Advertisement

ಇಂದು ಸುಸಜ್ಜಿತ ಸುಳ್ಯ ಬಸ್‌ ಘಟಕ ಉದ್ಘಾಟನೆ

02:25 AM Jul 15, 2017 | Team Udayavani |

ಸುಳ್ಯ: ಸುಳ್ಯ ನಗರದ ಕಾಯರ್ತೋಡಿಯಲ್ಲಿ ನಿರ್ಮಾಣಗೊಂಡ ಸುಸಜ್ಜಿತ 3.5 ಕೋಟಿ ರೂ.ವೆಚ್ಚದ ನೂತನ ಬಸ್‌ ಡಿಪೋ ಜು. 15ರಂದು ಉದ್ಘಾಟನೆಗೊಳ್ಳಲಿದೆ. ಇನ್ನು ತಾಲೂಕಿನ ಗ್ರಾಮೀಣ ಭಾಗದ ಬಸ್‌ ಸಂಪರ್ಕದ ಕೊರತೆ ನೀಗಲಿದ್ದು ಸಂಚಾರ ವ್ಯವಸ್ಥೆ ಅಡಚಣೆ ಕಡಿಮೆಯಾಗಲಿದೆ. ಒಟ್ಟು 7.08 ಎಕ್ರೆ ಜಾಗದ ಪೈಕಿ 3 ಎಕ್ರೆ ವಿಸ್ತೀರ್ಣದಲ್ಲಿ ಈ ನೂತನ ಡಿಪೋ ನಿರ್ಮಾಣಗೊಂಡಿದೆ. ನೂತನ ಬಸ್‌ ನಿಲ್ದಾಣದಲ್ಲಿ 60ರಿಂದ 70 ಬಸ್‌ ನಿಲುಗಡೆಯಷ್ಟು ವಿಸ್ತಾರ ಹೊಂದಿದೆ.

Advertisement

ಪುರುಷ ಮತ್ತು ಮಹಿಳಾ ಸಿಬಂದಿಗೆ ಪ್ರತ್ಯೇಕ ವಿಶ್ರಾಂತಿ ಕೊಠಡಿ, ದಾಸ್ತಾನುಕೊಠಡಿ, ಇಂಧನ ಕೊಠಡಿ, ದುರಸ್ತಿ ವ್ಯವಸ್ಥೆ, ಇಂಧನ ಪೂರಕ ಘಟಕ, ಶೌಚಾಲಯ, ವಾಶಿಂಗ್‌ ಘಟಕ, ಮಳೆಕೊಯ್ಲು ವ್ಯವಸ್ಥೆ, ಸೂಪರ್‌ವೈಸರ್‌ ಕೊಠಡಿ, ಗಾರ್ಡನಿಂಗ್‌, ಕಬ್ಬಿಣದ ತಡೆಬೇಲಿಗಳಿವೆ. ರಸ್ತೆ ಬದಿ ಕುಸಿಯದಂತೆ ಕಲ್ಲಿನ ಆವರಣ ಕಟ್ಟಲಾಗಿದೆ. ಹಂತಹಂತವಾಗಿ ಪುತ್ತೂರು ಡಿಪೋದಿಂದ ಪ್ರತ್ಯೇಕಗೊಳ್ಳಲಿದೆ. ಬಳಿಕ ಸುಳ್ಯದಿಂದ ಗ್ರಾಮೀಣ ಪ್ರದೇಶಕ್ಕೆ ಹೆಚ್ಚಿನ ಬಸ್‌ ಸಂಚಾರ ವ್ಯವಸ್ಥೆ ಆರಂಭಗೊಳ್ಳುವುದರೊಂದಿಗೆ ರಾಜ್ಯದಲ್ಲಿರುವ ದೂರದೂರದ ಕೇಂದ್ರಗಳ ಸಹಿತ ಹೊರ ರಾಜ್ಯದ ರೂಟ್‌ ಬಸ್‌ಗಳು ಕೂಡ ಆರಂಭಗೊಳಿಸುವ ಚಿಂತನೆ ನಡೆದಿದೆ.

ಪುತ್ತೂರು ಡಿಪೋದಿಂದ 25, ಧರ್ಮಸ್ಥಳದಿಂದ 15, ಬಿ.ಸಿ.ರೋಡ್‌ನಿಂದ 4 ಹಾಗೂ ಹೊಸದಾಗಿ ಸುಳ್ಯದಿಂದ 6 ಸೇರಿದಂತೆ ಒಟ್ಟು 50 ಬಸ್‌ಗಳು ನೂತನ ಡಿಪೋದಿಂದ ಹೊರಡುವ ವೇಳಾಪಟ್ಟಿಗೆ ಸೇರ್ಪಡೆಯಾಗಲಿವೆ. ಸುಳ್ಯದಿಂದ ಹೊರಡುವ ನೂತನ ಬಸ್‌ಮಾರ್ಗಗಳ ಸಿದ್ಧತಾ ಪ್ರಕ್ರಿಯೆ ನಡೆಯುತ್ತಿದ್ದು, ಹಂತಹಂತವಾಗಿ ಪ್ರಕ್ರಿಯೆಗಳು ಪೂರ್ಣಗೊಳ್ಳಲಿವೆ.

ಭಾಗವಹಿಸಲಿರುವರು
ಬೆಳಗ್ಗೆ 11 ಗಂಟೆಗೆ ಸಚಿವ ರಾಮಲಿಂಗಾ ರೆಡ್ಡಿ ಉದ್ಘಾಟಿಸುವರು. ಉಸ್ತುವಾರಿ ಸಚಿವ ರಮಾನಾಥ ರೈ, ಸಾರಿಗೆ ನಿಮಗ ಅಧ್ಯಕ್ಷ ಗೋಪಾಲ ಪೂಜಾರಿ, ಸಂಸದ ನಳಿನ್‌ಕುಮಾರ್‌ ಕಟೀಲು ಸಹಿತ ವಿವಿಧ ಜನಪ್ರತಿನಿಧಿಗಳು ಸಮಾರಂಭದಲ್ಲಿ ಭಾಗವಹಿಸುವರು. ಶಾಸಕ ಅಂಗಾರ ಅಧ್ಯಕ್ಷತೆ ವಹಿಸಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next