Advertisement

ಕೋವಿಡ್ ನಂತರ ದಿನಗಳಲ್ಲಿ ಉದ್ಯಮ ಕ್ಷೇತ್ರಗಳು ಯಥಾ ಸ್ಥಿತಿಯಲ್ಲಿರಲ್ಲ : ಅಮಿತಾಬ್ ಕಾಂತ್

03:26 PM Jun 13, 2021 | |

ನವ ದೆಹಲಿ : ಕೋವಿಡ್ ಮುಗಿದ ನಂತರದಲ್ಲಿ  ಉದ್ಯಮ ಕ್ಷೇತ್ರಗಳಲ್ಲಿ ಹಲವು ಬದಲಾವಣೆಗಳು ಆಗಲಿವೆ. ಯಥಾ ಸ್ಥಿತಿಯಲ್ಲಿ ಇರಲಾರದು ಎಂದು  ನೀತಿ ಆಯೋಗದ ಸಿಇಒ ಅಮಿತಾಬ್ ಕಾಂತ್ ಹೇಳಿದ್ದಾರೆ.

Advertisement

ಉದ್ಯಮ ಸರಳೀಕರಣದಲ್ಲಿ ಇನ್ನಷ್ಟು ಸರಳತೆಯನ್ನು ತರುವ ಅಗತ್ಯವಿದೆ. ಈಗಿರುವ ಒಂದಷ್ಟು ನಿಯಮಗಳನ್ನು ತೆಗೆದುಹಾಕಬೇಕಾಗುತ್ತದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

ಇದನ್ನೂ ಓದಿ : ರಾಯ್ ಡಿಸೋಜ ಸಾವಿನ ಪ್ರಕರಣ: 8 ಪೊಲೀಸರು ಅಮಾನತು:ಹುದ್ದೆಯಿಂದ ವಜಾಗೊಳಿಸಲು ಮೃತರ ತಾಯಿ ಆಗ್ರಹ

ಈ ಬಗ್ಗೆ ಔರಂಗಾಬಾದ್ ಇಂಡಸ್ಟ್ರಿಯಲ್ ಸಿಟಿ ಹಾಗೂ ಮರಾಠವಾಡ ಆಟೋ ಕ್ಲಸ್ಟರ್ ಗೆ ಭೇಟಿ ನೀಡಿ ಮಾತನಾಡಿದ ಕಾಂತ್, ಕೋವಿಡ್ ಸಾಂಕ್ರಾಮಿಕೋತ್ತರ ಉದ್ಯಮ ಕ್ಷೇತ್ರಗಳು ಎಂದಿನಂತೆ ಇರುವುದಿಲ್ಲ, ಕೋವಿಡ್ ನಂತರದ ದಿನಗಳಲ್ಲಿ ಸಾಧ್ಯವಾದಷ್ಟು ಸುಧಾರಣೆಗಳನ್ನು ಜಾರಿಗೆ ತರಬೇಕೆಂದು ಅವರು ಹೇಳಿದ್ದಾರೆ.

ಇನ್ನು, ಈಗಾಗಲೇ ಹಲವು ನಿಯಮಗಳು, ನಿಯಂತ್ರಣಗಳು, ಪ್ರಕ್ರಿಯೆಗಳನ್ನು ಜಾರಿಗೆ ತರಲಾಗುತ್ತಿದ್ದು, ಉದ್ಯಮ ಸ್ನೇಹಿ ವಾತಾವರಣದಲ್ಲಿ ಮತ್ತಷ್ಟು ಸರಳೀಕರಣ ಜಾರಿಗೆ ತರಬೇಕಾಗಿದೆ. ಇನ್ನು,  ದೇಶ ತಂತ್ರಜ್ಞಾನದಲ್ಲಿಯೂ ಪ್ರಗತಿ ಕಾಣಬೇಕಿದ್ದು, ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಬಹಳ ಮುತುವರ್ಜಿಯಿಂದ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿದ್ದಾರೆ.

Advertisement

ಇದನ್ನೂ ಓದಿ : ತುಳು ಭಾಷೆಗೆ ಅಧಿಕೃತ ಮಾನ್ಯತೆ; ಟ್ವೀಟ್ ಅಭಿಯಾನದಲ್ಲಿ 1 ಲಕ್ಷಕ್ಕೂ ಹೆಚ್ಚಿನ ಟ್ವೀಟ್ ದಾಖಲು

Advertisement

Udayavani is now on Telegram. Click here to join our channel and stay updated with the latest news.

Next