Advertisement
ಜ. 24ರಂದು ಸಂಜೆ ಕುರ್ಲಾ ಪೂರ್ವದ ಬಂಟರ ಭವನದ ಸ್ವಾಮಿ ಮುಕ್ತಾನಂದ ಸಭಾಗೃಹದ ಸತ್ಕಾರ್ ಶಿವರಾಮ ಶೆಟ್ಟಿ ವೇದಿಕೆಯಲ್ಲಿ ಜರಗಿದ ಸಂಘದ ಅಂಧೇರಿ-ಬಾಂದ್ರಾ ಪ್ರಾದೇಶಿಕ ಸಮಿತಿಯ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬಂಟ ಸಮಾಜದ ನಮ್ಮ ಹಿರಿಯರ ಕನಸಿಂದು ನನಸಾಗಿದೆ. ಸಂಘದಲ್ಲಿಂದು ಸಮಾಮುಖೀ ಕಾರ್ಯಗಳು ಭರದಿಂದ ಸಾಗುತ್ತಿದೆ. ಸಂಘವು ಬಂಟರ ಅಭಿಮಾನದ ಸಂಘಟನೆಯಾಗಿ ಬೆಳೆದು ನಿಂತಿದೆ. ನಮ್ಮ ಹಿರಿಯರು ಕಟ್ಟಿದ ಸಂಘವಿಂದು ಅಭಿವೃದ್ಧಿಯ ಪಥದತ್ತ ಸಾಗುತ್ತಿದೆ. ಸಂಘದ ಪ್ರತಿಷ್ಠೆಗೆ ಎಳ್ಳಷ್ಟೂ ಧಕ್ಕೆಬಾರದಂತೆ ಕಾಪಿಡುವ ಜವಾಬ್ದಾರಿ ನಮ್ಮದಾಗಿದೆ. ನಮ್ಮ ಮುಂದಿನ ಪೀಳಿಗೆಗೆ ಇದನ್ನು ಉಳಿಸಿ-ಬೆಳೆಸುವ ಕಾರ್ಯಕ್ಕೆ ಸಿದ್ಧರಾಗಬೇಕು ಎಂದು ಕರೆನೀಡಿದರು. ವಿಶ್ವ ಬಂಟರ ಸಂಘಗಳ ಒಕ್ಕೂಟದ ನೂತನ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಅವರು ನಮ್ಮ ಸಂಘದ ಸಾರಥ್ಯ ವಹಿಸಿ ಸಂಘದ ಹೆಸರನ್ನು ವಿಶ್ವವಿಖ್ಯಾತಿಗೊಳಿಸಿ ಅವರಿಂದು ವಿಶ್ವಜ್ಯೋತಿಯಾಗಿ ಬೆಳಗುತ್ತಿದ್ದಾರೆ. ವಿಶ್ವ ಮಟ್ಟದಲ್ಲಿರುವ ಬಂಟರಿಗೆ, ಬಂಟ ಸಂಘಟನೆಗಳಿಗೆ ಮಾರ್ಗದರ್ಶಕರಾಗಿ ಸೇವೆ ಸಲ್ಲಿಸಲು ಮುಂದಾಗಿರುವ ಐಕಳರಿಗೆ ನಾವೆಲ್ಲರೂ ಸಹಕಾರ ನೀಡಬೇಕು ಎಂದರು. ಸಂಘದ ಅಂಧೇರಿ-ಬಾಂದ್ರಾ ಸಮಿತಿಯ ನೂತನ ಕಾರ್ಯಾಧ್ಯಕ್ಷ ಡಾ| ಆರ್. ಕೆ. ಶೆಟ್ಟಿ ಮತ್ತು ತಂಡವನ್ನು ಅಭಿನಂದಿಸಿ, ಕಾರ್ಯಾಧ್ಯಕ್ಷ ಗುಣಪಾಲ್ ಆರ್. ಶೆಟ್ಟಿ ಮತ್ತು ತಂಡದ ಸೇವೆಗೆ ಕೃತಜ್ಞತೆ ಸಲ್ಲಿಸಿದರು.
Related Articles
ಸಮಿತಿಯ ನಿರ್ಗಮನ ಕಾರ್ಯಾಧ್ಯಕ್ಷ ಗುಣಪಾಲ್ ಆರ್. ಶೆಟ್ಟಿ ಐಕಳ ಇವರನ್ನು ಅಧ್ಯಕ್ಷರು ಮತ್ತು ಡಾ| ಆರ್. ಕೆ. ಶೆಟ್ಟಿ ಗೌರವಿಸಿದರು. ಮಹಿಳಾ ವಿಭಾಗದ ನಿರ್ಗಮನ ಕಾರ್ಯಾಧ್ಯಕ್ಷೆ ಸುಜಾತಾ ಆರ್. ಶೆಟ್ಟಿ ಅವರನ್ನು ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ರಂಜನಿ ಎಸ್. ಹೆಗ್ಡೆ, ಯುವ ವಿಭಾಗದ ನಿರ್ಗಮನ ಕಾರ್ಯಾಧ್ಯಕ್ಷ ಸಾಗರ್ ಡಿ. ಶೆಟ್ಟಿ ಅವರನ್ನು ಡಾ| ಆರ್. ಕೆ. ಶೆಟ್ಟಿ ಸಮ್ಮಾನಿಸಿದರು.
ಪಶ್ಚಿಮ ವಿಭಾಗ ಪ್ರಾದೇಶಿಕ ಸಮಿತಿಗಳ ಕಾರ್ಯಾಧ್ಯಕ್ಷ ಡಾ| ಪ್ರಭಾಕರ ಬಿ. ಶೆಟ್ಟಿ ಅವರು ಮಾತನಾಡಿ, ಹಿಂದೆ ಪ್ರಾದೇಶಿಕ ಸಮಿತಿಗಳಲ್ಲಿ ಪದಗ್ರಹಣದ ಕ್ರಮ ಇರಲಿಲ್ಲ. ಇದಕ್ಕಾಗಿ ಸಮಿತಿಗಳು ಹುಚ್ಚು ಖರ್ಚು ಮಾಡುವುದು ಸರಿಯಲ್ಲ. ಮುಂದಿನ ವರ್ಷಗಳಿಂದ ಇದಕ್ಕೆ ಕಡಿವಾಣ ಹಾಕಬೇಕಾಗಿದೆ. ಸಮಿತಿಗಳು ಮಾಡುವ ಕೆಲಸ ಬಹಳಷ್ಟಿದೆ. ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಪ್ರಯತ್ನಶೀಲರಾಗೋಣ ಎಂದರು.
Advertisement
ಪ್ರಶಾಂತಿ ಡಿ. ಶೆಟ್ಟಿ ಪ್ರಾರ್ಥನೆಗೈದರು. ನಿರ್ಗಮನ ಕಾರ್ಯಾಧ್ಯಕ್ಷ ಐಕಳ ಗುಣಪಾಲ್ ಶೆಟ್ಟಿ ಅವರು ಸ್ವಾಗತಿಸಿ ಮಾತನಾಡಿ, ಅಂಧೇರಿ-ಬಾಂದ್ರಾ ಪ್ರಾದೇಶಿಕ ಸಮಿತಿಯು ಕಳೆದ ಮೂರು ವರ್ಷ ಸಾಧನೆಗಳನ್ನು ವಿವರಿಸಿದರು. ಸಮಿತಿಯ ಎಲ್ಲಾ ಸದಸ್ಯರೂ ಒಮ್ಮತದಿಂದ ಕಾರ್ಯನಿರ್ವಹಿಸಿದ ಪರಿಣಾಮ ಅತ್ಯುತ್ತಮ ಪ್ರಾದೇಶಿಕ ಸಮಿತಿ ಎಂಬ ಪ್ರಶಸ್ತಿಗೆ ಪಾತ್ರವಾಗಲು ಕಾರಣವಾಯಿತು ಎಂದರು.
ವಿಶ್ವ ಬಂಟರ ಸಂಘಗಳ ಒಕ್ಕೂಟದ ನೂತನ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಅವರನ್ನು ಗೌರವಿಸಲಾಯಿತು. ವೇದಿಕೆಯಲ್ಲಿದ್ದ ಎಲ್ಲಾ ಪದಾಧಿಕಾರಿಗಳು, ವಿಶ್ವಸ್ಥರು, ಮಾಜಿ ಅಧ್ಯಕ್ಷರುಗಳು, ಉಪಸಮಿತಿಗಳ ಕಾರ್ಯಾಧ್ಯಕ್ಷರುಗಳನ್ನು ಗೌರವಿಸಲಾಯಿತು. ಅಶೋಕ್ ಪಕ್ಕಳ ಕಾರ್ಯನಿರ್ವಹಿಸಿದರು.
ವೇದಿಕೆಯಲ್ಲಿ ಸಂಘದ ಪದಾಧಿಕಾರಿಗಳು ಹಾಗೂ ಸಮಿತಿಯ ಸಂಚಾಲಕ ಡಿ. ಕೆ. ಶೆಟ್ಟಿ, ಉಪ ಕಾರ್ಯಾಧ್ಯಕ್ಷ ನ್ಯಾಯವಾದಿ ಆರ್. ಜಿ. ಶೆಟ್ಟಿ, ಕಾರ್ಯದರ್ಶಿ ರವಿ ಶೆಟ್ಟಿ, ಕೋಶಾಧಿಕಾರಿ ಕೆ. ವಿ. ಶೆಟ್ಟಿ, ಜತೆ ಕಾರ್ಯದರ್ಶಿ ರಮೇಶ್ ಡಿ. ಶೆಟ್ಟಿ, ಜತೆ ಕೋಶಾಧಿಕಾರಿ ಪ್ರಸಾದ್ ಶೆಟ್ಟಿ, ಸಾಂಸ್ಕೃತಿಕ ಸಮಿತಿಯ ಕಾರ್ಯಾಧ್ಯಕ್ಷ ಸವಿತಾ ಕೆ. ಶೆಟ್ಟಿ, ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷ ಪ್ರಭಾಕರ ಶೆಟ್ಟಿ, ನಿಧಿ ಸಂಗ್ರಹ ಸಮಿತಿಯ ಕಾರ್ಯಾಧ್ಯಕ್ಷ ಯಶವಂತ್ ಶೆಟ್ಟಿ, ಕ್ರೀಡಾ ಕಾರ್ಯಾಧ್ಯಕ್ಷ ಸೂರಜ್ ಶೆಟ್ಟಿ, ಮ್ಯಾರೇಜ್‌ಸೆಲ್‌ನ ಕಾರ್ಯಾಧ್ಯಕ್ಷ ಕೃಷ್ಣ ಶೆಟ್ಟಿ, ಸದಸ್ಯತ್ವ ಸಮಿತಿಯ ಕಾರ್ಯಾಧ್ಯಕ್ಷ ಲಕ್ಷ್ಮಣ್ ಶೆಟ್ಟಿ, ಸಮಿತಿಯ ನಿರ್ಗಮನ ಕಾರ್ಯದರ್ಶಿ ಸಿಎ ಗಣೇಶ್ ಶೆಟ್ಟಿ, ನಿರ್ಗಮನ ಕೋಶಾಧಿಕಾರಿ ಸಿಎ ಸುನಿಲ್ ಶೆಟ್ಟಿ ಹಾಗೂ ಉಪಸಮಿತಿಗಳ ಕಾರ್ಯಾಧ್ಯಕ್ಷರು ಉಪಸ್ಥಿತರಿದ್ದರು. ಸಾಂಸ್ಕೃತಿಕ ಸಮಿತಿಯ ನಿರ್ಗಮನ ಕಾರ್ಯಾಧ್ಯಕ್ಷೆ ಡಾ| ಪೂರ್ಣಿಮಾ ಎಸ್. ಶೆಟ್ಟಿ ಸಾಂಸ್ಕೃತಿಕ ಕಾರ್ಯಕ್ರಮ ನಿರ್ವಹಿಸಿದರು. ಪೂಜಾ ದೇವಾಡಿಗ ಅವರಿಂದ ಸ್ಯಾಕೊÕಫೋನ್‌ವಾದನ ನಡೆಯಿತು. ನಿಖೀತಾ ಅಮೀನ್ ಬಳಗದವರಿಂದ ನೃತ್ಯ, ಹರೀಶ್ ಶೆಟ್ಟಿ ಅವರಿಂದ ರಸಮಂಜರಿ, ಅಂಕಿತಾ ರಮೇಶ್ ರೈ, ರಿತಿಕಾ ಆರ್. ಜಿ. ಶೆಟ್ಟಿ ಅವರಿಂದ ನೃತ್ಯ, ಮಹಿಳಾ ಸದಸ್ಯೆಯರಿಂದ ಸಮೂಹಗೀತೆ ನಡೆಯಿತು. ಕಾರ್ಯದರ್ಶಿ ರವಿ ಶೆಟ್ಟಿ ವಂದಿಸಿದರು. ಕೊನೆಯಲ್ಲಿ ಭೋಜನದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು.
ಮನುಷ್ಯನಾಗಿ ಹುಟ್ಟಿದವರಿಗೆ ಸಮಾಜದ ಬಹುದೊಡ್ಡ ಋಣವಿರುತ್ತದೆ. ಈ ಋಣವನ್ನು ಸಮಯಾವಕಾಶ ಒದಗಿದಾಗ ತೀರಿಸುವ ಹೊಣೆ ನಮ್ಮದಾಗಿದೆ. ಅಂತೆಯೇ ಕಾರ್ಯಾಧ್ಯಕ್ಷನಾಗಲು ಕೊನೆಯ ಕ್ಷಣದಲ್ಲಿ ಒಪ್ಪಿಗೆ ನೀಡಬೇಕಾಯಿತು. ನಿರ್ಗಮನ ಕಾರ್ಯಾಧ್ಯಕ್ಷ ಗುಣಪಾಲ್ ಆರ್. ಶೆಟ್ಟಿ ಐಕಳ ಬೆಂಬಿಡದ ರೀತಿಯಲ್ಲಿ ನನ್ನನ್ನು ಹುರಿದುಂಬಿಸಿ ಪ್ರೋತ್ಸಾಹಿಸಿದ್ದಾರೆ. ಅದಕ್ಕಾಗಿ ಕೃತಜ್ಞತೆಗಳು. ಸಮಾಜದಲ್ಲಿ ಸಂಕಷ್ಟದಲ್ಲಿರುವ ಜನರ ತೊಂದರೆಗಳನ್ನು ನಿವಾರಿಸುವುದು ನಮ್ಮ ಕರ್ತವ್ಯವಾಗಿದೆ. ಶಿಕ್ಷಣ, ಆರೋಗ್ಯ, ವಯಸ್ಕರಿಗೆ ಸಹಾಯ ಮಾಡುವುದು, ಬಡತನ ರೇಖೆಯಲ್ಲಿರುವ ಕುಟುಂಬಗಳ ಕಣ್ಣೀರೊರೆಸುವ ಕಾಯಕದಲ್ಲಿ ತೊಡಗುವುದು ಇನ್ನಿತರ ಮುಖ್ಯ ಧ್ಯೇಯಗಳನ್ನು ಗಮನದಲ್ಲಿಟ್ಟುಕೊಂಡು ಸೇವೆ ಮಾಡುತ್ತೇನೆ. ಸಂಘದ ಕಾನೂನಿನ ನಿಯಮಗಳನ್ನು ಸದಾ ಪರಿಪಾಲಿಸುತ್ತೇನೆ – ಡಾ| ಆರ್. ಕೆ. ಶೆಟ್ಟಿ (ಕಾರ್ಯಾಧ್ಯಕ್ಷರು : ಬಂಟರ ಸಂಘ ಅಂಧೇರಿ-ಬಾಂದ್ರಾ). ಅಂಧೇರಿ-ಬಾಂದ್ರಾ ಪ್ರಾದೇಶಿಕ ಸಮಿತಿಯಲ್ಲಿ ನಾವೆಲ್ಲರೂ ಶ್ರಮವಹಿಸಿ ದುಡಿದ ಪರಿಣಾಮ ಸಮಿತಿಗೆ ಅತ್ಯುತ್ತಮ ಪ್ರಾದೇಶಿಕ ಸಮಿತಿ ಪ್ರಶಸ್ತಿ ಲಭಿಸಿದೆ. ನಮ್ಮಲ್ಲಿ ಎಂದಿಗೂ ಭಿನ್ನಾಭಿಪ್ರಾಯ ಬಂದಿಲ್ಲ. ಎಲ್ಲರೂ ಒಗ್ಗಟ್ಟಿನಿಂದ ಸೇವೆ ಸಲ್ಲಿಸಿದ್ದೇವೆ. ನಿರ್ಗಮನ ಕಾರ್ಯಾಧ್ಯಕ್ಷೆ ಸುಜಾತಾ ಗುಣಪಾಲ್ ಶೆಟ್ಟಿ ಅವರು ಸಮಿತಿಯ ಸೇವೆಗಾಗಿ ಪ್ರೋತ್ಸಾಹ ನೀಡಿದ್ದಾರೆ. ಗ್ರಾಮಾಂತರ ಪ್ರದೇಶದಲ್ಲಿರುವ ವಯಸ್ಸಾದ ಹೆಣ್ಮಕ್ಕಳ ವಿವಾಹಕ್ಕೆ ತಾವು ಐಕಳ ಹರೀಶ್ ಶೆಟ್ಟಿ ಅವರೊಂದಿಗಿದ್ದು, ಸಹಾಯ ಮಾಡುತ್ತೇವೆ
– ವನಿತಾ ನೋಂಡಾ (ನೂತನ ಕಾರ್ಯಾಧ್ಯಕ್ಷೆ ಮಹಿಳಾ ವಿಭಾಗ : ಅಂಧೇರಿ-ಬಾಂದ್ರಾ). ಸಮಿತಿಗೆ ಈಗಾಗಲೇ 12 ವರ್ಷಗಳ ಸಂದಿದ್ದು, ಕಳೆದ 9 ವರ್ಷಗಳಿಂದ ಎಲ್ಲರೊಡಗೂಡಿ ಕಾರ್ಯನಿರ್ವಹಿಸಿದ್ದೇನೆ. ನಾಯಕರೆನಿಸಿಕೊಳ್ಳುವವರು ಮತ, ಭೇದ ಮರೆತು ತಾಳ್ಮೆಯಿಂದ ಇರುವ ಅಗತ್ಯವಿದೆ. ಹಿರಿಯ ಮಹಿಳೆಯರ ಮಾರ್ಗದರ್ಶನದೊಂದಿಗೆ ಕೆಲಸ ಮಾಡಿದ್ದೇವೆ. ರಥಸಪ್ತಮಿಯ ದಿನವಾದ ಇಂದು ಪದವಿ ಪ್ರದಾನವಾಗಿದೆ. ಸಮಿತಿಯು ಮುಂದಿನ ದಿನಗಳಲ್ಲಿ ಇನ್ನೂ ಎತ್ತರಕ್ಕೇರಲಿ
– ಸುಜಾತಾ ಗುಣಪಾಲ್ ಶೆಟ್ಟಿ (ನಿರ್ಗಮನ ಕಾರ್ಯಾಧ್ಯಕ್ಷೆ : ಅಂಧೇರಿ-ಬಾಂದ್ರಾ). ಚಿತ್ರ-ವರದಿ : ಪ್ರೇಮನಾಥ್ ಶೆಟ್ಟಿ ಮುಂಡ್ಕೂರು