Advertisement
ಬಂಟ್ಸ್ ಸಂಘ ಮುಂಬಯಿ ಇದರ ಕ್ರೀಡಾ ಸಮಿತಿಯ ವತಿಯಿಂದ, ಸಂಘದ ವಸಾಯಿ -ಡಹಾಣು ಪ್ರಾದೇಶಿಕ ಸಮಿತಿಯ ಸಹಕಾರ ದೊಂದಿಗೆ ಬಂಟರ ಸಂಘ ಮುಂಬಯಿ ಅಧ್ಯಕ್ಷ ಚಂದ್ರಹಾಸ ಕೆ. ಶೆಟ್ಟಿ ಅಧ್ಯಕ್ಷತೆಯಲ್ಲಿ ಎ. 4 ರಂದು ಕಾಂದಿವಲಿ ಪಶ್ಚಿಮದ ಪೊಯಿಸರ್ ಜಿಮ್ಖಾನದ ಕ್ರೀಡಾಂಗಣದಲ್ಲಿ ದಿನಪೂರ್ತಿ ಆಯೋಜಿಸಲಾಗಿದ್ದ ಸಂಘದ 2022ನೇ ವಾರ್ಷಿಕ ಕ್ರೀಡೋತ್ಸವದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿ ಯಾಗಿ ಮಾತನಾಡಿದ ಅವರು, ಬಂಟರ ಸಂಘದ ಸಾಧನೆಗಳನ್ನು ಪ್ರಶಂಸಿಸಿ ಶುಭ ಹಾರೈಸಿದರು.
Related Articles
Advertisement
ಅಂತಾರಾಷ್ಟ್ರೀಯ ಕ್ರೀಡಾಪಟು ರೋಹಿತ್ ಕುಮಾರ್ ಕಟೀಲು ಮಾತನಾಡಿ, ಬಾಲ್ಯದಿಂದಲೂ ಕ್ರೀಡಾಸಕ್ತನಾಗಿದ್ದೆ. ಕ್ರೀಡಾಪಟುವಾಗಿಸಿ ಸಾಧಿಸಿದ ಸಾಧನೆಗೆ ಕರ್ನಾಟಕ ಸರಕಾರ ರಾಜೋತ್ಸವ ಪ್ರಶಸ್ತಿ ಪ್ರದಾನ ಮಾಡಿದ ಗೌರವಾರ್ಥ ತಾವು ಈ ವೇದಿಕೆಯಲ್ಲಿ ಕೊಡಮಾಡಿದ ಅಭಿನಂದನ ಗೌರವಕ್ಕೆ ಕೃತಜ್ಞನಾಗಿರುವೆ. 1982 ರಿಂದ ಕ್ರೀಡೆಯಲ್ಲಿ ನಿರತನಾಗಿದ್ದೇನೆ. 6-7 ವರ್ಷಗಳಲ್ಲೇ ರಾಜ್ಯ ಮಟ್ಟ ದಲ್ಲಿ ಗುರುತಿಸಿಕೊಂಡೆ. ರಾಷ್ಟ್ರ ಪ್ರತಿನಿಧಿಸಲು 16 ವರ್ಷಗಳೇ ತಗಲಿದವು. ನಮ್ಮ ಕ್ರೀಡಾ ಸ್ಥಿತಿಗತಿ, ಚರಿತ್ರೆ ನೋಡಿದರೆ ಒಲಿಂಪಿಕ್‌ನಲ್ಲಿ ಪಾಲ್ಗೊಳ್ಳುವುದು ಕನಸಾಗಿದ್ದು, ಪ್ರೋತ್ಸಾಹದ ಕೊರತೆಯಿಂದ ನನಗೆ ಗೆಲುವು ಸಾಧ್ಯವಾಗುತ್ತಿರಲಿಲ್ಲ. ಕ್ರೀಡೆಗಿಂತ ಬದುಕು ನಿರ್ವಹಿಸುವುದೇ ಬಹಳಷ್ಟು ಕಷ್ಟವಿತ್ತು. ಆದರೆ ಇಂದು ಪ್ರಧಾನಿಮೋದಿ ಅವರ ಕ್ರೀಡಾಪ್ರೋತ್ಸಾಹ ಜಗತ್ತಿಗೆ ಮಾದರಿಯಾಗಿದೆ. ವಾರ್ಷಿಕವಾಗಿ ಸಾವಿರಾರು ಕ್ರೀಡಾಪ್ರತಿಭೆಗಳು ಬೆಳಕಿಗೆ ಬರಲು ಸಾಧ್ಯವಾಗಿದೆ. ಯುವಜನತೆ ಸಾಧ್ಯವಾದಷ್ಟು ಕ್ರೀಡೆಯಲ್ಲಿ ಪಾಲ್ಗೊಳ್ಳಬೇಕು. ಉತ್ತಮ ಕ್ರೀಡಾಪಟುವಾಗಲು ಆರೋಗ್ಯದ ಕಾಳಜಿ ವಹಿಸಬೇಕು. ಪೌಷ್ಠಿಕ ಆಹಾರ, ನಿಯಮಿತ ವ್ಯಾಯಾಮ ರೂಢಿಸಿ ವಿಶ್ವಮಾನ್ಯ ಕ್ರೀಡಾಪಟುಗಳಾಗಿ ಎಂದು ತಿಳಿಸಿ ಶುಭ ಹಾರೈಸಿದರು.
ಕ್ರೀಡೋತ್ಸವದ ಯಶಸ್ಸಿಗೆ ವಿವಿಧ ಪ್ರಾಯೋಜಕ ತ್ವವನ್ನು ವಹಿಸಿ ಸಹಕರಿಸಿದ ಮುಖ್ಯ ಪ್ರಾಯೋಜಕರು, ಸಹ ಪ್ರಾಯೋಜಕರು, ಕ್ರೀಡಾ ಮೇಲ್ವಿಚಾರಕರು, ತೀರ್ಪುಗಾರರು, ವಿವಿಧ ಬಂಟ ಸಂಘಟನೆಗಳ ಅಧ್ಯಕ್ಷರು, ಪ್ರತಿನಿಧಿಗಳು, ಸಂಘದ ಒಂಬತ್ತು ಪ್ರಾದೇಶಿಕ ಸಮಿತಿಗಳ ಕಾರ್ಯಾಧ್ಯಕ್ಷರು, ಸಮನ್ವಯಕರು, ಉಪ ಸಮಿತಿಗಳ ಕಾರ್ಯಾಧ್ಯಕ್ಷರು, ಮಹಿಳಾ ಮತ್ತು ಯುವ ವಿಭಾಗದ ಪದಾಧಿಕಾರಿಗಳನ್ನು ಸಂಘದ ಅಧ್ಯಕ್ಷ ಚಂದ್ರಹಾಸ ಕೆ. ಶೆಟ್ಟಿ ಮತ್ತು ಪದಾಧಿಕಾರಿಗಳು ಶಾಲು ಹೊದೆಸಿ, ಸ್ಮರಣಿಕೆ, ಪುಷ್ಪಗುತ್ಛವನ್ನಿತ್ತು ಅಭಿನಂದಿಸಿದರು.
ವಿಜಯ್ ಶೆಟ್ಟಿ ಮೂಡುಬೆಳ್ಳೆ ಪ್ರಾರ್ಥನೆಗೈದರು. ಕ್ರೀಡಾ ಸಮಿತಿಯ ಕಾರ್ಯಧ್ಯಕ್ಷ ಗಿರೀಶ್ ಆರ್. ಶೆಟ್ಟಿ ತೆಳ್ಳಾರ್ ಸ್ವಾಗತಿಸಿದರು. ಜಯ ಎ. ಶೆಟ್ಟಿ ಅತಿಥಿಗಳನ್ನು ಪರಿಚಯಿಸಿದರು. ಅಶೋಕ್ ಪಕ್ಕಳ ಕಾರ್ಯಕ್ರಮ ನಿರೂಪಿಸಿದರು. ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ಡಾ| ಆರ್. ಕೆ. ಶೆಟ್ಟಿ ಸಮ್ಮಾನಿತರ ಸಮ್ಮಾನ ಪತ್ರ ವಾಚಿಸಿ ವಂದಿಸಿದರು.
ಕ್ರೀಡೋತ್ಸವದ ಫಲಿತಾಂಶ :
ಕ್ರೀಡೋತ್ಸವದ ಸಮಗ್ರ ಫಲಿತಾಂಶದಲ್ಲಿ ಬಂಟರ ಸಂಘ ಜೋಗೇಶ್ವರಿ-ದಹಿಸರ್ ಪ್ರಾದೇಶಿಕ ಸಮಿತಿ ಪ್ರಥಮ, ಬಂಟರ ಸಂಘ ಅಂಧೇರಿ-ಬಾಂದ್ರಾ ಪ್ರಾದೇಶಿಕ ಸಮಿತಿ ದ್ವಿತೀಯ, ಬಂಟರ ಸಂಘ ಮೀರಾ-ಭಾಯಂದರ್ ಪ್ರಾದೇಶಿಕ ಸಮಿತಿ ತೃತೀಯ ಪ್ರಶಸ್ತಿಯನ್ನು ಪಡೆಯಿತು. ಅತಿಥಿಗಳು ಕ್ರೀಡೋತ್ಸವದ ವಿಜೇತರಿಗೆ ಪಾರಿತೋಷಕ, ಟ್ರೋಫಿಗಳನ್ನು ವಿತರಿಸಿ ಅಭಿನಂದಿಸಿದರು.
ಎರಡು ವರ್ಷಗಳ ವಿಷಮಕಾಲಕ್ಕೆ ವಿದಾಯ ಹೇಳುವ ಕಾಲ ಸನ್ನಿಹಿತವಾಗಿದೆ ಅಂದುಕೊಂಡಿದ್ದೇನೆ. ಮತ್ತೆ ಅವಕಾಶದ ಸದ್ಬಳಕೆ ಮಾಡಿ ಸೀಮಿತವಾದ ವ್ಯವಸ್ಥೆಯೊಂದಿಗೆ ಇಂದು ಗಿರೀಶ್ ಶೆಟ್ಟಿ ತೆಳ್ಳಾರ್ ಅವರ ಸಮರ್ಥ ಮುಂದಾಳತ್ವದಲ್ಲಿ ಈ ಕ್ರೀಡೋತ್ಸವ ಬಂಟರ ಸಂಘದ ನೂತನ ಮೈಲಿಗಲ್ಲಾಗಿ ಮೂಡಿಬಂದಿದೆ. ಡಾ| ಪಿ. ವಿ. ಶೆಟ್ಟಿ ಅವರ ತೆರೆಮರೆಯ ಶ್ರಮ, ಗಿರೀಶ್ ಶೆಟ್ಟಿ ಹಾಗೂ ತಂಡದ ಕೊಡುಗೆ ಸ್ಮರಣೀಯ. ಎಲ್ಲರ ಪ್ರಯತ್ನ ಹಾಗೂ ಉತ್ತಮ ವ್ಯವಸ್ಥೆಯಿಂದ ಈ ಕ್ರೀಡೋತ್ಸವ ಯಶಸ್ಸು ಕಂಡಿರುವುದಕ್ಕಾಗಿ ಅಭಿನಂದನೆಗಳು. ಮುಂದೆಯೂ ಈ ಸ್ಫೂರ್ತಿಯನ್ನು ಅನುಭವದ ಸ್ಪರ್ಧೆಯಾಗಿ ಸ್ವೀಕರಿಸಿ ಬಂಟರ ಏಕತೆಯನ್ನು ಜಾಗತಿಕವಾಗಿ ಪ್ರದರ್ಶಿಸೋಣ.–ಚಂದ್ರಹಾಸ್ ಕೆ. ಶೆಟ್ಟಿ, ಅಧ್ಯಕ್ಷರು, ಬಂಟರ ಸಂಘ ಮುಂಬಯಿ
ಚಿತ್ರ-ವರದಿ : ರೋನ್ಸ್ ಬಂಟ್ವಾಳ್