ಬೆಂಗಳೂರು : ಸಾರಿಗೆ ನೌಕರರ ಬೇಡಿಕೆಗಳು ಈಡೆರೋವರೆಗೂ ಮುಷ್ಕರ ಹಿಂಪಡೆಯುವುದಿಲ್ಲ ಎಂದು ರೈತ ಸಂಘದ ನಾಯಕ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ಸಾರಿಗೆ ನೌಕರರ ಒಕ್ಕೂಟದ ಸದಸ್ಯರ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.
ಈ ಕುರಿತು ಮಾತನಾಡಿದ ಸಾರಿಗೆ ಸಚಿವ ಲಕ್ಷ್ಮಣ ಸವದಿ ಸಾರಿಗೆ ನೌಕರರಿಗೆ ಕೋವಿಡ್ ಕಷ್ಟ ಕಾಲದಲ್ಲೂ ತೊಂದರೆ ಆಗಬಾರದೆಂಬ ದೃಷ್ಟಿಯಿಂದ ವೇತನವನ್ನು ನೀಡಿತ್ತು ಅವರ ಕಷ್ಟಗಳಿಗೆ ನಾವು ಸ್ಪಂದಿಸಿದ್ದೇವೆ ಪ್ರತಿಭಟನೆ ಮಾಡುವ ಬದಲು ಚರ್ಚೆಗೆ ಬರಲಿ ಎಂದು ಹೇಳಿದ್ದರು. ಆ ಬಳಿಕ ನಡೆದ ಚರ್ಚೆಯಲ್ಲಿ ಯಾವುದೇ ಫಲ ನೀಡದ ಹಿನ್ನೆಲೆಯಲ್ಲಿ ಸಂಧಾನ ವಿಫಲಗೊಂಡಿತು ಅಲ್ಲದೆ ತಮ್ಮ ನಿರ್ಧಾರದಿಂದ ನೌಕರರು ಹಿಂದೆ ಸರಿಯಲಿಲ್ಲ.
ಯಾವುದೇ ಕಾರಣಕ್ಕೂ ಪ್ರತಿಭಟನೆಯನ್ನು ಹಿಂಪಡೆಯುವ ಯೋಚನೆ ಇಲ್ಲ ಕೂಡಲೇ ಸಾರಿಗೆ ಸಚಿವರು ತಮ್ಮ ಬೇಡಿಕೆಗಳನ್ನು ಈಡೇರಿಸಿ ಇಲ್ಲವಾದಲ್ಲಿ ಬೇಡಿಕೆ ಈಡೇರುವವರೆಗೂ ಮುಷ್ಕರ ಮುಂದುವರೆಯಲಿದೆ ಎಂದು ಹೇಳಿದ್ದಾರೆ.
ಈ ವಿಚಾರಕ್ಕೆ ಸಂಬಂಧಿಸಿ ಸಾರಿಗೆ ಸಚಿವರು ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಸಾರಿಗೆ ನೌಕರರ ಬೇಡಿಕೆಗಳ ಕುರಿತು ಚರ್ಚೆ ನಡೆಸಿದ್ದಾರೆ.
ಹಾಗಾಗಿ ಪ್ರಯಾಣಿಕರು ಬೇರೆ ಊರಿಗೆ ಅಥವಾ ಕೆಲಸದ ನಿಮಿತ್ತ ಹೋರಾಡುವವರು ಗಮನಿಸಬೇಕಾಗಿದೆ.