Advertisement

ದುಬೈ ವಿಶ್ವ ಸೂಪರ್‌ ಸೀರೀಸ್‌ ಫೈನಲ್‌ ಪ್ರಶಸ್ತಿ ಸುತ್ತಿಗೇರಿದ ಸಿಂಧು

07:35 AM Dec 17, 2017 | |

ದುಬೈ: ಪ್ರತಿಷ್ಠಿತ ಬಿಡಬ್ಲ್ಯುಎಫ್ ದುಬೈ ವಿಶ್ವ ಸೂಪರ್‌ ಸೀರೀಸ್‌ ಫೈನಲ್‌ ಕೂಟದಲ್ಲಿ ಭಾರತದ ಭರವಸೆಯ ಶಟ್ಲರ್‌ ಪಿವಿ ಸಿಂಧು ಪ್ರಶಸ್ತಿ ಸುತ್ತಿಗೇರಿದ್ದಾರೆ. ಶನಿವಾರ ನಡೆದ ಕಠಿನ ಸೆಮಿಫೈನಲ್‌ ಹೋರಾಟದಲ್ಲಿ ಸಿಂಧು ಅವರು ಚೀನದ ಎಂಟನೇ ರ್‍ಯಾಂಕಿನ ಚೆನ್‌ ಯುಫೆಯಿ ಅವರನ್ನು ನೇರ ಗೇಮ್‌ಗಳಿಂದ ಉರುಳಿಸಿದರು.

Advertisement

ಲೀಗ್‌ ಹಂತದಲ್ಲಿ ಆಡಿದ ಮೂರು ಪಂದ್ಯಗಳಲ್ಲಿ ಗೆಲುವು ಸಾಧಿಸಿ ಸೆಮಿಫೈನಲ್‌ ತಲುಪಿದ್ದ ಸಿಂಧು ಇಲ್ಲಿಯೂ ಅಮೋಘ ಆಟವಾಡಿ ಯುಫೆಯಿ ಅವರನ್ನು ಮಣಿಸಿದರು. ಪ್ರಶಸ್ತಿ ಸುತ್ತಿನಲ್ಲಿ ಸಿಂಧು ಮತ್ತೆ ವಿಶ್ವದ ಎರಡನೇ ರ್‍ಯಾಂಕಿನ ಜಪಾನಿನ ಅಕಾನೆ ಯಮಗುಚಿ ಅವರನ್ನು ಎದುರಿಸಲಿದ್ದಾರೆ. ಯಮಗುಚಿ ಇನ್ನೊಂದು ಸೆಮಿಫೈನಲ್‌ ಪಂದ್ಯದಲ್ಲಿ ಥಾçಲಂಡಿನ ರಚನಾಕ್‌ ಇಂತನಾನ್‌ ಅವರನ್ನು 17-21, 21-12, 21-19 ಗೇಮ್‌ಗಳಿಂದ ಸೋಲಿಸಿದ್ದರು.

ಲೀಗ್‌ ಹಂತದಲ್ಲಿ ಸಿಂಧು ಅವರು ಯಮಗುಚಿ ಅವರನ್ನು 21-9, 21-13 ಗೇಮ್‌ಗಳಿಂದ ಸೋಲಿಸಿ ಅಜೇಯರಾಗಿ ಮುನ್ನಡೆದಿದ್ದರು. ಇದೀಗ ಮತ್ತೆ ಅವರನ್ನು ಮಣಿಸಿ ಪ್ರಶಸ್ತಿ ಗೆಲ್ಲುವ ನಿರೀಕ್ಷೆಯನ್ನು ಸಿಂಧು ಇಟ್ಟುಕೊಂಡಿದ್ದಾರೆ.

ತೀವ್ರ ಹೋರಾಟ ನೀಡಿದ ಯುಫೆಯಿ ಅವರನ್ನು ಸಿಂಧು 21-15, 21-18 ಗೇಮ್‌ಗಳಿಂದ ಸೋಲಿಸಿ ಫೈನಲಿಗೇರಿದರು. ಈ ಮೂಲಕ ಯುಫೆಯಿ ವಿರುದ್ಧ ತಮ್ಮ ಗೆಲುವಿನ ದಾಖಲೆಯನ್ನು 4-2ಕ್ಕೇರಿಸಿದರು. 2017ರಲ್ಲಿ ಅವರು ಈ ಹಿಂದೆ ನಾಲ್ಕು ಬಾರಿ ಎದುರಾಗಿದ್ದು 2-2 ಸಮಬಲ ಹೊಂದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next