Advertisement

Bulldozer ನ್ಯಾಯ ಎಂಬುದು ನೆಲದ ಕಾನೂನಿನ ನಾಶ: ಸುಪ್ರೀಂ

12:38 AM Sep 14, 2024 | Team Udayavani |

ಹೊಸದಿಲ್ಲಿ: ಸರಕಾರಗಳು ನ್ಯಾಯ ಒದಗಿಸಲು ಬುಲ್ಡೋಜರ್‌ಗಳನ್ನು ಬಳಸುತ್ತಿರುವುದು ನೆಲದ ಕಾನೂನನ್ನು ನಾಶ ಮಾಡಿದಂತೆ ಎಂದು ಸುಪ್ರೀಂ ಕೋರ್ಟ್‌ ಅಭಿಪ್ರಾಯಪಟ್ಟಿದೆ. ಇದೇ ಮೊದಲ ಬಾರಿಗೆ ಒಂದೇ ತಿಂಗಳಿನಲ್ಲಿ 2 ಬಾರಿ ಸುಪ್ರೀಂ ಕೋರ್ಟ್‌ ಈ ವಿಷಯ ಪ್ರಸ್ತಾವಿಸಿದೆ. ಬುಲ್ಡೋಜರ್‌ ಹತ್ತಿಸುವುದಾಗಿ ಬೆದರಿಕೆ ಒಡ್ಡಲಾಗಿದೆ ಎಂದು ಗುಜರಾತ್‌ನ ಕುಟುಂಬವೊಂದು ಸಲ್ಲಿಸಿದ್ದ ಅರ್ಜಿ ವಿಚಾರಣೆಯ ಸಮಯದಲ್ಲಿ ಸುಪ್ರೀಂ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

Advertisement

ಅರ್ಜಿದಾರರ ಪರವಾಗಿ ಹಾಜರಾಗಿದ್ದ ವಕೀಲ ಎಲ್ಲವೂ ಸರಿಯಿದ್ದರೂ ಸಹ ಬುಲ್ಡೋಜರ್‌ ಹತ್ತಿಸುವುದಾಗಿ ಬೆದರಿಕೆ ಒಡ್ಡಲಾಗುತ್ತಿದೆ ಎಂದು ಕೋರ್ಟ್‌ಗೆ ಮನವರಿಕೆ ಮಾಡಿಕೊಟ್ಟರು. ಈ ಅರ್ಜಿಯನ್ನು ಪುರಸ್ಕರಿಸಿದ ಕೋರ್ಟ್‌ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next