Advertisement

Bullet Train: ಮೊದಲ ಟನೆಲ್‌ ಪೂರ್ಣ ಪೂರ್ಣ

09:42 PM Oct 06, 2023 | Team Udayavani |

ಗಾಂಧೀನಗರ: ಮುಂಬೈ-ಅಹ್ಮದಾಬಾದ್‌ ಮಾರ್ಗದಲ್ಲಿ ನಿರ್ಮಾಣಗೊಳ್ಳುತ್ತಿರುವ ದೇಶದ ಮೊಟ್ಟ ಮೊದಲ ಹೈ ಸ್ಪೀಡ್‌ ರೈಲ್‌ (ಬುಲೆಟ್‌ ಟ್ರೈನ್‌) ಕಾರಿಡಾರ್‌ನಲ್ಲಿ 350ಮೀಟರ್‌ ಉದ್ದದ ಮೊದಲ ಸುರಂಗ ಮಾರ್ಗದ ಅಭಿವೃದ್ಧಿ ಪೂರ್ಣಗೊಳಿಸಲಾಗಿದೆ. ಹೀಗೆಂದು ನ್ಯಾಷನಲ್‌ ಹೈ ಸ್ಪೀಡ್‌ ರೈಲ್‌ ಕಾರ್ಪೋರೇಷನ್‌ ಲಿಮಿಟೆಡ್‌ (ಎನ್‌ಎಚ್‌ಎಸ್‌ಆರ್‌ಸಿಎಲ್‌) ತಿಳಿಸಿದೆ.

Advertisement

ಗುಜರಾತ್‌ನ ವಲ್ಸಾದ್‌ ಜಿಲ್ಲೆಯ ಜರೋಲಿ ಗ್ರಾಮದಲ್ಲಿ ಸುರಂಗ ಕೊರೆಯಲಾಗಿದ್ದು, ಇದು ಪ್ರತಿಗಂಟೆಗೆ 350 ಕಿ.ಮೀ.ವೇಗದಲ್ಲಿ ಬುಲೆಟ್‌ ರೈಲು ಹಾದುಹೋಗಲಿರುವ ಮೊದಲ ಸುರಂಗಮಾರ್ಗ ವಾಗಿರಲಿದೆ. ಒಂದು ವರ್ಷದಿಂದ ಈ ಸುರಂಗ ನಿರ್ಮಾಣ ಕಾರ್ಯದಲ್ಲಿ ಸಿಬ್ಬಂದಿ ತೊಡಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next