Advertisement
ಫೆ. 10ರಂದು ಬಂಟ್ಸ್ ಫೋರಂ ಮೀರಾ-ಭಾಯಂದರ್ ಸ್ಥಳೀಯ ಮೈದಾನದಲ್ಲಿ ಆಯೋಜಿಸಿದ್ದ ವಾರ್ಷಿಕ ಕ್ರೀಡೋತ್ಸವದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿ ವಿಜೇತ ಸ್ಪರ್ಧಿಗಳನ್ನು ಅಭಿನಂದಿಸಿ ಶುಭಹಾರೈಸಿದರು.
Related Articles
Advertisement
ಸಲಹಾ ಸಮಿತಿಯ ಕಾರ್ಯಾಧ್ಯಕ್ಷ ಜಯಪ್ರಕಾಶ್ ಆರ್. ಭಂಡಾರಿ ಮಾತನಾಡಿ, ಅಚ್ಚುಕಟ್ಟಾಗಿ ನಡೆದ ಕ್ರೀಡಾಕೂಟಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಎಲ್ಲಾ ಸದಸ್ಯರು ಒಟ್ಟಾಗಿ ಒಮ್ಮತದಿಂದ ಸಂಸ್ಥೆಯನ್ನು ಮುನ್ನಡೆಸಬೇಕು ಎಂದರು.
ಗೌರವಾಧ್ಯಕ್ಷ ಸಂತೋಷ್ ರೈ ಬೆಳ್ಳಿಪಾಡಿ ಮಾತನಾಡಿ, ಕ್ರೀಡಾಕೂಟದ ಮೂಲ ಉದ್ದೇಶ ಪರಿಸರದ ಸಮಾಜ ಬಾಂಧವರನ್ನು ಒಟ್ಟುಗೂಡಿಸಿ ಕೌಟುಂಬಿಕ ಪರಿಚಯದ ದೃಷ್ಟಿಯಿಂದ ಕ್ರೀಡೆಗೆ ಮಹತ್ವ ಇದೆ. ಸೋಲು-ಗೆಲುವು ಎಂಬ ಭಾವನೆ ಮನಸ್ಸಿನಲ್ಲಿ ಇಡದೆ ಎಲ್ಲರೂ ಕ್ರೀಡಾಕೂಟದಲ್ಲಿ ಭಾಗವಹಿಸಿ ಸಂಸ್ಥೆಗೆ ಸಹಕರಿಸಬೇಕು ಎಂದು ನುಡಿದರು.
ಬಂಟ್ಸ್ ಫೋರಂನ ಅಧ್ಯಕ್ಷ ಚಂದ್ರಹಾಸ ಕೆ. ಶೆಟ್ಟಿ ಮಾತನಾಡಿ, ಯಶಸ್ವಿಯಾಗಿ ಕ್ರೀಡಾಕೂಟವನ್ನು ನಡೆಸಿಕೊಟ್ಟ ಎಲ್ಲಾ ಸದಸ್ಯರಿಗೂ ಕೃತಜ್ಞತೆ ಸಲ್ಲಿಸಿ, ಮುಂದೆಯೂ ಇದೇ ರೀತಿ ಸಂಸ್ಥೆಯ ಕಾರ್ಯಕಲಾಪಗಳಲ್ಲಿ ಭಾಗಿಯಾಗಿ ಸಹಕರಿಸಬೇಕು. ಕ್ರೀಡಾಕೂಟದಲ್ಲಿ ಭಾಗವಹಿಸಿದ ಎಲ್ಲ ಸದಸ್ಯರನ್ನು ಹಾಗೂ ಮಕ್ಕಳನ್ನು ಅಭಿನಂದಿಸಿದರು.
ಬೆಳಗ್ಗೆ ಉದ್ಯಮಿ ದಯಾನಂದ ಶೆಟ್ಟಿ ಕೆರಮಾ ಮಾಗಂದಾಡಿ ಇವರು ದೀಪಪ್ರಜ್ವಲಿಸಿ ಬಲೂನ್ ಹಾರಿಸಿ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ವಯೋಮಿತಿಗೆ ಅನುಗುಣವಾಗಿ ವಿವಿಧ ಆಟೋಟ ಸ್ಪರ್ಧೆಗಳು ನಡೆದವು. ಮಹಿಳೆಯರ ತ್ರೋಬಾಲ್, ಪುರುಷರಿಗೆ ಕ್ರಿಕೆಟ್ ಪಂದ್ಯಾಟ ನಡೆಯಿತು.
ತ್ರೋಬಾಲ್‌ನಲ್ಲಿ 7 ತಂಡಗಳು ಭಾಗವಹಿಸಿದ್ದು, ಸುಜಾತಾ ನೈನ್ ತಂಡ ಪ್ರಥಮ, ಪುರುಷರ ಕ್ರಿಕೆಟ್‌ನಲ್ಲಿ 7 ತಂಡಗಳು ಭಾಗವಹಿಸಿದ್ದು, ಹರೀಶ್ ಕಾಪು ಇಲೆವೆನ್ ತಂಡ ಪ್ರಥಮ ಬಹುಮಾನ ಪಡೆಯಿತು. ವಿಜೇತ ಸ್ಪರ್ಧಿಗಳನ್ನು ಗಣ್ಯರು ಬಹುಮಾನ ವಿತರಿಸಿ ಶುಭಹಾರೈಸಿದರು. ಗಣ್ಯರನ್ನು ಸಂಸ್ಥೆಯ ವತಿಯಿಂದ ಗೌರವಿಸಲಾಯಿತು.
ಶೈಲೇಶ್ ಶೆಟ್ಟಿ, ವಿನಯ್ ಶೆಟ್ಟಿ, ಸತೀಶ್ ಶೆಟ್ಟಿ, ಪ್ರಸಾದ್ ಹೆಗ್ಡೆ, ರಮಾನಂದ ಶೆಟ್ಟಿ, ನಿತಿನ್ ಶೆಟ್ಟಿ, ಧೀರಜ್ ಶೆಟ್ಟಿ, ಕಿಶೋರ್ ಶೆಟ್ಟಿ, ವಿಜಯಲಕ್ಷ್ಮೀ ಡಿ. ಶೆಟ್ಟಿ, ಸುಜಾತಾ ಶೆಟ್ಟಿ, ಪ್ರತಿಭಾ ಶೆಟ್ಟಿ, ಸುಲೋಚನಾ ಶೆಟ್ಟಿ, ವನಿತಾ ಶೆಟ್ಟಿ, ಸುನೀತಾ ಶೆಟ್ಟಿ, ರೇಖಾ ಶೆಟ್ಟಿ ಹಾಗೂ ಯುವ ವಿಭಾಗದ ಸದಸ್ಯರು, ಮಹಿಳಾ ವಿಭಾಗದ ಸದಸ್ಯೆಯರು, ಪದಾಧಿಕಾರಿಗಳು ಸಹಕರಿಸಿದರು.
ಕಾರ್ಯದರ್ಶಿ ಹರ್ಷಕುಮಾರ್ ಡಿ. ಶೆಟ್ಟಿ ಸ್ವಾಗತಿಸಿದರು. ಜತೆ ಕಾರ್ಯದರ್ಶಿ ಅನಿಲ್ ಆರ್. ಶೆಟ್ಟಿ ವಂದಿಸಿದರು. ಶುಭದೀಪ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರ. ವೇದಿಕೆಯಲ್ಲಿ ಸಂಚಾಲಕ ಶಿರ್ಲಾಲ್ ದಿವಾಕರ ಶೆಟ್ಟಿ, ಉಪಾಧ್ಯಕ್ಷ ಮನ್ಮಥ ಕಡಂಬ, ಕೋಶಾಧಿಕಾರಿ ರಮೇಶ್ ಎ. ಶೆಟ್ಟಿ, ಮಹಿಳಾ ವಿಭಾಗದ ಸುಮತಿ ಆರ್. ಶೆಟ್ಟಿ ಉಪಸ್ಥಿತರಿದ್ದರು.