Advertisement

ವಾಡಿ ಪಟ್ಟಣದಲ್ಲಿಲ್ಲ ಬಸ್‌ ನಿಲ್ದಾಣ: ಪ್ರಯಾಣಿಕರ ಪರದಾಟ

12:25 PM Jan 29, 2018 | |

ವಾಡಿ: ಪಟ್ಟಣದಲ್ಲಿ ಬಸ್‌ ನಿಲ್ದಾಣ ಇಲ್ಲದೇ ಇರುವುದರಿಂದ ಪ್ರಯಾಣಿಕರು ನಿತ್ಯ ಪರದಾಡುವಂತಾಗಿದೆ. ಬೀದಿಯಲ್ಲಿಯೇ ನಿಂತು ಬಸ್‌ಗಾಗಿ ಕಾಯುವಂತಾಗಿದ್ದು, ಪ್ರಯಾಣಿಕರ ಕಷ್ಟ ಹೇಳತೀರದಾಗಿದೆ. ವಾಡಿ ಪಟ್ಟಣದಲ್ಲಿ ಸುಮಾರು 50 ಸಾವಿರ ಜನಸಂಖ್ಯೆ ಇದೆ. ಟ್ಟು 30 ಶಾಲೆಗಳಿವೆ. ಇಲ್ಲಿನ ಎಸಿಸಿ ಕಾರ್ಖಾನೆ ಮತ್ತು ಜಂಕ್ಷನ್‌ ರೈಲು ನಿಲ್ದಾಣ ಅತಿ ಪ್ರಾಮುಖ್ಯತೆ ಪಡೆದು ಜನಾಕರ್ಷಣೀಯವಾಗಿವೆ. ಪಟ್ಟಣದ ಸುತ್ತಲೂ ಐತಿಹಾಸಿಕ ಪ್ರವಾಸಿ ತಾಣಗಳಿವೆ. ಸುತ್ತಲ ಇಪ್ಪತ್ತು ಹಳ್ಳಿಗಳ ಜನರಿಗಾಗಿ ಪಟ್ಟಣದಲ್ಲಿ ಗುರುವಾರ ದೊಡ್ಡ ಸಂತೆ ನಡೆಯುತ್ತದೆ. ವಾಹನಗಳ ಭರಾಟೆಯೂ ಇಲ್ಲಿ ಜೋರಾಗಿದೆ. ಇಷ್ಟಕ್ಕೂ ಇಲ್ಲಿ ಒಂದು ಬಸ್‌ ನಿಲ್ದಾಣ ಸೌಲಭ್ಯ ಇಲ್ಲ, ಪ್ರಯಾಣಿಕರು ಮಾಡಿದ ಪಾಪವಾದರೂ ಏನು ಎಂಬ ಪ್ರಶ್ನೆ ಕಾಡತೊಡಗಿದೆ.

Advertisement

ಪಟ್ಟಣದಲ್ಲಿ ರಾಷ್ಟ್ರೀಯ ಹೆದ್ದಾರಿ ಹಾಯ್ದು ಹೋಗಿದ್ದು, ಭಾರಿ ವಾಹನಗಳ ಸಂಚಾರ ಹೆಚ್ಚಿದೆ. ಚಿತ್ತಾಪುರ-ಯಾದಗಿರಿ, ಯಾದಗಿರಿ-ಕಲಬುರಗಿ, ಚಿತ್ತಾಪುರ-ಸನ್ನತಿ, ಚಿತ್ತಾಪುರ-ದಂಡಗುಂಡ, ಯಾದಗಿರಿ-ಇಂಗಳಗಿ, ಚಿತ್ತಾಪುರ-ಚಾಮನೂರ, ಶಹಾಬಾದ ಮಾರ್ಗದ ಬಸ್‌ಗಳು ವಾಡಿ ನಗರದಿಂದಲೇ ಸಾಗುತ್ತವೆ. ಖಾಸಗಿ ವಾಹನಗಳಲ್ಲಿ ಪ್ರಯಾಣಿಕರು ಕಿಕ್ಕಿರಿದು ಸಾಗುತ್ತಾರೆ. ಎನ್‌ಇಕೆಆರ್‌ಟಿಸಿ ಬಸ್‌ಗಳಿಗಾಗಿ ಮತ್ತು ಖಾಸಗಿ ವಾಹನಗಳಿಗಾಗಿ ಜನರು
ರಸ್ತೆ ಮೇಲೆ ನಿಂತು ಕಾಯಬೇಕಾದ ದುಸ್ಥಿತಿಯಿದೆ. ವಿವಿಧ ಗ್ರಾಮಗಳಿಂದ ನಗರಕ್ಕೆ ಬರುವ ವಿದ್ಯಾರ್ಥಿಗಳು ಬಸ್‌ಗಾಗಿ
ಬಿಸಿಲಿನಲ್ಲೇ ನಿಂತು ಬಸವಳಿಯುತ್ತಾರೆ. ವಾಡಿ ಪಟ್ಟಣದಲ್ಲಿ ಇಲ್ಲಿಯ ವರೆಗೂ ಬಸ್‌ ನಿಲ್ದಾಣ ಸೌಲಭ್ಯ ಒದಗಿಸಲಾಗಿಲ್ಲ
ಎಂದು ಜನಪ್ರತಿನಿ ಧಿಗಳ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶ್ರೀನಿವಾಸಗುಡಿ ಚೌಕ್‌, ಆಜಾದ್‌ ಚೌಕ್‌,
ಬಳಿರಾಮ ಚೌಕ್‌, ಬಸವೇಶ್ವರ ಚೌಕ್‌ ಹಾಗೂ ಕುಂದನೂರ ಚೌಕ್‌ಗಳು ಬಸ್‌ ನಿಲ್ದಾಣಗಳಾಗಿವೆ. ಸಂಬಂಧಿಸಿದ
ಅಧಿಕಾರಿಗಳ ಹಾಗೂ ಚುನಾಯಿತ ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಪ್ರಯಾಣಿಕರು ಮತ್ತು ಗ್ರಾಮೀಣ ಭಾಗದ ವಿದ್ಯಾರ್ಥಿಗಳು ತೀವ್ರ ತೊಂದರೆ ಅನುಭವಿಸುವಂತಾಗಿ¨

ಪ್ರತಿನಿತ್ಯ ಹಲವು ಪ್ರಮುಖ ಬಸ್‌ಗಳ ಓಡಾಟವಿರುವ ವಾಡಿ ಪಟ್ಟಣದಲ್ಲಿ ನಿಲ್ದಾಣ ನಿರ್ಮಿಸಲು ಸಾಧ್ಯವಾಗಿಲ್ಲ. ರಸ್ತೆಗಳ ಮೇಲೆ ಬಿಸಿಲು ಸಹಿಸುತ್ತಾ ವಾಹನಗಳಿಗಾಗಿ ಕಾಯುವುದು ಅನಿವಾರ್ಯವಾಗಿದೆ. ನೀರು, ನೆರಳಿಗಾಗಿ ಪ್ರಯಾಣಿಕರು ಪರದಾಡುತ್ತಾರೆ. ಹೋಟೆಲ್‌, ಅಂಗಡಿಗಳ ಆಸರೆ ಪಡೆಯುತ್ತಾರೆ. ಜನರು ತೊಂದರೆ ಅನುಭವಿಸುತ್ತಿದ್ದರೆ ಸಂಬಂಧಿಸಿದವರು ಕರ್ತವ್ಯ ಮರೆತಿದ್ದಾರೆ. 
 ರಾಜು ಒಡೆಯರಾಜ, ಎಐಡಿವೈಒ ಮುಖಂಡ

ಮಡಿವಾಳಪ್ಪ ಹೇರೂರ

Advertisement

Udayavani is now on Telegram. Click here to join our channel and stay updated with the latest news.

Next