Advertisement

ಉದ್ಯಮ-ಶಿಕ್ಷಣ ನಡುವಿನ ಅಂತರ ಕಡಿಮೆಯಾಗಲಿ

02:51 PM Mar 10, 2017 | Team Udayavani |

ಕಲಬುರಗಿ: ಉದ್ಯಮಗಳಲ್ಲಿನ ತಂತ್ರಜ್ಞಾನ ವೇಗವಾಗಿ ಬೆಳೆಯುತ್ತಿದೆಯಲ್ಲದೆ ಬದಲಾಗುತ್ತಿದೆ. ಇದಕ್ಕೆ ಸಮಾಂತರವಾಗಿ ಶೈಕ್ಷಣಿಕ ಪಠ್ಯಕ್ರಮ ಬದಲಾಗುತ್ತಿಲ್ಲ ಅದನ್ನು ಬದಲಾವಣೆ ಮಾಡುವಲ್ಲಿ ಸರಕಾರ ಹಾಗೂ ಶೈಕ್ಷಣಿಕ ವಿದ್ವಾಂಸರು ಶ್ರಮಿಸಬೇಕು ಎಂದು ಬೆಂಗಳೂರುಮೂಲದ ಜೀರೋ ಡಿಫೆಕ್‌ ಕಂಪನಿ ಸಿ.ಇ.ಒ. ಡಾ| ಎಸ್‌.ಎಂ. ಜಗದೀಶ ಹೇಳಿದರು. 

Advertisement

ಇಲ್ಲಿನ ಪಿಡಿಎ ಇಂಜಿನಿಯರಿಂಗ್‌ ಕಾಲೇಜಿನ ಮೆಕ್ಯಾನಿಕಲ್‌ ವಿಭಾಗವು ಹಮ್ಮಿಕೊಂಡಿದ್ದ ಬ್ರಿಡಿಂಗ್‌ ದಿ ಗ್ಯಾಪ ಬಿಟವಿನ್‌ ಇಂಡಸ್ಟ್ರಿ ಆ್ಯಂಡ್‌ ಅಕಾಡೆಮಿಕ್ಸ್‌ ಶೈಕ್ಷಣಿಕ ಮತ್ತು ಮಾಧ್ಯಮಗಳ ನಡುವಿನ ಅಂತರ ಜೋಡಣೆ ಕುರಿತ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. ಉದ್ಯಮಗಳಲ್ಲಿ ನುರಿತ ಮತ್ತು ಅನುಭವಿ ವಿದ್ಯಾರ್ಥಿಗಳು ಬೇಕಾಗುತ್ತದೆ.

ಅವರನ್ನು ತಯಾರು ಮಾಡುವುದು ಕಷ್ಟವಾಗುತ್ತಿದೆ. ಇವತ್ತಿನ ಉದ್ಯಮದ ನಿರೀಕ್ಷೆಗಳೆ ಬೇರೆ, ಪಠ್ಯಗಳಲ್ಲಿರುವುದುಬೇರೆ. ಆದ್ದರಿಂದ ಉದ್ಯಮ ಮತ್ತು ಶೈಕ್ಷಣಿಕ ಸಂಘಗಳ ನಡುವಿನ ಅಂತರ ಕಡಿಮೆಯಾಗಬೇಕು. ಈ ನಿಟ್ಟಿನಲ್ಲಿ ಪಠ್ಯ ಹಾಗೂ ತರಬೇತಿ ನೀಡುವುದು ಬದಲಾಗಬೇಕು ಎಂದರು.ಅಧ್ಯಕ್ಷತೆ ವಹಿಸಿದ್ದ ಹೈ.ಕ.ಶಿ. ಸಂಸ್ಥೆ ಅಧ್ಯಕ್ಷ ಬಸವರಾಜ ಭೀಮಳ್ಳಿ ಮಾತನಾಡಿ, ಇಂತಹಕಾರ್ಯಕ್ರಮಗಳು ವಿದ್ಯಾರ್ಥಿಗಳಿಗೆ ಬಹು ಮುಖ್ಯವಾಗಿದೆ.

ಉದ್ಯಮಗಳೊಂದಿಗಿನ ಸಂವಾದ, ಚರ್ಚೆಯಿಂದ ಉದ್ಯಮಕ್ಕೆ ಬೇಕಾಗುವ ಜ್ಞಾನವನ್ನು ಅರ್ಜಿಸಬಹುದು. ಇಂತಹಕಾರ್ಯಕ್ರಮಕ್ಕೆ ನನ್ನ ಸಂಪೂರ್ಣ ಸಹಕಾರ ಇದೆ ಎಂದರು. ಹೈ.ಕ.ಸಂಸ್ಥೆಯ ಕಾರ್ಯದರ್ಶಿ ಆರ್‌.ಎಸ್‌. ಹೊಸಗೌಡ, ಆಡಳಿತ ಮಂಡಳಿ ಸದಸ್ಯ ಉದಯ ಕುಮಾರ ಚಿಂಚೋಳಿ, ಡಾ| ಇಂದುಮತಿ ದೇಶಮಾನೆ, ಸಂಯೋಜಕರಾದ ಡಾ| ಸಿ.ಎಚ್‌.ಬಿರಾದಾರ, ಪ್ರೊ| ಭರತ ಕೊಡ್ಲಿ ಹಾಜರಿದ್ದರು. 

ನಾಗರಾಜ ಕುಲಕರ್ಣಿ, ಪ್ಲಾಂಟ್‌ ಹೆಡ್‌ ಜುಪಿಟರ್‌ ಟೂಲ್ಸ್‌ ಕಂಪನಿ, ಡಾ| ಎಸ್‌.ಎಂ. ಜಗದೀಶ ಆಗಮಿಸಿದ್ದರು. ಕು| ಅಂಬಿಕಾ ಪ್ರಾರ್ಥಿಸಿದರು. ವಿಭಾಗದ ಮುಖ್ಯಸ್ಥೆ ಡಾ| ಇಂದುಮತಿ ದೇಶಮಾನೆ ಸ್ವಾಗತಿಸಿದರು. ಪ್ರೊ| ವಿ.ಬಿ. ಹಿಪ್ಪರಗಿ ನಿರೂಪಿಸಿದರು.

Advertisement

ಡಾ| ಚಿ.ಎಚ್‌. ಬಿರಾದಾರ ಪ್ರಾಸ್ತವಿಕ ಭಾಷಣ ಮಾಡಿದರು. ಕಾರ್ಯಕ್ರಮ ಸಂಯೋಜಕ ಪ್ರೊ| ಭರತ ಕೊಡ್ಲಿ ವಂದಿಸಿದರು. ಉಪ ಪ್ರಾಚಾರ್ಯ ಡಾ| ಮಹಾದೇವಪ್ಪ ಗಾದಗೆ, ಡಾ| ಓ.ಡಿ. ಹೆಬ್ಟಾಳ, ಅಕಾಡೆಮಿ ಡೀನ್‌ ಡಾ| ರಾಜೇಂದ್ರ ಹರಸೂರ, ಡಾ| ಶಶಿಧರ ಕಲಶೆಟ್ಟಿ, ಡಾ| ಬಾಬುರಾವ ಶೇರಿಕಾರ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next