Advertisement

2020ರ ವೇಳೆಗೆ ರಾಜ್ಯ ವಿದ್ಯುತ್‌ ಕ್ಷಾಮ ಮುಕ್ತ

03:45 AM Jan 27, 2017 | |

ಬೆಂಗಳೂರು: ಕರ್ನಾಟಕವು 2020ರ ವೇಳೆಗೆ ವಿದ್ಯುತ್‌ ಸಮಸ್ಯೆ ಮುಕ್ತ ರಾಜ್ಯವಾಗಲಿದೆ ಎಂಬ ಆಶಯ ವ್ಯಕ್ತಪಡಿಸಿರುವ ರಾಜ್ಯಪಾಲ ವಜುಭಾಯಿ ವಾಲಾ, ಇದಕ್ಕಾಗಿ ಸರ್ಕಾರದಿಂದ ಹಲವು ಹೊಸ ಯೋಜನೆಗಳನ್ನು ಪ್ರಾರಂಭಿಸಲಾಗಿದೆ ಎಂದು ಹೇಳಿದ್ದಾರೆ.

Advertisement

ದೇಶದ 68ನೇ ಗಣರಾಜ್ಯೋತ್ಸವದ ಅಂಗವಾಗಿ ಬುಧವಾರ ಬೆಂಗಳೂರಿನ ಮಾಣೆಕಷಾ ಪರೇಡ್‌ ಮೈದಾನದಲ್ಲಿ ನಗರ ಜಿಲ್ಲಾಡಳಿತ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಬಿಬಿಎಂಪಿ ವತಿಯಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿದ ಬಳಿಕ ಅವರು ಮಾತನಾಡಿದರು.

ರಾಜ್ಯದಲ್ಲಿ ವಿದ್ಯುತ್‌ ಅಭಾವ ನೀಗಿಸಲು “2020ನೇ ವರ್ಷದ ಒಳಗಾಗಿ ಎಲ್ಲರಿಗೂ ವಿದ್ಯುತ್‌’ ಎಂಬ ಉದ್ದೇಶದೊಂದಿಗೆ ಹೊಸ ಯೋಜನೆಗಳನ್ನು ಆರಂಭಿಸಲಾಗಿದೆ. ಕರ್ನಾಟಕವು ವಿವಿಧ ಮೂಲಗಳಿಂದ 3,657 ಮೆ.ವ್ಯಾ. ಹೆಚ್ಚುವರಿ ವಿದ್ಯುತ್‌ ಉತ್ಪಾದಿಸಲು ಕೆಲವೊಂದು ಉಪಕ್ರಮಗಳನ್ನು ಕೈಗೊಂಡಿದೆ. ಅದರಲ್ಲಿ ಪ್ರಸರಣಾ ಕಾರ್ಯಜಾಲದ ಬಲವರ್ಧನೆ, ಗಂಗಾ ಕಲ್ಯಾಣ ಯೋಜನೆ, ಕುಡಿಯುವ ನೀರಿನ ಪೂರೈಕೆ ಮತ್ತು ನೀರಾವರಿ ಪಂಪ್‌ಸೆಟ್‌ಗಳ ಸಾಧನಗಳನ್ನು ಅಳವಡಿಸುವುದು, ಟ್ರಾನ್ಸ್‌ಫಾರ್ಮರ್‌ ಬ್ಯಾಂಕುಗಳು ಮತ್ತು ದುರಸ್ತಿ ಕೇಂದ್ರಗಳ ಸ್ಥಾಪನೆ, ಆಪ್ತ ಸಲಹಾ ಕೇಂದ್ರ, ಗಣಕೀಕೃತ ಗ್ರಾಹಕ ಕುಂದುಕೊರತೆ ನಿವಾರಣಾ ಕೇಂದ್ರ ಸ್ಥಾಪನೆ ಇತ್ಯಾದಿ ಪ್ರಮುಖವಾಗಿದ್ದು, ಇವುಗಳ ಮೂಲಕ ವಿದ್ಯುತ್‌ ಉತ್ಪಾದನೆಯಲ್ಲಿ ಹೆಚ್ಚಳ ಸಾಧಿಸಲು ಉದ್ದೇಶಿಸಲಾಗಿದೆ ಎಂದರು.

ಸ್ವತ್ಛ ಭಾರತ ಅಭಿಯಾನದಡಿ “ಸ್ವತ್ಛ ಕರ್ನಾಟಕ’ವನ್ನಾಗಿ ಮಾಡುವಲ್ಲಿ ಕರ್ನಾಟಕ ರಾಜ್ಯವು ಶ್ಲಾಘನೀಯ ಮೈಲುಗಲ್ಲು ಸಾಧಿಸಿದೆ. ಮೈಸೂರು ನಗರಕ್ಕೆ ದೇಶದ ಅತ್ಯುತ್ತಮ ಹಾಗೂ ಮೊದಲ “ಸ್ವತ್ಛ ನಗರ’ ಪ್ರಶಸ್ತಿ ಸಿಕ್ಕಿರುವುದು ಹೆಮ್ಮೆಯ ಸಂಗತಿ. “ಸ್ಮಾರ್ಟ್‌ ಸಿಟಿ ಮಿಷನ್‌’ ಯೋಜನೆಗೆ 2016-17ನೇ ಸಾಲಿನಲ್ಲಿ 776 ಕೋಟಿ ರೂ. ಬಿಡುಗಡೆ ಮಾಡಲಾಗಿದ್ದು, 2017-18ನೇ ಅವಧಿಗೆ 1,188 ಕೋಟಿ ರೂ. ಬಿಡುಗಡೆ ಮಾಡಲಾಗುತ್ತಿದೆ. ಕರ್ನಾಟಕದ ಜನತೆ ರಾಜ್ಯದ ಸರ್ವತೋಮುಖ ಬೆಳವಣಿಗೆಗೆ ಅನುಕೂಲಕರ ಪರಿಸರ ಸೃಷ್ಟಿಸುವ ಮೂಲಕ ವೈಶಿಷ್ಠéತೆ ಮೆರೆದಿದ್ದಾರೆ. ರಾಜ್ಯ ಸರ್ಕಾರ ಹಾಗೂ ಉದ್ಯಮಿಗಳು, ಸರ್ಕಾರೇತರ ಸಂಸ್ಥೆಗಳು ತೆಗೆದುಕೊಂಡ ಉಪಕ್ರಮಗಳಿಂದಾಗಿ ಮಹತ್ವದ ಪ್ರಗತಿ ಸಾಧಿಸಲಾಗಿದೆ. ರಾಜ್ಯ ಸರ್ಕಾರ ಕೈಗೊಂಡ ಕ್ರಮಗಳ ಬಗ್ಗೆ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕವನ್ನು ಗುರುತಿಸಲಾಗಿದೆ. ಶಕ್ತಿಶಾಲಿ ಭಾರತ ನಿಮಾರ್ಣದಲ್ಲಿ ಕರ್ನಾಟಕ ಮಹತ್ವಪೂರ್ಣ ಕೊಡುಗೆ ನೀಡಲಿದೆ ಎಂದರು.

ಹೂಡಿಕೆಯಲ್ಲಿ ಪ್ರಥಮ ಸ್ಥಾನ: ಕೇಂದ್ರ ಸರ್ಕಾರದ ಔದ್ಯಮಿಕ ನೀತಿ ಮತ್ತು ಸಂವರ್ಧನಾ ಇಲಾಖೆಯ ವರದಿಯಂತೆ 2016ರ ಜನವರಿಯಿಂದ ಸೆಪ್ಟಂಬರ್‌ವರೆಗಿನ ಬಂಡವಾಳ ಹೂಡಿಕೆಯಲ್ಲಿ ಕರ್ನಾಟಕ ಪ್ರಥಮ ಸ್ಥಾನದಲ್ಲಿದೆ. ರಾಜ್ಯದಲ್ಲಿ 1.40 ಲಕ್ಷ ಕೋಟಿ ರೂ. ಹೂಡಿಕೆಯೊಂದಿಗೆ 15 ಲಕ್ಷ ಉದ್ಯೋಗ ಸೃಷ್ಟಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದರು. ಇದಲ್ಲದೆ ರಾಜ್ಯ ಸರ್ಕಾರದ ಸಾಧನೆಗಳ ಪಟ್ಟಿಯನ್ನೇ ಅವರು ಮುಂದಿಟ್ಟರು.

Advertisement

ಉತ್ತಮ ಆಡಳಿತ ಮತ್ತು ಪ್ರಗತಿ ನಿಶ್ಚಿತಗೊಳಿಸುವ ದೃಷ್ಠಿಯಿಂದ ನಾಗರಿಕತೆ, ಸಂಸ್ಕೃತಿ ಮತ್ತು ಪರಂಪರೆ-ಸಂಪ್ರದಾಯ ಅರಿತುಕೊಳ್ಳಲು ಅವಶ್ಯಕವಾಗಿರುವ ಹಸ್ತಪ್ರತಿಗಳು ಮತ್ತು ಉಪನಿಷತ್ತುಗಳ ಸ್ಮರಣೆ ಮತ್ತು ಸಂರಕ್ಷಣೆ ಮಾಡಬೇಕು. ಬಹುಭಾಷೆ, ಬಹು ಜನಾಂಗ, ಬಹು ಸಂಸ್ಕೃತಿಯ ನಮ್ಮ ದೇಶದಲ್ಲಿ ವಿವಿಧತೆಯಲ್ಲಿ ಏಕತೆಯ ಸಂದೇಶ ನೀಡಿ ಶಾಂತಿ-ಸಾಮರಸ್ಯ ಮೂಡಿಸಬೇಕು.
– ವಜುಭಾಯಿ ವಾಲಾ, ರಾಜ್ಯಪಾಲ

ಸರ್ವೋತ್ತಮ ಸೇವಾ ಸನ್ಮಾನ
ಬೆಂಗಳೂರು:
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಕೆ.ಎ.ದಯಾನಂದ ಸೇರಿದಂತೆ ಅತ್ಯುತ್ತಮ ಸೇವೆ ಸಲ್ಲಿಸಿದ 12 ಮಂದಿ ಸರ್ಕಾರಿ ಅಧಿಕಾರಿಗಳಿಗೆ ಸರ್ವೋತ್ತಮ ಸೇವಾ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ಮಾಣಿಕ್‌ ಷಾ ಪರೇಡ್‌ ಮೈದಾನದಲ್ಲಿ ಆಯೋಜಿಸಿದ್ದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಪ್ರಶಸ್ತಿ ಪ್ರದಾನ ಮಾಡಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಕೆ.ಎ.ದಯಾನಂದ, ಖಜಾನೆ ಇಲಾಖೆ ನಿರ್ದೇಶಕಿ ಕೆ.ಜ್ಯೋತಿ, ಕಾರಾಗೃಹ ಇಲಾಖೆ ಪ್ರಥಮ ದರ್ಜೆಸಹಾಯಕ ಎಸ್‌.ಮಂಜುನಾಥ್‌, ಯಲಹಂಕ ಸಾರ್ವಜನಿಕ ಆಸ್ಪತ್ರೆಯ ಡಾ.ಎನ್‌.ಜಯಲಕ್ಷಿ¾à, ತಾಂತ್ರಿಕ ಶಿಕ್ಷಣ ಇಲಾಖೆಯ ವಾಹನ ಚಾಲಕ ಬಷೀರ್‌ ಅಹಮದ್‌, ಅರಣ್ಯ ಇಲಾಖೆಯ ಜಮೇದಾರ್‌ ಕೆ.ಟಿ.ಜಗದೀಶ್‌, ವಿಜಯಪುರ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ ಹಿರಿಯ ಮೋಟಾರು ವಾಹನ ನಿರೀಕ್ಷಕ ವಿ.ಪಿ.ರಮೇಶ್‌, ಧರ್ಮಸ್ಥಳ ಪಶುವೈದ್ಯ ಆಸ್ಪತ್ರೆಯ ಜಾನುವಾರು ಅಧಿಕಾರಿಜಯಕೀರ್ತಿ ಜೈನ್‌, ಬಾಗಲಕೋಟೆಯ ಭೂದಾಖಲೆಗಳ ಉಪನಿರ್ದೇಶಕ ಜಗದೇವಪ್ಪ ಆರ್‌.ರೂಗಿ, ಮೂಡಿಗೆರೆ ತಾಲೂಕು ಕಳಸ ಹೋಬಳಿ ರಾಜಸ್ವ ನಿರೀಕ್ಷಕ ಕೀರ್ತಿ ಜೈನ್‌, ತೋಟಗಾರಿಕೆ (ಹನಿ ನೀರಾವತಿ) ಜಂಟಿ ನಿರ್ದೇಶಕ ಶಕೀಲ್‌ ಅಹಮದ್‌ ಮತ್ತು ಶಿವಮೊಗ್ಗ ಮೆಗ್ಗಾನ್‌ ಜಿÇÉಾಸ್ಪತ್ರೆ ಶುಶ್ರೂಷಕಿ ಡಿ.ಬಿ.ಶಕುಂತಲಗೆ ಸರ್ವೋತ್ತಮ ಸೇವಾ ಪ್ರಶಸ್ತಿ ನೀಡಿ ಗೌರವಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next