Advertisement
ಶನಿವಾರ ತಾಲೂಕಿನ ವರ್ಗಾಸರ ಅಭಿನವ ರಂಗ ಮಂದಿರದಲ್ಲಿ ಸಿದ್ದಾಪುರದ ಶ್ರೀಅನಂತ ಕ್ಷಿತಿಜ ಪ್ರತಿಷ್ಠಾನವು ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಭಾಗಿತ್ವದಲ್ಲಿ ಹಮ್ಮಿಕೊಂಡ ಅನಂತೋತ್ಸವ 2022 ರಲ್ಲಿ ವಿ.ಉಮಾಕಾಂತ ಭಟ್ಟ ಕೆರೇಕೈ ಅವರಿಗೆ ಅನಂತ ಶ್ರೀ ಪ್ರಶಸ್ತಿ ಪ್ರದಾನ ನೆರವೇರಿಸಿ ಮಾತನಾಡಿದರು.
Related Articles
Advertisement
ಕರ್ನಾಟಕ ವಿಧಾನ ಸಭೆ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ಯಾವ ನಾಡು ಸಮೃದ್ದ ಸಾಹಿತ್ಯ, ಕಲೆಯ ಆರಾಧನೆ ಪರಿಣಾಮಕಾರಿಯಾಗಿ ನಡೆಯಬೇಕು. ಆಗ ಸಮಾಜಕ್ಕೆ ದು ಸಂಸ್ಕಾರ ಸಿಗುತ್ತದೆ. ಕಲೆ, ಸಂಸ್ಕೃತಿ ಉಳಿವಿಗೆ ಇಂಥ ಕಾರ್ಯ ಆಗಬೇಕು. ಜೀವನೋತ್ಸಾಹ ಇಟ್ಟು ಕೆಲಸ ಮಾಡಬೇಕು. ಕೆರೇಕೈ ಅವರು ರಾಜ್ಯ, ರಾಷ್ಟ್ರ ಮಟ್ಟದ ವಿದ್ವಾಂಸರು. ಯುವ ಪೀಳಿಗೆಯನ್ನು ಕಲೆ, ಸಂಸ್ಕೃತಿ ಉಳಿಸಿಕೊಳ್ಳುವ ಆಗಬೇಕು. ಯಕ್ಷಗಾನ, ತಾಳಮದ್ದಲೆ ಸಂಸ್ಕಾರ ರೀತಿಯ ಕಲೆ. ಈ ಕಲೆ ಯುವಕರ ನಡುವೆ ಬರಬೇಕು. ಸರಕಾರ ಕೂಡ ಇನ್ನಷ್ಟು ಪೂರಕ ಪ್ರೋತ್ಸಾಹ ಮಾಡಬೇಕು ಎಂದರು.
ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ಜಿ.ಎಲ್.ಹೆಗಡ ಕುಮಟಾ ಮಾತನಾಡಿ,ಕೆರೇಕೈ ಅವರು ಆಡಿದ ನೆಲದಲ್ಲಿ ಈ ಪ್ರಶಸ್ತಿ ಪಡೆಯುವದು ಪದ್ಮಶ್ರೀ ಗಿಂತ ದೊಡ್ಡದು. ಕೆರೇಕೈ ಅವರ ಕೊಡುಗೆ ಈ ಕ್ಷೇತ್ರಕ್ಕೆ ದೊಡ್ಡದು ಎಂದ ಅವರು, ಯಕ್ಷಗಾನ ನಮ್ಮ ಜಿಲ್ಲೆಯ ಕೊಡುಗೆ. ಯಕ್ಷಗಾನ ವಿಸ್ತರಣೆ ಆಗಬೇಕು. ಸಾಹಿತ್ಯ ಸಮ್ಮೇಳನದ ಮಾದರಿಯಲ್ಲಿ ಯಕ್ಷಗಾನ ಸಮ್ಮೇಳನ ಆಗುತ್ತಿದೆ. ಸಮ್ಮೇಳನ ಎಲ್ಲಿ ಎಂಬ ಚರ್ಚೆ ನಡೆದಿದೆ ಎಂದರು.
ಸೆಲ್ಕೋ ಇಂಡಿಯಾ ಸಿಇಓ ಮೋಹನ ಹೆಗಡೆ ಹೆರವಟ್ಟ ಮಾತನಾಡಿ, ಶೀಲ ಸಂಸ್ಕೃತಿ ಉಳಿಸಿಕೊಂಡವರು, ಸೂಕ್ಷ್ಮ ಸಂವೇದಿ ಕಲಾವಿದರು ಕೆರೇಕೈ ಅವರು. ನೆನಪಿಡುವ ಸಾವಿರ ಮಾತುಗಳನ್ನು ಆಡುವ ಅನಂತ ಹೆಗಡೆ ಅವರು. ರಂಗ ಸ್ಥಳದಲ್ಲಿ ಹಾಡುಗಾರಿಕೆ, ನರ್ತನಗಾರಿಕೆ ಅಪಭ್ರಂಶ ಆದಂತೆ ಅರ್ಥಗಾರಿಕೆ ಕೂಡ ಅಪಭ್ರಂಶ ಆಗಿದೆ ಎಂದು ಆತಂಕಿಸಿದ ಅವರು ಸೂಕ್ಷ್ಮ ಸಂವೇದಿ ಕಲಾವಿದರು. ಸಂಸ್ಕಾರ, ಅಧ್ಯಯನ ಶೀಲತೆ ಮಾಡಿದವರು. ಸೂಕ್ಷ್ಮ ಸಂವೇದಿ ಆಗದೇ ಇದ್ದರೆ ಕಲಾವಿದರೇ ಆಗೋದಿಲ್ಲ ಎಂದರು.
ವಿದ್ವಾನ್ ದತ್ತಮೂರ್ತಿ ಭಟ್ಟ ಶಿವಮೊಗ್ಗ, ಉಮಾಕಾಂತ ಭಟ್ಟ ಅವರು ಎಂಬ ಶ್ರೆಷ್ಠ ರತ್ನವು ಕೊಳಗಿ ಅನಂತಣ್ಣ ಅವರ ಚೌಕಟ್ಟಿನಿಂದ ಶೋಭಿತವಾಗಿದೆ ಎಂದರು.
ಕಲಾ ಪೋಷಕ ವರ್ಗಾಸರದ ಆರ್.ಜಿ.ಭಟ್ಟ, ಕೆರೇಕೈ ಅವರಿಗೆ ಪ್ರಶಸ್ತಿ ವರ್ಗಾಸರ, ಪುಟ್ಟಣಮನೆಯಲ್ಲಿ ನಡೆಸುವದು ಹೆಮ್ಮೆ ಎಂದರು. ಪ್ರತಿಷ್ಠಾನದ ಅಧ್ಯಕ್ಷ ವಿ.ಎಂ.ಭಟ್ಟ ಕೊಳಗಿ ಅಧ್ಯಕ್ಷತೆವಹಿಸಿದ್ದರು.
ಹರ್ಷಿತಾ ಹೆಗಡೆ, ಆದಿತ್ಯ ಹೆಗಡೆ, ಅನಿಶಾ ಹೆಗಡೆ ಪ್ರಾರ್ಥಿಸಿದರು. ರಾಜೇಂದ್ರ ಕೊಳಗಿ, ಶಂಕರ ಭಾಗವತ್ ಸಹಕಾರ ನೀಡಿದರು. ಜಿ.ಕೆ.ಭಟ್ಟ ಕಶಿಗೆ ಸ್ವಾಗತಿಸಿದರು. ಪ್ರತಿಷ್ಠಾನ ಕಾರ್ಯದರ್ಶಿ ಕೇಶವ ಹೆಗಡೆ ಕೊಳಗಿ ಪ್ರಾಸ್ತಾವಿಕ ಮಾತನಾಡಿದರು. ರಾಘವೇಂದ್ರ ಬೆಟ್ಟಕೊಪ್ಪ ನಿರ್ವಹಿಸಿದರು.