Advertisement
ಚಾಲಕ ಬಸ್ ಅನ್ನು ಅಜಾಗರೂಕತೆಯಿಂದ ಹಿಮ್ಮುಖವಾಗಿ ಚಲಾಯಿಸಿದ್ದರಿಂದ ಅದು ವಾಹನಗಳ ಪಾರ್ಕಿಂಗ್ ಪ್ರದೇಶ ದಾಟಿ ವಾಣಿಜ್ಯ ಕಟ್ಟಡಕ್ಕೆ ನುಗ್ಗಿದ್ದರಿಂದ ಕೆಲವು ಅಂಗಡಿಗಳಿಗೆ . ಇದರಿಂದ ನಾಗರಾಜ್ ಭಟ್ ಎಂಬವರ ಸಿಹಿತಿಂಡಿ ಮತ್ತು ತಂಪು ಪಾನೀಯ ಮಾರಾಟದ ಅಂಗಡಿಗೆ ಹಾಗೂ ಅನಿಲ್ ಕುಮಾರ್ ಹಾನಿಯಾಗಿದೆ. ಕಬ್ಬು ಅರೆಯುವ ಯಂತ್ರ ಸೇರಿ ದಂತೆ ಅಂಗಡಿಯ ಕಪಾಟುಗಳಿಗೂ ಹಾನಿಯಾಗಿದೆ.
ಈ ಖಾಸಗಿ ಬಸ್ ವಾಹನಗಳ ಪಾರ್ಕಿಂಗ್ ಪ್ರದೇಶ ದಾಟಿ ಬಂದಿದ್ದರಿಂದ ಮೂರ್‍ನಾಲ್ಕು ದ್ವಿಚಕ್ರ ವಾಹನ ಹಾಗೂ ಕಾರಿಗೂ ಹಾನಿಯಾಗಿದೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಈ ದುರ್ಘಟನೆಯ ಸಂದರ್ಭ ಅಲ್ಲಿ ಬೆರಳೆಣಿಕೆ ಜನರಷ್ಟೇ ಇದ್ದು, ಅವರು ಅಲ್ಲಿಂದ ಓಡಿ ಪಾರಾಗಿದ್ದಾರೆ. ಅದೃಷ್ಟವಶಾತ್ ಅಂಗಡಿಯವರು ಅಪಾಯದಿಂದ ಪಾರಾಗಿದ್ದಾರೆ.