ಜೂ. 30 ರಂದು ವಿಕ್ರೋಲಿ ಪೂರ್ವದ ವಿಕೇಸ್ ಇಂಗ್ಲಿಷ್ ಹೈಸ್ಕೂಲ್ ಸಭಾಗೃಹದಲ್ಲಿ ಬಂಟರ ಸಂಘ ಮುಂಬಯಿ ಕುರ್ಲಾ-ಭಾಂಡೂಪ್ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಕ್ಯಾನ್ಸರ್ ಮತ್ತು ಸ್ತ್ರೀ ಸಂಬಂಧಿ ರೋಗಗಳ ಬಗ್ಗೆ ಜಾಗೃತಿ ಹಾಗೂ ಮಾಹಿತಿ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿ, ಸ್ಥಳೀಯ ಸಮಿತಿಯ ಕಾರ್ಯವೈಖರಿಯನ್ನು ಅಭಿನಂದಿಸಿದರು.
Advertisement
ಪ್ರಾರಂಭದಲ್ಲಿ ಬಂಟರ ಸಂಘ ಮುಂಬಯಿ ಕುರ್ಲಾ-ಭಾಂಡೂಪ್ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ರಮ್ಯಾ ಉದಯ್ ಶೆಟ್ಟಿ ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ. ಇಂದಿನ ವೈಜ್ಞಾನಿಕ ಯುಗದಲ್ಲಿ ನೆಮ್ಮದಿಯ ಜೀವನ ನಡೆಸಬೇಕಾದರೆ, ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಮಾತ್ರವಲ್ಲದೆ, ಆರೋಗ್ಯದ ದೃಷ್ಟಿಯಿಂದಲೂ ಗಮನ ನೀಡಬೇಕು. ಆರೋಗ್ಯವೇ ಭಾಗ್ಯ ಎನ್ನುವ ಮಾತಿನಂತೆ ನಾವು ಕೇವಲ ಅನಾರೋಗ್ಯವಿದ್ದಾಗ ಮಾತ್ರ ಆಸ್ಪತ್ರೆಗೆ ತೆರಳಿ ತಪಾಸಣೆಯೊಂದಿಗೆ ಚಿಕಿತ್ಸೆ ಮಾಡುವ ಬದಲು ಸಮಯ ಸಮಯಕ್ಕೆ ಸರಿಯಾಗಿ ಸ್ತ್ರೀ ಸಂಬಂಧಿ ರೋಗಗಳ ಬಗ್ಗೆ ತಜ್ಞ ವೈದ್ಯರ ಬಳಿ ತೆರಳಿ ತಪಾಸಣೆಗೈದು ಮಾಹಿತಿ ಪಡೆಯಬೇಕು. ಈ ನಿಟ್ಟಿನಲ್ಲಿ ಜನಜಾಗೃತಿ ಮೂಡಿಸಲು ಇಂತಹ ಶಿಬಿರವನ್ನು ಆಯೋಜಿಸಿದ್ದೇವೆ. ಸಮಿತಿಯ ಸರ್ವರ ಸಹಕಾರ, ಪ್ರೋತ್ಸಾಹದಿಂದ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಲು ಸ್ಫೂರ್ತಿಯಾಗುತ್ತದೆ. ಸಮಾಜ ಬಾಂಧವರೆಲ್ಲರೂ ಇದರ ಸದುಪಯೋಗವನ್ನು ಪಡೆಯಬೇಕು ಎಂದರು.
Related Articles
ಕಾರ್ಯಕ್ರಮದಲ್ಲಿ ಉದಯ್ ಶೆಟ್ಟಿ ಪೇಜಾವರ, ನವೀನ್ ಶೆಟ್ಟಿ ಇನ್ನಬಾಳಿಕೆ, ಸೀತಾರಾಮ್ ಶೆಟ್ಟಿ, ಹರೀಶ್ ಶೆಟ್ಟಿ, ಪ್ರವೀಣ್ ಕೆ. ಶೆಟ್ಟಿ, ಶರಣ್ ಯು. ಶೆಟ್ಟಿ, ಕುಸುಮಾ ಚಂದ್ರಶೇಖರ್ ಪಾಲೆತ್ತಾಡಿ, ವಿನುತಾ ಶೆಟ್ಟಿ, ಮಲ್ಲಿಕಾ ಶೆಟ್ಟಿ, ಜ್ಯೋತಿ ಶೆಟ್ಟಿ, ಸರಿತಾ ಶೆಟ್ಟಿ, ಯಶೋದಾ ಶೆಟ್ಟಿ, ಶಾಂತಾ ಎನ್. ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದು ಸಹಕರಿಸಿದರು. ರಂಗನಿರ್ದೇಶಕ ನಾರಾಯಣ ಶೆಟ್ಟಿ ನಂದಳಿಕೆ ನಿರ್ವಹಿಸಿದರು. ಸಂಗೀತಾ ಎ. ಶೆಟ್ಟಿ ವಂದಿಸಿದರು.
Advertisement
ವಿಕ್ರೋಲಿ ಪರಿಸರದ ನಮ್ಮ ಸಂಘದಲ್ಲಿ ತುಳು-ಕನ್ನಡಿಗರಿಗಾಗಿ ಉತ್ತಮ ಕಾರ್ಯಗಳು ನಿರಂತರ ನಡೆಯುತ್ತಿರಲಿ. ನಮ್ಮ ಸಹಕಾರ, ಪ್ರೋತ್ಸಾಹ ಸದಾಯಿರಲಿ. ರೋಗಮುಕ್ತ ಆರೋಗ್ಯವಂತ ಸಮಾಜ ನಮ್ಮದಾಗಲಿ. ನಾಗರಿಕರಿಗೆ ರಕ್ಷಣೆ ನೀಡುವುದು ದೇಶ ಆಳುವವರ ಕರ್ತವ್ಯವೂ ಹೌದು. ಮಹಿಳೆಯರು ಆರೋಗ್ಯದೆಡೆಗೆ ಹೆಚ್ಚಿನ ಗಮನ ಹರಿಸಬೇಕು. ಸಂಸ್ಕೃತಿ-ಸಂಸ್ಕಾರಗಳ ಉಳಿವಿನೊಂದಿಗೆ ಮಹಿಳೆಯರು ಕುಟುಂಬ ಸದಸ್ಯರ ಆರೋಗ್ಯದೊಂದಿಗೆ ತಮ್ಮ ಆರೋಗ್ಯ ಕಾಪಾಡುವತ್ತ ಮುಂದಾಗಬೇಕು– ಶ್ಯಾಮ್‌ಸುಂದರ್ ಶೆಟ್ಟಿ (ಅಧ್ಯಕ್ಷರು: ವಿಕ್ರೋಲಿ ಕನ್ನಡ ಸಂಘ). ಸಮಿತಿಯ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ರಮ್ಯಾ ಉದಯ್ ಶೆಟ್ಟಿ ಅವರ ನೇತೃತ್ವದಲ್ಲಿ ಸಮಾಜಪರ ಉತ್ತಮ ಕಾರ್ಯಕ್ರಮಗಳು ನಡೆಯುತ್ತಿದ್ದು, ಪ್ರತಿಯೊಂದು ಕಾರ್ಯಕ್ರಮಕ್ಕೂ ಎಲ್ಲರ ಸಹಕಾರ ಅಗತ್ಯ. ಪ್ರತಿಯೊಬ್ಬರೂ ತಮ್ಮಲ್ಲಿ ಯಾವುದೇ ಕಾಯಿಲೆಗಳ ಮುನ್ಸೂಚನೆ ಕಂಡು ಬಂದಲ್ಲಿ ಅದನ್ನು ನಿರ್ಲಕ್ಷಿಸದೆ ಕೂಡಲೇ ಸಂಬಂಧಿತ ತಜ್ಞ ವೈದ್ಯರನ್ನು ಭೇಟಿಯಾಗಿ ಚಿಕಿತ್ಸೆ ಪಡೆಯಬೇಕು
– ಸಿಎ ವಿಶ್ವನಾಥ ಶೆಟ್ಟಿ (ಕಾರ್ಯಾಧ್ಯಕ್ಷರು: ಬಂಟರ ಸಂಘ ಕುರ್ಲಾ-ಭಾಂಡೂಪ್).