Advertisement

ಗುಣಮಟ್ಟದ ರಸ್ತೆ ನಿರ್ಮಿಸಿ

05:31 PM Mar 08, 2018 | Team Udayavani |

ಶಹಾಪುರ: ಸಾರ್ವಜನಿಕರ ಬಳಕೆ ವ್ಯಾಪ್ತಿ ಬರುವ ರಸ್ತೆಗಳು ಸಂಚಾರಕ್ಕೆ ಅನುಕೂಲ ಆಗಿರಬೇಕು. ಆ ನಿಟ್ಟಿನಲ್ಲಿ
ರಸ್ತೆ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕು. ಅದಕ್ಕೆ ಬಡಾವಣೆಯ ಸರ್ವರ ಕಾಳಜಿ ಅಗತ್ಯ ಎಂದು ಶಾಸಕ ಗುರು ಪಾಟೀಲ್‌ ಶಿರವಾಳ ಹೇಳಿದರು.

Advertisement

ನಗರದ ಹಳಿಪೇಟೆಯಲ್ಲಿ ಹೆಚ್‌ಕೆಆರ್‌ಡಿಬಿ ಯೋಜನೆಯಡಿ 23 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣ ಆಗಲಿರುವ ಸಿ.ಸಿ. ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

ನಗರದದ ಎಲ್ಲಾ ಬಡಾವಣೆಗಳಲ್ಲಿ ಕುಡಿಯುವ ನೀರು ಸೇರಿದಂತೆ, ರಸ್ತೆ, ಚರಂಡಿ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದ್ದು, ಅವುಗಳ ಅಧಿಕ ಬಾಳಿಕೆ ಬರುವಂತೆ ಎಚ್ಚರಿಕೆ ವಹಿಸುವುದು ಗುತ್ತಿಗೆದಾರ ಸೇರಿದಂತೆ ನಮ್ಮೆಲ್ಲರ ಕರ್ತವ್ಯವಾಗಿದೆ. ನಗರದ 23 ವಾರ್ಡ್‌ಗಳಿಗೂ ಮೂಲ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಅಗತ್ಯ ಕಾಮಗಾರಿ
ಮಾಡಲಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ನಗರಸಭೆ ಉಪಾಧ್ಯಕ್ಷ ಡಾ| ಬಸವರಾಜ, ನಗರಸಭೆ ಸದಸ್ಯ ಬಸವರಾಜ ಆನೇಗುಂದಿ, ವಸಂತ ಸುರಪುರಕರ್‌, ಚಾಂದ ಪಾಶಾ, ಲಾಲಅಹ್ಮದ ಖುರೇಶಿ, ಪ್ರಮುಖರಾದ ಅನಂತರಾವ್‌ ದೇಶಪಾಂಡೆ, ವಿಠಲಾಚಾರ್ಯ, ಬಸವರಾಜ ಯಂಕಂಚಿ, ಬಸವರಾಜ ವಗ್ಗನವರ, ಮುದಕಪ್ಪ ಜಂಗಳಿ, ಮಧ್ವಾಚಾರ್ಯ ಸಗರ, ಕಲ್ಲಪ್ಪ ಮಾಳಗಿ, ಮುರಳಿಧರ ಸುಂಬಡ, ಸಣ್ಣ ಮಾನಯ್ಯ, ನಯ್ಯೂಮ್‌ ಅಫಗಾನ, ಯುಸೂಫ್‌ ಜಾನಿ, ಶಕೀಲ ಸಾಹೇಬ, ಶಕೀಲ ಇನಾಂದಾರ, ಅಮೃತ ಹೂಗಾರ, ಮಲ್ಲಿಕಾರ್ಜುನ ಹೂಗಾರ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next