Advertisement

ಉದ್ಯಮ ಸ್ನೇಹಿ ಗಣಿ ನೀತಿ ಶೀಘ್ರ ಜಾರಿ: ನಿರಾಣಿ

03:21 PM Mar 13, 2021 | Team Udayavani |

ಧಾರವಾಡ: ರಾಜ್ಯದಲ್ಲಿ ಪರಿಸರ ಮತ್ತು ಉದ್ಯಮ ಸ್ನೇಹಿಯಾದ ನೂತನ ಗಣಿ ನೀತಿಯನ್ನು ರಾಜ್ಯ ಸರಕಾರದಿಂದ ರೂಪಿಸುತ್ತಿದ್ದು, ನೀತಿಯ ಕರಡು ಪ್ರತಿ ಪರಿಶೀಲನಾ ಹಂತದಲ್ಲಿದೆ. ಅಂತಿಮಗೊಳಿಸಿ ಶೀಘ್ರದಲ್ಲಿ ನೂತನ ಗಣಿ ನೀತಿ ಜಾರಿಗೊಳಿಸಲಾಗುವುದು ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ ನಿರಾಣಿ ಹೇಳಿದರು.

Advertisement

ಡಿಸಿ ಸಭಾಂಗಣದಲ್ಲಿ ಅಧಿಕಾರಿಗಳ ಹಾಗೂಸ್ಟೋನ್‌ಕ್ರಷರ್‌ ಮತ್ತು ಕಲ್ಲು ಗಣಿಗಾರಿಕೆ ಸಂಘದ ಪದಾಧಿಕಾರಿಗಳ ಸಭೆ ಕೈಗೊಂಡು ಅವರು ಮಾತನಾಡಿದರು. ಹೊಸ ಮೈನಿಂಗ್‌ ನೀತಿಯಲ್ಲಿ ಲೈಸೆನ್ಸ್‌ ಸರಳೀಕರಣಕ್ಕೆ ಆದ್ಯತೆ ನೀಡಲಾಗಿದೆ ಮತ್ತು ಕ್ರಶರ್‌ ಮಾಲೀಕರ ಬೇಡಿಕೆಗಳಿಗೆ ಸ್ಪಂದಿಸಲಾಗಿದೆ. ಪಟ್ಟಾ ಭೂಮಿ ಹಾಗೂ ಸರಕಾರಿ ಭೂಮಿಗಳಲ್ಲಿ ನಡೆಯುವ ಕಲ್ಲು ಗಣಿಗಾರಿಕೆಗೆ ಸಂಬಂಧಿಸಿದ ರಾಜಧನ ಮೊತ್ತವನ್ನು ಬೇರೆ ಬೇರೆ ನಿಗದಿಗೊಳಿಸಲಾಗುವುದು ಎಂದರು.

ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಲ್ಲಿ ಏಕಗವಾಕ್ಷಿ ಯೋಜನೆ ಜಾರಿ ಮೂಲಕ ಉದ್ಯಮಿಗಳಿಗೆ ತ್ವರಿತವಾಗಿ ಸ್ಪಂದಿಸಲು ಕ್ರಮವಹಿಸಲಾಗುತ್ತಿದೆ. ಸದ್ಯದಲ್ಲಿ ರಾಜ್ಯದ ಎಲ್ಲ ಕಂದಾಯ ವಿಭಾಗ ಮತ್ತು ಎಲ್ಲ ಜಿಲ್ಲೆಗಳಲ್ಲಿ ಮೈನಿಂಗ್‌ ಅದಾಲತ್‌ ಆಯೋಜಿಸಲಾಗುತ್ತಿದೆ. ಅದಾಲತ್‌ ನಡೆಯುವ ಸ್ಥಳದಲ್ಲಿಯೇ ಗಣಿ ಸಂಬಂಧಿತ ಸಮಸ್ಯೆಗಳಿಗೆ ಪರಿಹಾರ ನೀಡಲಾಗುವುದು ಎಂದು ಹೇಳಿದರು.

ಡಿಸಿ ನಿತೇಶ ಪಾಟೀಲ ಮಾತನಾಡಿ, ಪ್ರತಿ ತಿಂಗಳು ಜಿಲ್ಲಾ ಟಾಸ್ಕ್ಫೋರ್ಸ್‌ ಸಭೆ ಜರುಗಿಸಿನಿಯಮಾನುಸಾರ ಲೈಸೆನ್ಸ್‌ ನೀಡಲಾಗುತ್ತಿದೆ. ಪ್ರತಿ ಗಣಿಗಾರಿಕೆ ಹಾಗೂ ಸ್ಟೋನ್‌ಕ್ರಷರ್‌ ಸ್ಥಳದಲ್ಲಿಸುರಕ್ಷತಾ ಕ್ರಮಗಳೊಂದಿಗೆ ಅನುಮತಿಗೆ ವಿ ಧಿಸಿದನಿಯಮಗಳ ಪಾಲನೆ ಕುರಿತು ಅ ಧಿಕಾರಿಗಳಿಂದ ವರದಿ ಪಡೆಯಲಾಗುತ್ತಿದೆ ಎಂದರು.

ಶಾಸಕ ಪ್ರಸಾದ ಅಬ್ಬಯ್ಯ, ಎಸ್‌ಪಿ ಪಿ. ಕೃಷ್ಣಕಾಂತ, ಡಿಸಿಪಿ ರಾಮರಾಜನ್‌, ಪರಿಸರ ಅಧಿಕಾರಿ ಶೋಭಾ ಪೋಳ ಹಾಗೂ ಧಾರವಾಡ ಜಿಲ್ಲಾ ಸ್ಟೋನ್‌ಕ್ರಷರ್‌ ಮತ್ತು ಕಲ್ಲು ಗಣಿಗಾರಿಕೆ ಸಂಘಗಳ ಅಧ್ಯಕ್ಷ ಕಲ್ಲಪ್ಪ ಹಟ್ಟಿಯವರ, ಉಪಾಧ್ಯಕ್ಷ ವಿ.ಎಸ್‌. ಪಾಟೀಲ ಮಾತನಾಡಿದರು. ಹಿರಿಯ ಭೂ ವಿಜ್ಞಾನಿ ಚಂದ್ರಶೇಖರ ಸ್ವಾಗತಿಸಿ,ನಿರೂಪಿಸಿದರು. ರೇಷ್ಮೆ ಅಭಿವೃದ್ಧಿ ಮಂಡಳಿ ಅಧ್ಯಕ್ಷೆ ಸವಿತಾ ಅಮರಶೆಟ್ಟಿ, ಡಿವೈಎಸ್‌ಪಿ ಎಂ.ಬಿ. ಸಂಕದ ಮೊದಲಾದವರಿದ್ದರು.

Advertisement

ಧಾರವಾಡ ಜಿಲ್ಲೆಯಲ್ಲಿ 62 ಸ್ಟೋನ್‌ ಕ್ರಷರ್‌ ಮತ್ತು 136 ಕಲ್ಲು ಗಣಿಗಾರಿಕೆಗಳಿವೆ. ನಿಯಮ ಉಲ್ಲಂಘಿಸಿಗಣಿಗಾರಿಕೆ ಹಾಗೂ ಸ್ಟೋನ್‌ಕ್ರಷರ್‌ ನಡೆಯುತ್ತಿದ್ದರೆ ಅ ಧಿಕಾರಿಗಳು ಸೂಕ್ತ ಕಾನೂನು ಕ್ರಮ ಜರುಗಿಸಲಿದ್ದಾರೆ. ಗಣಿಮತ್ತು ಭೂ ವಿಜ್ಞಾನ ಇಲಾಖೆ ಅಧಿ ಕಾರಿಗಳಿಗೆ ಹಾಗೂ ಸ್ಟೋನ್‌ಕ್ರಷರ್‌, ಕಲ್ಲು

ಗಣಿಗಾರಿಕೆ ನಡೆಸುವ ಉದ್ಯಮಗಳಿಗೆ ಸೂಕ್ತತರಬೇತಿ ನೀಡಲು ಸ್ಕೂಲ್‌ ಆಫ್‌ ಮೈನಿಂಗ್‌ಆರಂಭಿಸಲು ಸರಕಾರ ಸಿದ್ಧತೆ ನಡೆಸಿದೆ.  –ಮುರುಗೇಶ ನಿರಾಣಿ, ಗಣಿ ಮತ್ತು ಭೂ ವಿಜ್ಞಾನ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next