಾವಣೆ ಪ್ರಚಾರ ಮಾಡಿದ್ದರು.
ಶಿರಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಾಜೇಶ್ ಗೌಡ ಅವರು ಇಂದು ಮತದಾನ ನಡೆಸಿದರು. ರಾಜೇಶ್ ಗೌಡ ಅವರು ಇದು ಮೊದಲ ಬಾರಿಗೆ ಚುನಾವಣೆಗೆ ಸ್ಪರ್ಧಿಸುತ್ತಿದ್ದು, ಬಿಜೆಪಿ ಟಿಕೆಟ್ ನಲ್ಲಿ ಸ್ಪರ್ಧೆ ನಡೆಸುತ್ತಿದ್ದಾರೆ.
ಆರ್.ಆರ್. ನಗರದ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಮತ ಚಲಾಯಿಸಿದ್ದು, ಜ್ಞಾನ ಅಭ್ಯರ್ಥಿ ವಾರ್ಡ್ ನಲ್ಲಿ ಮತದಾನ ಮಾಡಿದರು. ಮತದಾನಕ್ಕೂ ಮೊದಲು ದೇವಸ್ಥಾನಗಳಿಗೆ ಭೇಟಿ ನೀಡಿದ ಕುಸುಮಾ ನಂತರ ಮತ ಚಲಾಯಿಸಿದರು.