Advertisement

ಪರವಾನಗಿ ಉಲ್ಲಂಘಿಸಿದ 7 ಬಸ್‌ ವಶ

05:02 PM Oct 08, 2021 | Team Udayavani |

ಕೋಲಾರ: ಶಾಲಾ ಮಕ್ಕಳನ್ನು ಕರೆದೊಯ್ಯಲು ಪರವಾನಗಿ ಪಡೆದು ಇತರೆ ಮಾರ್ಗಗಳಲ್ಲಿ ಕಾರ್ಮಿಕರನ್ನು ತುಂಬಿಸಿಕೊಂಡು ಸಾಗಾಟ ಮಾಡುತ್ತಿದ್ದ 7 ಖಾಸಗಿ ಬಸ್‌ಗಳನ್ನು ಜಿಲ್ಲಾ ಪ್ರಾದೇಶಿಕ ಸಾರಿಗೆ ಇಲಾಖೆ ಅಧಿ ಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.

Advertisement

ಈಗಾಗಲೇ ಗ್ರಾಮೀಣ ಪ್ರದೇಶದಲ್ಲಿ ಸಂಚರಿಸಬೇಕಾದ ಹಲವು ಖಾಸಗಿ ಬಸ್‌ಗಳು ನಿಯಮ ಬಾಹಿರವಾಗಿ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದು, ಅಂತಹ ಬಸ್‌ಗಳನ್ನು ಹಿಡಿದು ಪ್ರಕರಣ ದಾಖಲಿಸುವ ಕೆಲಸ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಗುರುವಾರ ಪರವಾನಗಿ ಉಲ್ಲಂಘಿಸಿ ಸಂಚಾರ ಮಾಡುತ್ತಿದ್ದ 7 ಬಸ್‌ಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

ಇದನ್ನೂ ಓದಿ:- ಸರ್ಕಾರಿ ಶಾಲೆಯಲ್ಲಿ ಗಣಕ ಶಿಕ್ಷಣ ಆದ್ಯತೆಯಾಗಿಸಿ

ಈ ಬಸ್‌ಗಳಲ್ಲಿ ಕಾರ್ಮಿಕರನ್ನು ಸಾಗಾಟ ಮಾಡುತ್ತಿದ್ದು, ಪರಿಶೀಲಿಸಿದಾಗ ಇವರು ಶಾಲಾ ಮಕ್ಕಳ ಸಾಗಾಣಿಕೆಗೆ ಅನುಮತಿ ಪಡೆದಿರುವುದು ಕಂಡು ಬಂದಿದೆ. ಆರ್‌ಟಿಒ ಇನ್ಸ್‌ಪೆಕ್ಟರ್‌ ಸುರೇಶ್‌ಗೌಡ, ಸುಧೀಂದ್ರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ್ದು, ಪ್ರಕರಣ ದಾಖಲಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next