ವಿಜಯಪುರ: ನಗರದ ಪ್ರಮುಖ ಸಾರ್ವಜನಿಕ ಸ್ಥಳ, ಬಸ್ ತಂಗುದಾಣವನ್ನು ಸ್ವಚ್ಛಗೊಳಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಗಾನಯೋಗಿ ಸಂಘದ ಪದಾಧಿಕಾರಿಗಳು ಈಗ ಪೊಲೀಸ್ ಕವಾಯತು ಮೈದಾನ ಬಳಿ ಇರುವ ಬಸ್ ತಂಗುದಾಣವನ್ನು ಸ್ವಚ್ಛಗೊಳಿಸಿದ್ದಾರೆ.
ನಗರದ ದರಬಾರ ಮಹಾವಿದ್ಯಾಲಯ, ಲಕ್ಷ್ಮೀ ಗುಡಿ ಪಕ್ಕದಲ್ಲಿರುವ ಬಸ್ ತಂಗುದಾಣ, ಎಲ್‌ಬಿಎಸ್ ಪ್ರಾಂಗಣಕ್ಕೆ ಹೊಸ ಸ್ಪರ್ಶ ನೀಡಿರುವ ಸದರಿ ಸಂಘಟನೆಯ ಯುವಕರು ಇದೀಗ ಪೊಲೀಸ್ ಕವಾಯತು ಮೈದಾನದ ಬಳಿ ತಂಗುದಾಣ ಸ್ವತ್ಛಗೊಳಿಸಿ ಶರಣರ ಹೆಸರುಗಳನ್ನು ಬರೆದು ಅಂದಗೊಳಿಸಿದ್ದಾರೆ.
ಕಲ್ಯಾಣ ಕ್ರಾಂತಿಯ ಅನುಭವ ಮಂಟಪದ ಶಿವಶರಣರ-ಶರಣೆಯರ ಎಂಬ ಶಿರ್ಷಿಕೆಯೊಂದಿಗೆ 12ನೇ ಶತಮಾನದ ಅನುಭವ ಮಂಟಪದ ಸುಮಾರು 50ಕ್ಕೂ ಹೆಚ್ಚು ಶಿವಶರಣ ಹಾಗೂ ಶರಣೆಯರ ಹೆಸರನ್ನು ಬರೆದಿದ್ದಾರೆ. ನಗರದ ಬಸ್‌ನಿಲ್ದಾದ ತುಂಬಾ ಗುಟ್ಕಾ, ಮದ್ಯ ವ್ಯಸನದ ಬಾಟಲಿ ಹಾಗೂ ಮೂತ್ರಗಳಿಂದ ಗಲೀಜು ಮಾಡಿ ವ್ಯವಸ್ಥೆ ಹದಗೆಡಿಸಲಾಗಿತ್ತು. ಇದನ್ನು ಗಮನಿಸಿ ಅದಕ್ಕೆ ಅಂದವಾಗಿ ಪೇಂಟ್ ಮಾಡಿ 12ನೇ ಶತಮಾನದ ಶಿವಶರಣರ ಹೆಸರನ್ನು ಬರೆದು ಅದಕ್ಕೊಂದು ಮೆರುಗು ತರುವ ಕೆಲಸ ಮಾಡಲಾಗಿದೆ ಎಂದು ಪ್ರಕಾಶ ಆರ್.ಕೆ. ಸಂತಸ ವ್ಯಕ್ತಪಡಿಸಿದರು.
ಸಂತೋಷ ಚವ್ಹಾಣ, ಬಾಹುಬಲಿ ಶಿವಣ್ಣನವರ, ರವಿ ರತ್ನಾಕರ, ರಾಜಕುಮಾರ ಹೊಸಟ್ಟಿ, ವಿಕಾಸ ಕಂಬಾಗಿ, ಸಚಿನ ವಾಲೀಕಾರ, ಮಹೇಶ ಕುಂಬಾರ, ಆನಂದ ಹೊನವಾಡ, ಪ್ರಮೋದ ಚವ್ಹಾಣ, ರೇವಣಸಿದ್ದಯ್ಯ ಹಿರೇಮಠ, ವಿಠ್ಠಲ ಗುರುವಿನ, ಶ್ರೀಶೈಲ ಕುಮಸಗಿ, ವೀರೇಶ ಸೊನ್ನಲಿಗಿ, ಶ್ರೀಶೈಲ ಜುಮನಾಳ, ಸಚಿನ ಚವ್ಹಾಣ, ರಾಹುಲ್ ಬಾಬು, ಕಿರಣ ಕುಂಬಾರ, ಅನಿಲ ಶಿರಗುಪ್ಪಿ, ಪ್ರಶಾಂತ ಅವರನ್ನೊಳಗೊಂಡ ತಂಡ ಈ ಕಾರ್ಯಕ್ಕೆ ಕೈ ಜೋಡಿಸಿದೆ.