Advertisement
ಅ.30ರಂದು ಪೂರ್ವಾಹ್ನ ಬಂಟರ ಭವನದ ಶ್ರೀಮತಿ ರಾಧಾಬಾಯಿ ಟಿ. ಭಂಡಾರಿ ಸಭಾಗೃಹದಲ್ಲಿ ಜರಗಿದ ಸಂಘದ 89ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸುಮಾರು 90 ವರ್ಷಗಳ ಇತಿಹಾಸ ಹೊಂದಿರುವ ಬಂಟರ ಪ್ರತಿಷ್ಠಿತ ಸಂಸ್ಥೆ ಬಂಟರ ಸಂಘದ ಅಭಿವೃದ್ಧಿಗಾಗಿ ಅದೆಷ್ಟೋ ಬಂಟ ಬಾಂಧವರು ತಮ್ಮ ಪರಿಶ್ರಮ, ಸಹಾಯ, ಸಹಕಾರದ ಮೂಲಕ ಸೇವೆ ಸಲ್ಲಿಸಿದ್ದಾರೆ. ಸಂಘವಿಂದು ಬೃಹತ್ ವೃಕ್ಷವಾಗಿ ಬೆಳೆದಿದೆ. ಅದು ಇನ್ನಷ್ಟು ಎತ್ತರಕ್ಕೆ ಏರಲು ಬಂಟ ಬಾಂಧವರೆಲ್ಲರೂ ಸಂಘದ ವರ್ಚಸ್ಸಿಗೆ ಕುಂದು ಬಾರದಂತೆ ಜಾಗ್ರತೆ ವಹಿಸಿ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಬೇಕು. ಸಂಘದ ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಗೊಂಡಿರುವ ಪದ್ಮನಾಭ ಎಸ್. ಪಯ್ಯಡೆ ಅವರು ಅಧ್ಯಕ್ಷ ಪದವಿಗೆ ಓರ್ವ ಸಮರ್ಥ ವ್ಯಕ್ತಿಯಾಗಿದ್ದಾರೆ. ಸಂಘದ ಅಭಿವೃದ್ಧಿಯಲ್ಲಿ ಅವರ ಪಾಲು ಹಿರಿದಾಗಿದೆ. ಅವರ ಸಹೃದಯತೆ, ವಿನಮ್ರ ಗುಣ, ದೂರದೃಷ್ಟಿತ್ವ ಮೆಚ್ಚುವಂಥದ್ದಾಗಿದೆ. ಅವರ ಅವಧಿಯಲ್ಲಿ ಸಂಘವು ಇನ್ನಷ್ಟು ಬೆಳಗಲಿ. ಮಹಿಳಾ ವಿಭಾಗದ ನೂತನ ಕಾರ್ಯಾಧ್ಯಕ್ಷೆಯಾಗಿ ಆಯ್ಕೆಯಾದ ರಂಜನಿ ಸುಧಾಕರ ಹೆಗ್ಡೆ ಹಾಗೂ ಯುವ ವಿಭಾಗದ ನೂತನ ಕಾರ್ಯಾಧ್ಯಕ್ಷ ಶರತ್ ಶೆಟ್ಟಿ ಅವರನ್ನು ಅಭಿನಂದಿಸಿ, ಪರಸ್ಪರ ಪ್ರೀತಿ, ವಿಶ್ವಾಸ, ಸ್ನೇಹ ಸೌಹಾರ್ದತೆಯಿಂದ ಗೆಲುವು ಸಾಧಿಸುವುದು ಅತಿ ಅಗತ್ಯವಾಗಿದೆ ಎಂದು ತಿಳಿಸಿ, ಪ್ರಶಸ್ತಿ ಪುರಸ್ಕೃತರಿಗೆ, ಸಮ್ಮಾನಿತರಿಗೆ, ವಿದ್ಯಾರ್ಥಿಗಳಿಗೆ ಶುಭಹಾರೈಸಿದರು.
Related Articles
Advertisement
2017-18ನೇ ಅವಧಿಯ ವಾರ್ಷಿಕ ಬಜೆಟ್‌ನ್ನು ಗೌರವ ಕೋಶಾಧಿಕಾರಿ ಸಿಎ ಐ. ಆರ್. ಶೆಟ್ಟಿ ಮಂಡಿಸಿ, ಸರ್ವಾನುಮತದಿಂದ ಅಂಗೀಕರಿಸಿಕೊಂಡರು.
ಸಂಘದ ಪೊವಾಯಿ ಶಿಕ್ಷಣ ಸಮಿತಿ, ಉನ್ನತ ಶಿಕ್ಷಣ ಸಮಿತಿ, ಮಹಿಳಾ ವಿಭಾಗ ಹಾಗೂ ಇತರ ಸೌಲಭ್ಯಗಳಿಗೆ ಹೆಸರಿಡುವ ಠರಾವನ್ನು ಮಂಡಿಸಿ ಅಂಗೀಕರಿಸಲಾಯಿತು. ಪೊವಾಯಿ ಶಿಕ್ಷಣ ಸಮಿತಿಯ ಕಾರ್ಯದರ್ಶಿ ನಿತ್ಯಾನಂದ ಹೆಗ್ಡೆ ಅವರು ಸಂಘದ ಎಸ್. ಎಂ. ಶೆಟ್ಟಿ ಶಿಕ್ಷಣ ಸಂಸ್ಥೆಯ ವರದಿ ವಾಚಿಸಿದರು. ಸಂಘದ ಉನ್ನತ ಶಿಕ್ಷಣ ಸಮಿತಿಯ ಕಾರ್ಯದರ್ಶಿ ಸಿಎ ಹರೀಶ್ ಹೆಗ್ಡೆ ಉನ್ನತ ಶಿಕ್ಷಣ ಸಂಸ್ಥೆಯ ವರದಿ ನೀಡಿದರು. ಸಂಘದ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ಕಾರ್ಯದರ್ಶಿ ಭಾಸ್ಕರ್ ಶೆಟ್ಟಿ ಕಾರ್ನಾಡ್ ವರದಿ ವಾಚಿಸಿದರು.
ಇದೇ ಸಂದರ್ಭದಲ್ಲಿ 2017-20ರ ಅವಧಿಗೆ ಅಧ್ಯಕ್ಷರಾಗಿ ಪದ್ಮನಾಭ ಎಸ್. ಪಯ್ಯಡೆ ಹಾಗೂ 45 ಮಂದಿ ಕಾರ್ಯಕಾರಿ ಸಮಿತಿಯ ಸದಸ್ಯರ ಹೆಸರನ್ನು ಚುನಾವಣ ಸಮಿತಿಯ ಸದಸ್ಯರುಗಳಾದ ಸಿಎ ಸುರೇಂದ್ರ ಶೆಟ್ಟಿ, ನ್ಯಾಯವಾದಿ ಜಗದೀಶ್ ಶೆಟ್ಟಿ, ನ್ಯಾಯವಾದಿ ಶೇಖರ್ ಶೆಟ್ಟಿ, ನ್ಯಾಯವಾದಿ ಗುಣಕರ್ ಶೆಟ್ಟಿ ಇವರ ಸಮ್ಮುಖದಲ್ಲಿ ಮುಖ್ಯ ಚುನಾವಣಾಧಿಕಾರಿ ನ್ಯಾಯವಾದಿ ಡಿ. ಕೆ. ಶೆಟ್ಟಿ ಅವರು ಘೋಷಿಸಿದರು.
ಇದೇ ಸಂದರ್ಭದಲ್ಲಿ ಸಂಘದ ಮಾಜಿ ಅಧ್ಯಕ್ಷರುರಾದ ಆರ್. ಸಿ. ಶೆಟ್ಟಿ, ಭುಜಂಗ ಎಂ. ಶೆಟ್ಟಿ, ಬಿ. ವಿವೇಕ್ ಶೆಟ್ಟಿ, ಸುಧಾಕರ ಎಸ್. ಹೆಗ್ಡೆ, ಡಾ| ಪದ್ಮನಾಭ ವಿ. ಶೆಟ್ಟಿ, ಐಕಳ ಹರೀಶ್ ಶೆಟ್ಟಿ, ಸಿಎ ಶಂಕರ್ ಬಿ. ಶೆಟ್ಟಿ, ಕರ್ನಿರೆ ವಿಶ್ವನಾಥ ಶೆಟ್ಟಿ ಹಾಗೂ ವಿಶ್ವಸ್ಥರುಗಳಾದ ರಘುರಾಮ ಶೆಟ್ಟಿ, ಎಚ್. ಶಾಂತಾರಾಮ ಕೆ. ಶೆಟ್ಟಿ, ಜಯರಾಮ ಎನ್. ಶೆಟ್ಟಿ, ಚಂದ್ರಹಾಸ ಕೆ. ಶೆಟ್ಟಿ, ಎನ್. ವಿವೇಕ್ ಶೆಟ್ಟಿ, ಲತಾ ಜೆ. ಶೆಟ್ಟಿ , ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷೆ ಲತಾ ಪಿ. ಭಂಡಾರಿ, ಸುಜಯಾ ಆರ್. ಶೆಟ್ಟಿ, ಆಶಾ ಎಂ. ಶೆಟ್ಟಿ, ಲತಾ ಪಿ. ಶೆಟ್ಟಿ ಮತ್ತು ಮಹಿಳಾ ವಿಭಾಗದ ಪದಾಧಿಕಾರಿಗಳನ್ನು ಈ ಸಂದರ್ಭದಲ್ಲಿ ವಿಶೇಷವಾಗಿ ಗೌರವಿಸಲಾಯಿತು.
ವಾರ್ಷಿಕ ಮಹಾಸಭೆಯ ವರದಿ ಪುಸ್ತಕವನ್ನು ಅಚ್ಚುಕಟ್ಟಾಗಿ ತಯಾರಿಸಲು ಶ್ರಮವಹಿಸಿದ ಡಾ| ಪ್ರಭಾಕರ ಶೆಟ್ಟಿ ಬಿ., ಕವಿತಾ ಐ. ಆರ್. ಶೆಟ್ಟಿ, ಪ್ರೇಮನಾಥ ಶೆಟ್ಟಿ ಮುಂಡ್ಕೂರು ಹಾಗೂ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳನ್ನು ಸತ್ಕರಿಸಲಾಯಿತು. ಸಂಘದ ಗೌರವ ಕೋಶಾಧಿಕಾರಿ ಸಿಎ ಐ. ಆರ್. ಶೆಟ್ಟಿ ಅವರು ಗೌರವಾನ್ವಿತರ ಹೆಸರು ವಾಚಿಸಿದರು. ಕಳೆದ ಮೂರು ವರ್ಷಗಳಲ್ಲಿ ಸಂಘದ ಅಧ್ಯಕ್ಷರಾಗಿ ಯಶಸ್ವಿ ಸೇವೆ ಸಲ್ಲಿಸಿದ ಕರ್ನಿರೆ ವಿಶ್ವನಾಥ ಶೆಟ್ಟಿ ಮತ್ತು ಪ್ರಭಾಕರ ಎಲ್. ಶೆಟ್ಟಿ ದಂಪತಿಗಳನ್ನು ಶಾಲು ಹೊದೆಸಿ, ಪುಷ್ಪಗುತ್ಛ, ಸ್ಮರಣಿಕೆಯೊಂದಿಗೆ ಗೌರವಿಸಲಾಯಿತು.
ಸಂಘದ ಪದಾಧಿಕಾರಿಗಳು, ಪೊವಾಯಿ ಶಿಕ್ಷಣ ಸಮಿತಿ, ಉನ್ನತ ಶಿಕ್ಷಣ ಸಮಿತಿ, ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿ, ಸಂಘದ ವಿವಿಧ ಉಪಸಮಿತಿಗಳ ಕಾರ್ಯಾಧ್ಯಕ್ಷರುಗಳು, ಮಹಿಳಾ ವಿಭಾಗದ ಪದಾಧಿಕಾರಿಗಳು, ಯುವ ವಿಭಾಗದ ಪದಾಧಿಕಾರಿಗಳು, ಪ್ರಾದೇಶಿಕ ಸಮಿತಿಯ ಪದಾಧಿಕಾರಿಗಳು, ಮಾತೃಭೂಮಿ ಪದಾಧಿಕಾರಿಗಳನ್ನು ಗೌರವಿಸಲಾಯಿತು. ಅಶೋಕ್ ಪಕ್ಕಳ ಕಾರ್ಯಕ್ರಮ ನಿರ್ವಹಿಸಿದರು. ವರದಿ ವರ್ಷದಲ್ಲಿ ನಿಧನ ಹೊಂದಿದ ಸಂಘದ ಸದಸ್ಯರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಗೌರವ ಪ್ರಧಾನ ಕಾರ್ಯದರ್ಶಿ ಉಳೂ¤ರು ಮೋಹನ್‌ದಾಸ್ ಶೆಟ್ಟಿ ಅವರು ವಂದಿಸಿದರು.
ವರ್ಷದಿಂದ ವರ್ಷಕ್ಕೆ ಸಂಘದ ಚಟುವಟಿಕೆ ಗಳು ಹೆಚ್ಚಾದಂತೆ ಜವಾಬ್ದಾರಿಯೂ ಹೆಚ್ಚುತ್ತಿದೆ. ಪ್ರತಿಯೋರ್ವ ಸದಸ್ಯರಿಗೂ ಸಂಘದಲ್ಲಿ ಸೇವೆ ಮಾಡುವ ಆಸಕ್ತಿ ಹೆಚ್ಚಾಗುವುದು ಸಹಜವೇ. ಆದರೆ ನಾವು ನಮ್ಮೊಳಗೆ ಸ್ಪರ್ಧೆಯಿಂದಿರದೆ ಸಂಘದ ಪ್ರತಿಷ್ಠೆ ಮತ್ತು ಗೌರವಕ್ಕೆ ಧಕ್ಕೆ ಬಾರದಂತೆ ಕಾರ್ಯನಿರ್ವಹಿಸುವುದು ಅಗತ್ಯವಾಗಿದೆ. ನನ್ನನ್ನು ನೀವೆಲ್ಲರೂ ಪ್ರೀತಿ, ವಿಶ್ವಾಸದ ಮೂಲಕ ಅಧ್ಯಕ್ಷ ಪದವಿಗೆ ಆಯ್ಕೆ ಮಾಡಿದ್ದೀರಿ. ನಿಮ್ಮೆಲ್ಲರ ಸಂಪೂರ್ಣ ಸಹಕಾರ ಅಗತ್ಯ. ಸಂಘಕ್ಕಾಗಿ ಹೊಸ ಹೊಸ ಯೋಚನೆ-ಯೋಜನೆಗಳ ಮೂಲಕ ಕಾರ್ಯನಿರ್ವಹಿಸಬೇಕಾಗಿದೆ. ಸಂಘವು ಹಿಂದಿನಿಂದಲೂ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುತ್ತಾ ಬಂದಿದ್ದು, ಅದಷ್ಟೇ ಸಾಲದು, ಮುಂಬಯಿ ಉಪನಗರಗಲ್ಲಿ ಬಂಟ ಬಾಂಧವರ ಮಕ್ಕಳಿಗಾಗಿ ಶಿಕ್ಷಣ ಸಂಸ್ಥೆಗಳನ್ನು ತೆರೆಯುವ ಮೂಲಕ ಬಂಟರಿಗೆ ಇನ್ನಷ್ಟು ಸೇವೆ ನೀಡಬೇಕು. ಐಕಳ ಹರೀಶ್ ಶೆಟ್ಟಿ, ಡಾ| ಪಿ. ವಿ. ಶೆಟ್ಟಿ, ಸಿಎ ಶಂಕರ್ ಬಿ. ಶೆಟ್ಟಿ ಅವರ ಸಹಕಾರವನ್ನು ಮರೆಯುವಂತಿಲ್ಲ. – ಪದ್ಮನಾಭ ಎಸ್. ಪಯ್ಯಡೆ (ನೂತನ ಅಧ್ಯಕ್ಷರು , ಬಂಟರ ಸಂಘ ಮುಂಬಯಿ). ತನ್ನನ್ನು ಮಹಿಳಾ ವಿಭಾಗಕ್ಕೆ ಪರಿಚಯಿಸಿದ ಸರೋಜಿನಿ ಶೆಟ್ಟಿ ಅವರನ್ನು ಮರೆಯುವಂತಿಲ್ಲ. ಮಾರ್ಗದರ್ಶನ ನೀಡುತ್ತಿರುವ ಡಾ| ಸುನೀತಾ ಎಂ. ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಲತಾ ಜೆ. ಶೆಟ್ಟಿ ಅವರಿಗೆ ಕೃತಜ್ಞತೆಗಳು. ಮಹಿಳೆಯರೆಲ್ಲರನ್ನೂ ಒಗ್ಗೂಡಿಸಿ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸುತ್ತೇನೆ
– ರಂಜನಿ ಎಸ್. ಹೆಗ್ಡೆ (ನೂತನ ಕಾರ್ಯಾಧ್ಯಕ್ಷೆ : ಬಂಟರ ಸಂಘ ಮಹಿಳಾ ವಿಭಾಗ). ಚಿತ್ರ-ವರದಿ : ಪ್ರೇಮನಾಥ್ ಶೆಟ್ಟಿ ಮುಂಡ್ಕೂರು