Advertisement
ಧಾರ್ಮಿಕ ಕಾರ್ಯಕ್ರಮವಾಗಿ ರವೀಂದ್ರನಾಥ ಭಂಡಾರಿ ಹಾಗೂಪರಿವಾರದವರ ಉಪಸ್ಥಿತಿಯಲ್ಲಿ ಬೆಳಗ್ಗೆ ಗಣಹೋಮ, ನಾಗದೇವರಿಗೆ ನಾಗತಂಬಿಲ, ಸಂಜೆ ಶ್ರೀ ದುರ್ಗಾಪರಮೇಶ್ವರಿ ದೇವಿಗೆ ಕುಂಕುಮಾರ್ಚನೆ, ಶ್ರೀ ಮಹಾವಿಷ್ಣು ಮಂದಿರದಲ್ಲಿ ದೀಪಾಲಂಕಾರ ಸೇವೆ, ರಂಗಪೂಜೆ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಿತು.
Related Articles
Advertisement
ಪದಾಧಿಕಾರಿಗಳು, ವಿವಿಧ ಉಪಸಮಿತಿಗಳ ಕಾರ್ಯಕಾರಿ ಸಮಿತಿಯ ಸದಸ್ಯರು, ಭಕ್ತಾದಿಗಳು ಪಾಲ್ಗೊಂಡು ನೂತನ ಕಾರ್ಯಾಧ್ಯಕ್ಷ ರವೀಂದ್ರನಾಥ ಭಂಡಾರಿ ಅವರನ್ನು ಅಭಿನಂದಿಸಿ ಶುಭ ಹಾರೈಸಿದರು.
ರವೀಂದ್ರನಾಥ ಭಂಡಾರಿ ಅವರು ನಗರದಲ್ಲಿ ಯಶಸ್ವಿ ಉದ್ಯಮಿಯಾಗಿ, ಸಮಾಜ ಸೇವಕರಾಗಿ ಈಗಾಗಲೇ ಪ್ರಸಿದ್ಧರಾಗಿದ್ದು, ಬಂಟರ ಸಂಘದ ಸಾಹಿತ್ಯಕ ಮತ್ತು ಸಾಂಸ್ಕೃತಿಕ ಸಮಿತಿಯ ಕಾರ್ಯಾಧ್ಯಕ್ಷರಾಗಿ ಸೇವೆ ಸಲ್ಲಿಸಿ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಆಯೋಜಿಸುವುದರ ಮೂಲಕ ಸಮಾಜ ಬಾಂಧವರ ಪ್ರೀತ್ಯಾದರಗಳಿಗೆ ಪಾತ್ರರಾಗಿದ್ದಾರೆ. ಎಲ್ಲರೊಂದಿಗೆ ಆತ್ಮೀಯ ಭಾವನೆಯನ್ನು ಹೊಂದಿರುವ ಇವರು ಸರಳ, ಸಜ್ಜನಿಕೆಯ ವ್ಯಕ್ತಿತ್ವದವರು. ನಾಡಿನ ಕಲೆ, ಸಂಸ್ಕೃತಿ, ಸಾಹಿತ್ಯದ ಬಗ್ಗೆ ಅಪಾರ ಒಲವನ್ನು ಹೊಂದಿರುವ ಇವರು ಬಂಟರ ಸಂಘದ ಮುಖಾಂತರ ಪ್ರತೀ ವರ್ಷ ಸಂಘದ ಕಾರ್ಯಕಾರಿ ಸಮಿತಿಯ ಸದಸ್ಯರಿಂದಲೇ ಯಕ್ಷಗಾನ ಪ್ರದರ್ಶನ ನೀಡಿದ ಹೆಗ್ಗಳಿಕೆಯನ್ನು ಹೊಂದಿದ್ದಾರೆ.
ಸಂಘದ ಶ್ರೀ ಮಹಾವಿಷ್ಣು ಕೃಪಾ ಬಂಟ ಯಕ್ಷಕಲಾ ವೇದಿಕೆಯ ಹಿಮ್ಮೇಳ-ಮುಮ್ಮೇಳದ ಪರಿಪೂರ್ಣ ವೇಷ-ಭೂಷಣಗಳನ್ನು ದಾನಿ ಗಳ ಸಹಕಾರದೊಂದಿಗೆ ಅರ್ಪಿಸಿದ ಕಲಾಪ್ರೇಮಿ ಇವರು. ಆಧ್ಯಾತ್ಮಿಕ ಚಿಂತಕರೂ ಆಗಿರುವ ಇವರು ಕಳೆದ ಐದು ವರ್ಷಗಳ ಹಿಂದೆ ಹುಟ್ಟೂರಾದ ಸಜಿಪದಲ್ಲಿ ಸುಮಾರು 40 ಲಕ್ಷ ರೂ. ಗಳಲ್ಲಿ ಶ್ರೀರಾಮ ಭಜನ ಮಂದಿರವನ್ನು ನಿರ್ಮಿಸಿರುವುದಲ್ಲದೆ, ಊರಿನ ಪ್ರತಿಯೊಂದು ದೈವ-ದೇವಸ್ಥಾನಗಳಿಗೆ ಇವರ ಕೊಡುಗೆ ಅಪಾರವಾಗಿದೆ.
ಕಳೆದ ಒಂಭತ್ತು ವರ್ಷಗಳಿಂದ ಹೊಸನಗರ ಮೇಳವನ್ನು ಮುಂಬಯಿಗೆ ಆಹ್ವಾನಿಸಿ ಉಚಿತ ಯಕ್ಷಗಾನ ಪ್ರದರ್ಶನಗಳನ್ನು ನೀಡಿದ ಕಲಾ ಶ್ರೀಮಂತಿಕೆ ಇವರದ್ದಾಗಿದೆ. ಅವರ ಕ್ರಿಯಾಶೀಲತೆಗೆ ಬಂಟರ ಸಂಘದ ವರ್ಷದ ಅತ್ಯುತ್ತಮ ಸಮಾಜ ಸೇವಕ ಚಿನ್ನದ ಪದಕ ಲಭಿಸಿರುವುದು ಸಾಕ್ಷಿಯಾಗಿದೆ.