Advertisement

ಆಕ್ಸಿಜನ್‌ ಯಂತ್ರ ಖರೀದಿ, ದೇಣಿಗೆ ಸಂಗ್ರಹಿಸುತ್ತಿರುವ ಯುಕೆ ಕನ್ನಡಿಗರು

01:15 PM Jun 05, 2021 | Team Udayavani |

ಕೊರೊನಾ ಸಂಕಷ್ಟವನ್ನು ಎದುರಿಸುತ್ತಿರುವ ಭಾರತಕ್ಕೆ ವಿಶ್ವದೆಲ್ಲೆಡೆ ಯಿಂದ ನೆರವಿನ ಮಹಾಪೂರ ಹರಿದುಬರುತ್ತಿದೆ. ತಮ್ಮ ತಾಯ್ನಾಡಿನ ಬವಣೆಯನ್ನು ಹಂಚಿಕೊಳ್ಳಲು ಪಣ ತೊಟ್ಟು ನಿಂತಿರುವ ಯುಕೆ ಕನ್ನಡಿಗರು ಈ ಬವಣೆಯಿಂದ ಎಲ್ಲರೂ ಪಾರಾಗಲಿ ಎಂದು ಪ್ರಾರ್ಥಿಸುವುದರೊಂದಿಗೆ ವಿವಿಧ ರೀತಿಯಲ್ಲಿ ನೆರವು ನೀಡಲು ಜನರನ್ನು ಒಗ್ಗೂಡಿಸಿ ಕರ್ನಾಟಕದ ಮೂಲೆ ಮೂಲೆಗೂ ಸಹಾಯ ತಲುಪುವಂತೆ ಮಾಡಲು ಪ್ರಯತ್ನಿಸುತ್ತಿದೆ.

Advertisement

ಚಾರಿಟಿ ಸಂಸ್ಥೆಯಾದ ಕನ್ನಡ ಬಳಗ ಯುಕೆಯು  ರೋಟರಿ ಕ್ಲಬ್‌ ಬೆಂಗಳೂರು ಸಹಯೋಗದಿಂದ ಆಕ್ಸಿಜನ್‌ ಮೆಶಿನ್‌ಗಳ ಪೂರೈಕೆಯ ಸಲುವಾಗಿ ಈಗಾಗಲೇ 31,000 ಕ್ಕೂ ಹೆಚ್ಚು ಪೌಂಡ್‌  ದೇಣಿಗೆ ಸಂಗ್ರಹಿಸಿದ್ದು, ಈಗಾಗಲೇ 70 ಪ್ರೀಮಿಯಂ ಗ್ರೇಡ್‌ ಆಕ್ಸಿಜನ್‌ ಕಾನ್ಸಂಟ್ರೇಶನ್‌ಗಳನ್ನು ಬೆಂಗಳೂರಿಗೆ ಕಳುಹಿಸಿದೆ. ಇಲ್ಲಿಯವರಿಗೆ ಕನ್ನಡಿಗರು ಯುಕೆ ವತಿಯಿಂದ ಹತ್ತು ಸಾವಿರ ಪೌಂಡ್‌ಗಳಿಗಿಂತಲೂ ಹೆಚ್ಚು ಮೊತ್ತ ಸೇರಿದ್ದು, ಇದನ್ನು ಈ ರೀತಿ ಉಪಯೋಗಿಸುವ ಯೋಜನೆ ರೂಪಿಸಿದೆ. ಅರ್ಧದಷ್ಟು ಹಣವನ್ನು ಮುಖ್ಯಮಂತ್ರಿಗಳ ಕೋವಿಡ್‌-19 ಪರಿಹಾರ ನಿಧಿಗೆ ವರ್ಗಾಯಿಸುವುದು,

ಯುಕೆಯಲ್ಲಿನ ಕನ್ನಡ  ಸಮುದಾಯವು ನೀಡಿದ ಉಳಿದ ನಿಧಿಯನ್ನು ಆಸ್ಪತ್ರೆಗಳಿಗೆ ನೇರವಾಗಿ ಆಕ್ಸಿಜನ್‌ ಕಾನ್ಸಂಟ್ರೇಶನ್‌ಮತ್ತು ಇನ್ನಿತರ ಉಪಕರಣಗಳನ್ನು ಪಡೆಯಲು ಬಳಸುವುದು ಹಾಗೂ  ಹೆಚ್ಚು ಅಗತ್ಯವಿರುವ ಜಿÇÉೆಗಳಿಗೆ ಕಳುಹಿಸುವುದು.  ಆಕ್ಸಿಜನ್‌ ಕಾನ್ಸಂಟ್ರೇಶನ್‌ ಮತ್ತು ಇನ್ನಿತರ ಉಪಕರಣಗಳನ್ನು ಆಸ್ಪತ್ರೆ ಉಪಕರಣಗಳ ಉತ್ಪಾದನೆಯ ಕುರಿತಾಗಿ ಭಾರತ ಹಾಗೂ ಹೊರದೇಶದ ಕಂಪೆನಿಗಳ ಸಂಪರ್ಕದಲ್ಲಿದ್ದು, ಇವುಗಳ  ವ್ಯವಸ್ಥೆ ಮಾಡುವಲ್ಲಿ ಶ್ರಮಿಸುತ್ತಿದೆ.

ಯುಕೆ ಮತ್ತು ಯುರೋಪ್‌ನಲ್ಲಿ ಜಾರಿಗೆ ತರಲಾದ ವಿಭಿನ್ನ ಮಾಹಿತಿ ತಂತ್ರದ ಬಗ್ಗೆ ಸಂಶೋಧನೆ, ಅಧ್ಯಯನ ಮತ್ತು ಕೋವಿಡ್‌ ಸೂಕ್ತ ನಡವಳಿಕೆಯನ್ನು ಉತ್ತೇಜಿಸಲು ಮತ್ತು ಕರ್ನಾಟಕದಲ್ಲಿ ಕೋವಿಡ್‌ ಲಸಿಕೆಯ  ಪ್ರಯೋಜನಗಳನ್ನು ಜನರಿಗೆ ತಿಳಿಸುವ ಉದ್ದೇಶದಿಂದ ಸ್ವಯಂ ಪ್ರೇರಿತ ತಂಡವು ಈಗಾಗಲೇ ಕೆಲಸ ಮಾಡುತ್ತದೆ. ಕರ್ನಾಟಕದ ಜನರನ್ನು ತಲುಪಲು ವಿವಿಧ ಸಾಮಾಜಿಕ ಮಾಧ್ಯಮ ಮತ್ತು ವಾಟ್ಸ್‌ಆ್ಯಪ್‌ ಗುಂಪುಗಳಲ್ಲಿ ರಚಿಸಲಾದ ಮೇಲಾಧಾರಗಳನ್ನು ಹಂಚಿಕೊಂಡು, ಅನುಷ್ಠಾನದಲ್ಲಿ ಯೋಜನೆ ಮತ್ತು ತಾಂತ್ರಿಕ ಒಳಹರಿವುಗಳಿಗೆ ಸಹಾಯ ಮಾಡಿ ಸಾಮಾನ್ಯ ಜನರಿಗೆ ನೆರವಾಗುವಂತೆ ಕೆಲವು ಯೋಜನೆಗಳನ್ನು ಹಮ್ಮಿಕೊಂಡಿದೆ.

ಅಷ್ಟೇ ಅಲ್ಲದೆ ಯೋಜನಾ ಇಲಾಖೆ, ಕರ್ನಾಟಕ ಸರಕಾರ ಸಿಎಸ್‌ ಆರ್‌ ಸಹಯೋಗಯೊಂದಿಗೆ ನೆರವು ನೀಡುವವರಿಗೆ ತಾಲೂಕು ಆಸ್ಪತ್ರೆಗಳ ವಿವರಗಳು ಮತ್ತು ಕರ್ನಾಟಕದ ಅವಶ್ಯಕತೆಗಳು ಬಗ್ಗೆ ಹೆಚ್ಚು ವಿವರಗಳು ಕನ್ನಡಿಗರು ಯುಕೆ ಜಾಲತಾಣದಲ್ಲಿ ದೊರಕುತ್ತದೆ. ಆಯಾ ಜಿÇÉಾ ಆರೋಗ್ಯಾಧಿಕಾರಿ ಮತ್ತು ಡಿಸಿಯೊಡನೆ ಆಸಕ್ತ ದಾನಿಗಳಿಗೆ ನೇರ ಸಂಪರ್ಕ ಕಲ್ಪಿಸುವಲ್ಲಿ   ಕನ್ನಡಿಗರು ಯುಕೆ  ಸೇತುವೆಯಾಗಿದೆ.

Advertisement

ಈ ಎಲ್ಲ ನಿಧಿ ಸಂಗ್ರಹ ಹಾಗೂ ಕರ್ನಾಟಕ ಸರಕಾರದೊಂದಿಗೆ ಸಮಾಲೋಚನೆ ನಡೆಸುತ್ತಿರುವ ಅನಿವಾಸಿ ಕನ್ನಡಿಗರ (ಕನ್ನಡಿಗರು ಯುಕೆ) ಪರವಾಗಿ ಗಣಪತಿ ಭಟ್‌ ಅವರು ತಮ್ಮ ಸಂಸ್ಥೆಯ ಕೆಲವು ಯೋಜನೆಗಳಾದ ಯುಎನ್‌ ಅಭಿವೃದ್ಧಿ ಕಾರ್ಯಕ್ರಮ,  ಖಈಎs ಸಹಯೋಗದಿಂದ  ಸ್ಥಳೀಯ ಸಂಘಗಳನ್ನು ಕಟ್ಟಿ ಆಂಗ್ಲ ಕನ್ನಡಿಗರ ಸಹಯೋಗದೊಂದಿಗೆ ಜನಜಾಗೃತಿಯನ್ನು ಮೂಡಿಸುತ್ತಿದ್ದಾರೆ.

ಯುಕೆ ಭಾರತೀಯ ಸಮುದಾಯದ ಪರವಾಗಿ ಕೆಲವು ಸಂಘ ಸಂಸ್ಥೆಗಳಾದ ಅಮಿತ್‌ ಕಚ್ಚಾ ಮತ್ತು ಅವರ ತಂಡದಿಂದ  5 ಕೋಟಿಗಿಂತಲೂ ಹೆಚ್ಚು, ಆಅಕಐO ಇಂಡಿಯಾ ವತಿಯಿಂದ 1 ಕೋಟಿಗಿಂತಲೂ ಅಧಿಕ ಹಣ ಸಂಗ್ರಹವಾಗಿದೆ. ಬ್ರಿಟಿಷ್‌ ಏಶಿಯನ್‌ ಟ್ರÓr… ಕೂಡ ಹಣ ಸಂಗ್ರಹದಲ್ಲಿ ನಿರತವಾಗಿದೆ. ಒಟ್ಟಿನಲ್ಲಿ ಕರ್ನಾಟಕದ ಜನರಿಗೆ ಯಾವುದೇ ರೀತಿಯ ಸಹಾಯ ಬೇಕಾದರೂ ಮಾಡಲು ಯುಕೆ ಕನ್ನಡಿಗರು ಸಿದ್ಧತೆ ನಡೆಸಿದ್ದಾರೆ.

– ರಾಧಿಕಾ ಜೋಶಿ, ಲಂಡನ್‌

Advertisement

Udayavani is now on Telegram. Click here to join our channel and stay updated with the latest news.

Next