ಕ್ರಿಕೆಟ್ ಪಂದ್ಯಾವಳಿ ನಡೆಯುವ ವೇಳೆ ಇದ್ದಕಿದ್ದಂತೆ ಗೂಳಿಯೊಂದು ಮೈದಾನಕ್ಕಿಳಿದು ಅಲ್ಲಿದ್ದ ಪ್ರತಿಯೊಬ್ಬರನ್ನು ಅಟ್ಟಾಡಿಸಿಕೊಂಡು ಹೋಗಿದೆ ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಇಂದು (ಮಂಗಳವಾರ) ಮಧ್ಯಾಹ್ನ ಸಮೀರ್ ಎಂಬವರ ಟ್ವಿಟರ್ ಖಾತೆಯಲ್ಲಿ ಹಾಕಲಾದ ವಿಡಿಯೋ ಸುಮಾರು ಇಪ್ಪತ್ತು ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಣೆ ಮಾಡಿದ್ದಾರೆ. ಕ್ರಿಕೆಟ್ ಪಂದ್ಯಾವಳಿ ಎಲ್ಲಿ ನಡೆದಿದ್ದು ಎಂಬುದು ಗೊತ್ತಿಲ್ಲ ಆದರೆ ನೆಟ್ಟಿಗರು ಭಿನ್ನ ಭಿನ್ನ ಹಾಸ್ಯಾಸ್ಪದ ಕಾಮೆಂಟ್ಸ್ ಮಾಡಿದ್ದಾರೆ.
ವಿಡಿಯೋದಲ್ಲಿ ಎರಡು ಗೂಳಿಗಳು ಕಾದಾಡಿಕೊಂಡಿದೆ ಬಳಿಕ ಎರಡೂ ಕ್ರಿಕೆಟ್ ಪಂದ್ಯಾವಳಿ ನಡೆಯುತ್ತಿದ್ದ ಮೈದಾನದ ಬಳಿಗೆ ಬಂದಿದೆ ಈ ವೇಳೆ ಒಂದು ಗೂಳಿ ಮೈದಾನಕ್ಕಿಳಿದು ಅಲ್ಲಿದ್ದ ಆಟಗಾರರನ್ನು ಬೆನ್ನಟ್ಟಿದೆ ಈ ವೇಳೆ ಆಟಗಾರರು ಬದುಕಿದೆಯಾ ಬಡ ಜೀವ ಎಂದು ಎದ್ನೋ ಬಿದ್ನೋ ಎಂದು ಓಡತೊಡಗಿದ್ದಾರೆ.
ಘಟನೆಯಲ್ಲಿ ಯಾವುದೇ ಅಪಾಯ ಉಂಟಾಗಿಲ್ಲ ಎಂದು ನಾವು ಭಾವಿಸುತ್ತೇವೆ.