Advertisement
ಉದ್ಯಮಶೀಲತೆ ಶಿಕ್ಷಣದ ಮುಖ್ಯ ಉದ್ದೇಶವೇನು?
Related Articles
Advertisement
2. ಉದ್ಯಮಶೀಲತೆ ಮನೋಸ್ಥಿತಿಯನ್ನು ಸಂಪಾದಿಸುವುದು
3. ಉದ್ಯಮವನ್ನು ಹೇಗೆ ಪರಿಣಾಮಕಾರಿಯಾಗಿ ನಡೆಸುವುದೆಂಬುವುದನ್ನು ಅರ್ಥಮಾಡಿಕೊಳ್ಳುವುದು.
ಬಿ-ಸ್ಕೂಲ್ (ಬಿಸಿನೆಸ್ ಸ್ಕೂಲ್) ಗಳಲ್ಲಿ ಈ 3 ಮಾರ್ಗಗಳು ಅನುಸರಿಸುವುದರಿಂದ ಪರಿಣಾಮಕಾರಿ ಉದ್ಯಮಶೀಲತೆ ಶಿಕ್ಷಣ ಒದಗಿಸಲು ನೆರವಾಗುವುದು
1. ಉದ್ಯಮಶೀಲತೆಯ ವ್ಯಾಪಕ ತಿಳಿವಳಿಕೆಯನ್ನು ಅಭಿವೃದ್ಧಿ ಪಡಿಸುವುದು: ವಿದ್ಯಾರ್ಥಿಗಳಲ್ಲಿ ಉದ್ಯಮಶೀಲತೆ ತಿಳಿವಳಿಕೆಯ ಅಭಿವೃದ್ಧಿಗಾಗಿ ಸಹಾಯಮಾಡುವುದು, ಎಲ್ಲಾ ಸ್ತರದ ಬಿ-ಸ್ಕೂಲ್ ಗಳಲ್ಲಿ ಉದ್ಯಮಶೀಲತೆಯು ಕಡ್ಡಾಯ ಕೋರ್ಸ್ ಆಗಿ ಕಲಿಸುವುದು. ಇದು ಪ್ರತಿಯೊಬ್ಬ ವಿದ್ಯಾರ್ಥಿಗೂ ಉದ್ಯಮಶೀಲತೆಯತ್ತ ದೃಷ್ಠಿ ಹರಿಸುವಂತೆ ಮಾಡುವುದು. ಇದರಿಂದ ಅವರು ಉತೀರ್ಣರಾಗಿ ಹೊರಹೋಗುವಾಗ ಈ ವಿಷಯದಲ್ಲಿ ಪಕ್ವ ಎನಿಸದಿದ್ದರೂ, ಮುಂದೆ ಜೀವನದಲ್ಲಿ ಏನನ್ನಾದರೂ ಸಾಧಿಸಲು ಇದರಲ್ಲಿನ ವಿಷಯ ವಸ್ತುಗಳು ನೆರವಾಗುವುದು.
ಉದ್ಯಮಶೀಲತೆ ಮನೋಸ್ಥಿತಿಯನ್ನು ಸಂಪಾದಿಸುವುದು: ಉದ್ಯಮಶೀಲತೆ ಮನೋಸ್ಥಿತಿ ವೃದ್ಧಿಗಾಗಿ ಬಿ-ಸ್ಕೂಲ್ ಗಳಲ್ಲಿ ಉದ್ಯಮಶೀಲತಾ ಘಟಕವನ್ನು ನಿರ್ಮಾಣ ಮಾಡಬೇಕು. ಈ ಸೆಲ್‍ಗಳು ವಿದ್ಯಾರ್ಥಿಗಳಲ್ಲಿ ಉದ್ಯಮಶೀಲತಾ ಮನೋಸ್ಥಿತಿಯನ್ನು ಅಭಿವೃದ್ಧಿಗೊಳಿಸುವುದು. ವಿವಿಧ ಕಾರ್ಯಚಟುವಟುವಟಿಕೆಯನ್ನು ಆಯೋಜಿಸುವ ಮೂಲಕ ವಿದ್ಯಾರ್ಥಿಗಳಲ್ಲಿ ಉದ್ಯಮ ಶೀಲತಾ ಮನೋಸ್ಥಿತಿಯನ್ನು ನಿರ್ಮಾಣ ಮಾಡುವತ್ತ ನೆರವಾಗಬೇಕು. ಉದಾಹರಣೆಗೆ: ಉದ್ಯೋಗದಾತರ ಯಶಸ್ಸು ಮತ್ತು ವಿಫಲತೆಯ ಚರಿತೆಗಳು, ಆಲೋಚನಾ ಸೃಷ್ಠಿಯ ಕಾರ್ಯಾಗಾರ, ಉದ್ಯಮ ಯೋಜನೆ, ಬಂಡವಾಳ ಹೂಡಿಕೆ ಈ ಮೊದಲಾದುವುಗಳ ಬಗ್ಗೆ ತಿಳಿ ಹೇಳುವ ಕಾರ್ಯ ಮಾಡಬೇಕು.
ಅಲ್ಲದೆ ಈ ಸೆಲ್‍ಗಳು ವಿವಿಧ ಉದ್ಯಮಶೀಲತಾ ನೆಟ್ ವರ್ಕ್‍ಗಳೊಂದಿಗೆ ಟೈ- ಅಪ್ ಹೊಂದಿರಬೇಕು, ಮಾತ್ರವಲ್ಲದೆ ಕಾಲಾನುಕ್ರಮವಾಗಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುವ ಕೆಲಸ ನಿರ್ವಹಿಸುತ್ತಿರಬೇಕು. ಇವೆಲ್ಲದರ ಫಲಿತಾಂಶವಾಗಿ ವಿದ್ಯಾರ್ಥಿಗಳಲ್ಲಿ ಉದ್ಯಮಶೀಲತೆಯ ಕಡೆಗೆ ಹೆಚ್ಚಿನ ಧನಾತ್ಮಕತೆ ಮೂಡಲು ಸಾಧ್ಯ.
3.ಉದ್ಯಮವವನ್ನು ಪರಿಣಾಮಕಾರಿಯಾಗಿ ನಡೆಸಲು ಮುಂದಾಗುವುದು
ಬಿ-ಸ್ಕೂಲ್‍ಗಳಲ್ಲಿ ಇನ್‍ಕ್ಯುಬೆಷನ್ ಸೆಂಟರ್‍ಗಳನ್ನು ನಿರ್ಮಿಸುವುದು. ಶೈಕ್ಷಣಿಕ ಹಾಗೂ ವಾಣಿಜ್ಯ ಜಗತ್ತಿನ ನಡುವೆ ಕೊಂಡಿಯಾಗಿ ಕಾರ್ಯನಿರ್ವಹಿಸುವ ಇವುಗಳು ವಿದ್ಯಾರ್ಥಿಗಳಿಗೆ ಪೂರ್ವ ಕಲ್ಪನೆಯಿಂದ ಉದ್ಯಮ ನಿರ್ಮಿಸುವವರೆಗೆ ವಿವಿಧ ಮೂಲಸೌಕರ್ಯ, ಮಾರ್ಗದರ್ಶನ ಮತ್ತು ಬಂಡವಾಳದ ಅವಕಾಶವನ್ನು ಒದಗಿಸುವ ಮೂಲಕ ಸಹಾಯ ಮಾಡುವ ಮೂಲಕ ಉದ್ದಿಮೆ ಸ್ಥಾಪನೆ ಮಾತ್ರವಲ್ಲದೆ ಅವುಗಳನ್ನು ಪರಿಣಾಮಕಾರಿಯಾಗಿ ಹೇಗೆ ಮುನ್ನಡೆಸಬೇಕು ಎಂಬ ತಿಳಿ ಹೇಳುವ ಕೆಲಸ ಮಾಡಬೇಕು
ಪ್ರಸ್ತುತ ದಿನಗಳಲ್ಲಿ ಉದ್ಯಮಶೀಲತಾ ಶಿಕ್ಷಣಕ್ಕೆ ಹೆಚ್ಚಿನ ಮಹತ್ವವನ್ನು ನೀಡಲಾಗುತ್ತಿದೆ ಮತ್ತು ಮುಖ್ಯವಾಗಿ ಉದ್ಯಮಶೀಲತೆಯ ಬಗ್ಗೆ ವಿದ್ಯಾರ್ಥಿಗಳಲ್ಲಿ ಜ್ಞಾನ ಹೆಚ್ಚಾಗಲು ಮತ್ತು ಅನುಭವ ಹೊಂದಲು ಇನ್ನಷ್ಟು ಶೈಕ್ಷಣಿಕ ಕಾರ್ಯಕ್ರಮವನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. ಈ ನಡೆಯು ಕೂಡ ಅಷ್ಟೇ ದೀರ್ಘಾವಧಿಯಾಗಿದೆ. ಇವುಗಳೆಲ್ಲ ಸಂಪೂರ್ಣಗೊಂಡಾಗ ಮಾತ್ರ ಬಿ-ಸ್ಕೂಲ್ ಗಳು ವಿದ್ಯಾರ್ಥಿಗಳು ಕೆಲಸ ಹುಡುಕುವವರಿಗಿಂತ ಉದ್ಯೋಗದಾತರೇ ಆಗಬಹುದು.