Advertisement

ಬಂಟ್ಸ್‌ ಪ್ರೀಮಿಯರ್‌ ಲೀಗ್‌ -2018′ಕ್ರಿಕೆಟ್‌ 

03:51 PM Apr 15, 2018 | Team Udayavani |

ಮುಂಬಯಿ: ಬಂಟರ ಸಂಘ ಮುಂಬಯಿ ಇದರ ಯುವ ವಿಭಾಗದ ಆಶ್ರಯದಲ್ಲಿ ಸಂಘದ ಕುರ್ಲಾ-ಭಾಂಡೂಪ್‌ ಪ್ರಾದೇಶಿಕ ಸಮಿತಿಯ ಸಹಕಾರದೊಂದಿಗೆ ನಡೆದ “ಬಂಟ್ಸ್‌ ಪ್ರೀಮಿಯರ್‌ ಲೀಗ್‌ -2018′ ಕ್ರಿಕೆಟ್‌ ಪಂದ್ಯಾಟದಲ್ಲಿ ಬಂಟರ ಸಂಘ ಮುಂಬಯಿ ಇದರ ಡೊಂಬಿವಲಿ ಪ್ರಾದೇಶಿಕ ಸಮಿತಿಯು ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.

Advertisement

ಎ. 8ರಂದು ಚೆಂಬೂರು ತಿಲಕ್‌ ನಗರದ ಸಹ್ಯಾದ್ರಿ ಕ್ರೀಡಾ ಮೈದಾನದಲ್ಲಿ ಬೆಳಗ್ಗೆಯಿಂದ ಸಂಜೆಯ ವರೆಗೆ ನಡೆದ ಈ ಕ್ರಿಕೆಟ್‌ ಪಂದ್ಯಾಟದ ಫೈನಲ್‌ನಲ್ಲಿ ಬಂಟರ ಸಂಘ ಮುಂಬಯಿ ಡೊಂಬಿವಲಿ ಪ್ರಾದೇಶಿಕ ಸಮಿತಿಯು ಸಂಘದ ನವಿಮುಂಬಯಿ ಪ್ರಾದೇಶಿಕ ಸಮಿತಿಯನ್ನು ನಾಲ್ಕು ವಿಕೆಟ್‌ಗಳಿಂದ ಸೋಲಿಸಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. ಸಂಘದ ನವಿಮುಂಬಯಿ ಪ್ರಾದೇಶಿಕ ಸಮಿತಿಯು ರನ್ನರ್ ಅಪ್‌ ಪ್ರಶಸ್ತಿಗೆ ಭಾಜನವಾಯಿತು.

ಪಂದ್ಯಾಟದಲ್ಲಿ ಡೊಂಬಿವಲಿ ಪ್ರಾದೇಶಿಕ ಸಮಿತಿಯ ಪ್ರಸನ್ನ ಶೆಟ್ಟಿ ಪಂದ್ಯ ಪುರುಷೋತ್ತಮ ಪ್ರಶಸ್ತಿಯನ್ನು ಪಡೆದರೆ, ಡೊಂಬಿವಲಿ ಪ್ರಾದೇಶಿಕ ಸಮಿತಿಯ ಸುರೇಶ್‌ ಶೆಟ್ಟಿ ಇವರು ಅತ್ಯುತ್ತಮ ಆಟಗಾರರಾಗಿ ಮಿಂಚಿದರು. 

ಉತ್ತಮ ಎಸೆತಗಾರ ಪ್ರಶಸ್ತಿಯನ್ನು ಬಂಟರ ಸಂಘ ಮುಂಬಯಿ ಇದರ ವಸಾಯಿ-ಡಹಾಣೂ ಪ್ರಾದೇಶಿಕ ಸಮಿತಿಯ ಅರುಣ್‌ ಶೆಟ್ಟಿ ಇವರು ಪಡೆದರು. ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಗಣ್ಯರ ಸಮ್ಮುಖದಲ್ಲಿ ವಿಜೇತ ತಂಡಗಳಿಗೆ ಪ್ರಶಸ್ತಿ ಪ್ರದಾನಿಸಲಾಯಿತು.

ಬೆಳಗ್ಗೆ 7ರಿಂದ ಪ್ರಾರಂಭಗೊಂಡ ಪಂದ್ಯಾಟ ವನ್ನು ಮುಂಬಯಿ ರಣಜಿ ಆಟಗಾರ ಪ್ರವೀಶ್‌ ಶೆಟ್ಟಿ ಇವರು ಬ್ಯಾಟಿಂಗ್‌ ಮಾಡುವುದರ ಮೂಲಕ ಉದ್ಘಾಟಿಸಿ ಶುಭ ಹಾರೈಸಿದರು. 

Advertisement

ಈ ಸಂದರ್ಭದಲ್ಲಿ ಬಂಟರ ಸಂಘ ಕುರ್ಲಾ- ಭಾಂಡೂಪ್‌ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಸಿಎ ವಿಶ್ವನಾಥ ಶೆಟ್ಟಿ, ಬಂಟರ ಸಂಘ ಯುವ ವಿಭಾಗದ ಕಾರ್ಯಾಧ್ಯಕ್ಷ ಶರತ್‌ ಶೆಟ್ಟಿ, ಕರ್ನಾಟಕ ನ್ಪೋರ್ಟಿಂಗ್‌ ಅಸೋಸಿಯೇಶನ್‌ ಮುಂಬಯಿ ಕಾರ್ಯದರ್ಶಿ ಶಿವಛತ್ರಪತಿ ಪ್ರಶಸ್ತಿ ಪುರಸ್ಕೃತ ಜಯ ಎ. ಶೆಟ್ಟಿ, ಗೌರವ್‌ ಪಯ್ಯಡೆ, ಸಾಗರ್‌ ಡಿ. ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. 

ಕ್ರಿಕೆಟ್‌ ಪಂದ್ಯಾಟದಲ್ಲಿ ಬಂಟರ ಸಂಘ ಮುಂಬಯಿ ಇದರ ಒಂಭತ್ತು ಪ್ರಾದೇಶಿಕ ಸಮಿತಿ ಗಳಲ್ಲದೆ, ಬೋಂಬೆ ಬಂಟ್ಸ್‌ ಅಸೋಸಿಯೇಶನ್‌, ಮುಲುಂಡ್‌ ಬಂಟ್ಸ್‌, ಥಾಣೆ ಬಂಟ್ಸ್‌ ತಂಡಗಳು ಸೆಣಸಾಡಿದವು.

ಬಂಟರ ಸಂಘ ಮುಂಬಯಿ ಇದರ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು, ವಿವಿಧ ಪ್ರಾದೇಶಿಕ ಸಮಿತಿಗಳ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು, ಯುವ ವಿಭಾಗದ ಪದಾಧಿಕಾರಿಗಳು, ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ  ಪಂದ್ಯಾಟದಲ್ಲಿ ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. 

ಬಂಟರ ಸಂಘ ಕುರ್ಲಾ-ಭಾಂಡೂಪ್‌ ಪ್ರಾದೇಶಿಕ ಸಮಿತಿಯ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು, ಮಹಿಳಾ ವಿಭಾಗ, ಯುವ ವಿಭಾಗದ ಪದಾಧಿಕಾರಿಗಳು, ಸದಸ್ಯರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next