Advertisement

ಗುಣಮಟ್ಟದ ರಸ್ತೆ ನಿರ್ಮಾಣ ಮಾಡಿ

05:54 AM May 24, 2020 | Lakshmi GovindaRaj |

ಆನೇಕಲ್‌: ಕನಕಪುರದಿಂದ ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ  ಪೆರಿಫೆರಲ್‌ರಿಂಗ್‌ ರೋಡ್‌ ರಾಷ್ಟ್ರೀಯ ಹೆದ್ದಾರಿ ಗುಣಮಟ್ಟದಂತೆ ಇರಬೇಕಿದ್ದು ತ್ವರಿತಗತಿಯಲ್ಲಿ ಕೆಲಸ ಮಾಡಲು  ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಡಿಸಿಎಂ ಗೋವಿಂದ ಕಾರಜೋಳ ತಿಳಿಸಿದರು. ಪಟ್ಟಣದ ಪರಿವೀಕ್ಷಣಾ ಮಂದಿರದಲ್ಲಿ ಅಧಿಕಾರಿಗಳ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

Advertisement

ರಾಷ್ಟ್ರೀಯ ಹೆದ್ದಾರಿ  ನಿರ್ಮಾಣ ಮಾಡುವ ವೇಳೆ ನಿಯಮಗಳಿರುತ್ತವೆ. ಅದೇ ಮಾದರಿಯಲ್ಲಿ ಎಲ್ಲಾ ರಿಂಗ್‌ ರೋಡ್‌ ಗುಣಮಟ್ಟ ಕಾಪಾಡಿಕೊಳ್ಳಿ ಎಂದರು. ಕೊರೊನಾ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಸತತ 2ತಿಂಗಳ ಕಾಲ ಕೆಲಸಗಳು ಸ್ಥಗಿತವಾಗಿದ್ದು ಕೂಡಲೇ  ಕಾರ್ಮಿಕರನ್ನು ಕರೆತಂದು ಕಾಮಗಾರಿ ಕೈಗೆತ್ತಿಕೊಳ್ಳಿ ಎಂದು ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದರು.

ಶಾಸಕ ಬಿ.ಶಿವಣ್ಣ ಮಾತನಾಡಿ, ಪಟ್ಟಣದಲ್ಲಿ ನಿರ್ಮಾ ಣವಾಗುತ್ತಿರುವ ಅಂಬೇಡ್ಕರ್‌ ಭವನ ಕಟ್ಟಡಕ್ಕೆ ಜಿಲ್ಲಾಧಿಕಾರಿ  ಖಾತೆಯಿಂದ ಸಮಾಜ ಕಲ್ಯಾಣ ಇಲಾಖೆ ಕೂಡಲೇ ಹಣ ವರ್ಗಾಯಿಸಬೇಕು. ರಾಜ್ಯ ಸರ್ಕಾರ ದಿಂದ ಹೂ ಬೆಳೆಗಾರರಿಗೆ ಇನ್ನೂ ಹೆಚ್ಚು ಪರಿಹಾರ ನೀಡಬೇಕು, ನೇಕಾರರಿಗೆ ತಿಂಗಳಿಗೆ 10-15 ಸಾವಿರ ರೂ. ಸಹಾಯಧನ ನೀಡಬೇಕು, ಬಿಪಿಎಲ್‌  ಪಡಿತರ ಚೀಟಿ ಹೊಂದಿರುವವರಿಗೆ ತಿಂಗಳಿಗೆ 10 ಸಾವಿರ ರೂ. ನೀಡುವಂತೆ ಡಿಸಿಎಂ ಗೋವಿಂದ ಕಾರಜೋಳ ಅವರ ಬಳಿ ಮನವಿ ಮಾಡಲಾಗಿದೆ ಎಂದರು.

ಪುರಸಭಾ ಸದಸ್ಯರಾದ ಎನ್‌.ಎಸ್‌.ಪದ್ಮನಾಭ್‌, ಕೃಷ್ಣ, ರೈತ ಮುಖಂಡರಾದ  ದೊಡ್ಡ ಹಾಗಡ್ಡೆ ಹರೀಶ್‌ ಗೌಡ, ಅಶೋಕ್‌, ಮಧು, ಸುರೇಶ್‌, ಲೋಕೇಶ್‌, ಪ್ರಕಾಶ್‌, ಆನಂದ್‌ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next