Advertisement
ಹೊಳೆಯಲ್ಲಿ ಮಳೆಗಾಲದಲ್ಲಿ ನೀರು ಹೆಚ್ಚು ಇತ್ತು. ಇಲ್ಲಿನ ಸ್ಥಳೀಯ ನಿವಾಸಿಗಳು ಸುತ್ತುಬಳಸಿ ಪಳ್ಳತ್ತೂರಿಗೆ ಬರಬೇಕಾಗಿತ್ತು. ಇದೀಗ ನೀರಿನ ಹರಿವು ಕಡಿಮೆ ಇರುವುದರಿಂದ ಸ್ಥಳೀಯರು ನಾಲ್ಕು ಅಡಿಕೆ ಮರವನ್ನು ಅಡ್ಡ ಹಾಕಿ ಪಾಲವನ್ನು ನಿರ್ಮಿಸಿದ್ದಾರೆ. ಕಬ್ಬಿಣದ ಸರಳನ್ನು ಉಪಯೋಗಿಸಿಕೊಂಡು ಹಿಡಿದುಕೊಂಡು ಹೋಗುವಂತೆ ಸರಳನ್ನು ಆಳವಡಿಸಿದ್ದಾರೆ. ಇದರ ಮೂಲಕ ಸಾರ್ವಜನಿಕರು ಸಂಚರಿಸುತ್ತಿದ್ದಾರೆ. ಹೊಳೆಯಲ್ಲಿ ಎಪ್ರಿಲ್, ಮೇ ತಿಂಗಳಲ್ಲಿ ನೀರು ಇಂಗುವುದರಿಂದ ಆನಂತರ ಮಾರ್ಗ ಮಾಡಿ ಸಂಚ ರಿಸಲು ಸಾಧ್ಯವಾಗಬಹುದು ಎಂದು ಸ್ಥಳೀಯರು ಹೇಳುತ್ತಾರೆ.
ಪಳ್ಳತ್ತೂರು ಪ್ರದೇಶದಿಂದ ಸೇತುವೆ ಇದ್ದರೆ ಕೊಟ್ಯಾಡಿಗೆ ಕೇವಲ ಒಂದು ಕಿ.ಮೀ. ಆಗುತ್ತದೆ. ಆದರೆ ಈಗ ಸೇತುವೆ ಕಾಮಗಾರಿ ನಡೆಯುತ್ತಿರುವುದರಿಂದ ವಾಹನದಲ್ಲಿ ಹೋಗುವುದಾದರೆ ಪಂಚೋಡಿ, ಕರ್ನೂರು, ಗಾಳಿಮುಖವಾಗಿ ಕೊಟ್ಯಾಡಿಗೆ ಬರಬೇಕಾಗುತ್ತದೆ. ಅದು 8 ಕಿ.ಮೀ. ದೂರದ ದಾರಿ. ಪಾಲ ರಚಿಸಿರುವುದರಿಂದ ಒಂದು ಕಿ.ಮೀ. ದೂರ ನಡೆದುಕೊಂಡು ಹೋದರೆ ಅಲ್ಲಿ ತಲುಪಬಹುದಾಗಿದೆ.
Related Articles
ಅಡಿಕೆ ಮರವನ್ನು ಉಪಯೋಗಿಸಿ ಕಾಲು ಸಂಕ (ಪಾಲ, ಪಾಪು) ಮಾಡಲಾಗಿದೆ. ಇದರಲ್ಲಿ ನಡೆದುಕೊಂಡು ಹೋದರೆ ಪಳ್ಳತ್ತೂರಿಗೆ ಕೇವಲ 10 ನಿಮಿಷ ಸಾಕಾಗುತ್ತದೆ. ಇಲ್ಲದಿದ್ದರೆ ಸುಮಾರು 8 ಕಿ.ಮೀ. ದೂರ ಸುತ್ತು ಬಳಸಿ ಹೋಗಬೇಕಾಗುತ್ತದೆ. ಇದರಿಂದ ಸಮಯ, ಹಣ ಉಳಿತಾಯವಾಗುತ್ತದೆ.
– ಪ್ರವೀಶ್ ಸ್ಥಳೀಯ ನಿವಾಸಿ
Advertisement
ಶೀಘ್ರ ಮುಗಿಸಿಸೇತುವೆ ಕಾಮಗಾರಿ ಆರಂಭವಾದ ಕಾರಣ ಬಾಡಿಗೆ ಕಡಿಮೆಯಾಗಿದೆ. ಪಳ್ಳತ್ತೂರಿನಿಂದ ಕೊಟ್ಯಾಡಿಗೆ ಹೋಗುವವರು ನಡೆದುಕೊಂಡು ಹೋಗುತ್ತಾರೆ. ಕೆಲವರು ಮಾತ್ರ ವಾಹನವನ್ನು ಅವಲಂಬಿಸಿದ್ದಾರೆ. ಸೇತುವೆ ಕಾಮಗಾರಿ ವೇಗವಾಗಿ ನಡೆದು ಸಂಚಾರಕ್ಕೆ ಅನುವು ಮಾಡಿಕೊಡಬೇಕು.
- ಮೊಯಿದಿನ್ ವಾಹನ ಚಾಲಕ ಮಾಧವ ನಾಯಕ್ ಕೆ.